Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು
ಹೊಸ ಕಾರುಗಳನ್ನು ಖರೀದಿಸುವ ಜನರು ಅವುಗಳನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ. ಹೊಸ ಕಾರುಗಳ ಮೇಲೆ ಸಣ್ಣ ಗೆರೆ ಬಿದ್ದರೂ ನಿರಾಶೆಯಾಗುವುದು ಸಹಜ. ಆದರೆ ಕೆಲ ನಿಮಿಷಗಳ ಹಿಂದಷ್ಟೇ ಖರೀದಿಸಿದ ಕೋಟಿ ಬೆಲೆ ಬಾಳುವ ಕಾರು ಅಪಘಾತಕ್ಕೀಡಾದರೆ ಏನಾಗುತ್ತದೆ ಎಂಬುದು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.

ಇಂಗ್ಲೆಂಡ್‌ನ ವೆಸ್ಟ್ ಯಾರ್ಕ್‌ಷೈರ್ ನಗರದ ವ್ಯಕ್ತಿಯೊಬ್ಬರು ಲ್ಯಾಂಬೋರ್ಗಿನಿ ಹುರಾಕನ್ ಸ್ಪೋರ್ಟ್ಸ್ ಕಾರ್ ಖರೀದಿಸಿದ್ದಾರೆ. ಖರೀದಿಸಿದ ಕೆಲ ನಿಮಿಷಗಳಲ್ಲೇ ಆ ಕಾರು ನುಜ್ಜುಗುಜ್ಜಾಗಿತ್ತು. ಕಾರು ಖರೀದಿಸಿ ಮನೆಗೆ ಹೋಗುವಾಗ ವ್ಯಾನ್ ಡಿಕ್ಕಿ ಹೊಡೆದ ಕಾರಣಕ್ಕೆ ಕಾರಿನ ಹಿಂಭಾಗವು ಸಂಪೂರ್ಣವಾಗಿ ಹಾಳಾಗಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಕಾರಿನ ಹಿಂಭಾಗದ ಬಲಗಡೆಯ ವ್ಹೀಲ್ ಪೂರ್ತಿಯಾಗಿ ಹೊರಬಂದಿದೆ. ಈ ಕಾರ್ ಅನ್ನು ಕೇವಲ 20 ನಿಮಿಷಗಳ ಹಿಂದಷ್ಟೇ ಶೋರೂಂನಿಂದ ಖರೀದಿಸಿದ್ದಾಗಿ ಲ್ಯಾಂಬೋರ್ಗಿನಿ ಕಾರಿನ ಚಾಲಕ ಹೇಳಿದ್ದಾನೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ವ್ಯಾನ್ ಚಾಲಕನ ತಲೆಗೂ ಪೆಟ್ಟು ಬಿದ್ದಿದೆ. ಹೆದ್ದಾರಿ ಖಾಲಿಯಿದ್ದ ಕಾರಣಕ್ಕೆ ಬೇರೆ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಎರಡೂ ವಾಹನಗಳು ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ತೊಂದರೆಯುಂಟಾಗಿ ಇದ್ದಕ್ಕಿದಂತೆ ನಿಂತಿದೆ. ಏಕಾಏಕಿ ಕಾರು ನಿಂತ ಕಾರಣಕ್ಕೆ ವೇಗವಾಗಿ ಬರುತ್ತಿದ್ದ ವ್ಯಾನ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇನ್ನೂ ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಬಗ್ಗೆ ಹೇಳುವುದಾದರೆ, ಇದೊಂದು ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿದ್ದು, ಫೋಲ್ಡ್ ಮಾಡಬಹುದಾದ ರೂಫ್ ಹೊಂದಿದೆ. ರೂಫ್ ತೆರೆದಾಗ ಕೂಪ್ ಕಾರಿನಂತೆ ಕಂಡು ಬರುತ್ತದೆ. ಈ ಕಾರಿನಲ್ಲಿರುವ ಡಿಸೈನ್ ಹಾಗೂ ಫೀಚರ್‌ಗಳನ್ನು ಲ್ಯಾಂಬೋರ್ಗಿನಿ ಸ್ಪೈಡರ್‌ನಿಂದ ಪಡೆಯಲಾಗಿದೆ.

ಈ ಕಾರಿನಲ್ಲಿರುವ 5.2-ಲೀಟರಿನ ವಿ 10 ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್, 610 ಬಿಎಚ್‌ಪಿ ಪವರ್ ಹಾಗೂ 560 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಬೆಲೆ ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ರೂ.3 ಕೋಟಿಗಳಿಂದ ಆರಂಭವಾಗುತ್ತದೆ.