ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಮುಂಬೈನ ಸಮುದ್ರದ ಮೇಲಿರುವ ಸೇತುವೆ ಸಾಕಷ್ಟು ರಮಣೀಯವಾಗಿದ್ದು ಸೂಪರ್‌ ಕಾರುಗಳ ಸಂಚಾರವನ್ನು ವೀಕ್ಷಿಸಲು ಅತ್ಯುತ್ತಮ ಸ್ಥಳವಾಗಿದೆ. ಸಾಮಾನ್ಯವಾಗಿ ಹಲವು ಸೆಲೆಬ್ರಿಟಿಗಳು ಸಹ ಈ ಸೇತುವೆಯ ಮೇಲೆ ಸಂಚರಿಸುತ್ತಾರೆ. ಈ ಸೇತುವೆ ಮುಂಬೈ ನಗರದ ಪ್ರಮುಖ ಪ್ರದೇಶವಾಗಿರುವುದರಿಂದ ಅಲ್ಲಿ ಟ್ರಾಫಿಕ್ ಪೋಲಿಸರನ್ನು ನಿಯೋಜಿಸಲಾಗಿರುತ್ತದೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಸುನೀಲ್ ಶೆಟ್ಟಿ ಖ್ಯಾತ ಬಾಲಿವುಡ್ ನಟ. ಅವರು ನಿರ್ಮಾಪಕರು ಹೌದು. ಸುನೀಲ್ ಶೆಟ್ಟಿರವರು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಇತ್ತೀಚಿಗೆ ಸುನೀಲ್ ಶೆಟ್ಟಿರವರು ಈ ಸೇತುವೆ ಮೇಲೆ ಸಂಚರಿಸುವ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಅವರ ಕಾರ್ ಅನ್ನು ತಡೆದು ನಿಲ್ಲಿಸಿದ್ದರು. ಯಾವ ಕಾರಣಕ್ಕೆ ಪೊಲೀಸರು ಸುನೀಲ್ ಶೆಟ್ಟಿರವರ ಕಾರ್ ಅನ್ನು ನಿಲ್ಲಿಸಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಆದರೆ ವೀಡಿಯೊದ ಕೊನೆಯಲ್ಲಿ ಪೊಲೀಸರು ಸುನೀಲ್ ಶೆಟ್ಟಿರವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಮುಂಬೈ ಟ್ರಾಫಿಕ್ ಪೊಲೀಸರು ಸುನೀಲ್ ಶೆಟ್ಟಿರವರು ಚಲಿಸುತ್ತಿದ್ದ Mercedes Benz G Wagon ಕಾರ್ ಅನ್ನು ನಿಲ್ಲಿಸಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ಕಾಣಬಹುದು.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

Mercedes Benz G Wagon ಕಾರಿನ ಚಾಲಕ ಸ್ಥಾನದಲ್ಲಿದ್ದ ಸುನೀಲ್ ಶೆಟ್ಟಿರವರೊಂದಿಗೆ ಪೊಲೀಸರು ಒಬ್ಬರಾದ ನಂತರ ಒಬ್ಬರಂತೆ ಪೋಸ್ ನೀಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ವೇಳೆ ಸುನೀಲ್ ಶೆಟ್ಟಿರವರು ಕಾರಿನಿಂದ ಹೊರಗೆ ಬರಲಿಲ್ಲ. ಅವರು ತಾವು ಕುಳಿತಿದ್ದ ಕಾರಿನ ವಿಂಡೋ ಮೂಲಕವೇ ಪೊಲೀಸ್ ಸಿಬ್ಬಂದಿಗಳೊಂದಿಗೆ ಪೋಸ್ ನೀಡಿದ್ದಾರೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಸಿಎಸ್ 12 ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದೆ. ಸುನೀಲ್ ಶೆಟ್ಟಿ ಸಿನಿಮಾ ಜೊತೆಗೆ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಅವರು Hummer H 2 ಸೇರಿದಂತೆ ಹಲವು ಎಸ್‌ಯುವಿಗಳನ್ನು ಹೊಂದಿದ್ದಾರೆ. ಅವರ ಗ್ಯಾರೇಜಿನಲ್ಲಿ Jeep Wrangler, Mercedes Benz GLS, Land Rover Range Rover ಸೇರಿದಂತೆ ಹಲವು ಕಾರುಗಳಿವೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

Mercedes Benz G Wagon ಕಾರ್ ಅನ್ನು ಸುನೀಲ್ ಶೆಟ್ಟಿರವರ ಜೊತೆಗೆ ಹಲವು ಸೆಲೆಬ್ರೆಟಿಗಳು ಹಾಗೂ ಉದ್ಯಮಿಗಳು ಸಹ ಬಳಸುತ್ತಿದ್ದಾರೆ. ಐಷಾರಾಮಿ ಹಾಗೂಪ್ರೀಮಿಯಂ ಅಂಶಗಳನ್ನು ಹೊಂದಿರುವುದರಿಂದ ಈ ಕಾರು ಶ್ರೀಮಂತರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.64 ಕೋಟಿಗಳಾದರೆ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.45 ಕೋಟಿಗಳಾಗಿದೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಸುನೀಲ್ ಶೆಟ್ಟಿ ಮೊದಲ ಬಾರಿಗೆ Mercedes Benz G Wagon ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಕಾರು ಹೊಸ ಹೆಡ್‌ಲ್ಯಾಂಪ್‌ ಹಾಗೂ ರಿಂಗ್ ಡಿಆರ್‌ಎಲ್‌ಗಳನ್ನು ಹೊಂದಿದೆ. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟ ನಟಿಯರಾದ ಸಾರಾ ಅಲಿ ಖಾನ್, ಜಿಮ್ಮಿ ಶೆರ್ಗಿಲ್, ರಣಬೀರ್ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು Mercedes Benz G Wagon ಕಾರ್ ಅನ್ನು ಹೊಂದಿದ್ದಾರೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

Mercedes Benz ಕಂಪನಿಯು ಈಗ ಮಾರುಕಟ್ಟೆಯಲ್ಲಿರುವ G Wagon ಕಾರ್ ಅನ್ನು 2019 ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಕಾರು ಹಲವಾರು ಐಷಾರಾಮಿ ಹಾಗೂ ಪ್ರೀಮಿಯಂ ಅಂಶಗಳನ್ನು ಹೊಂದಿದೆ. ಇವುಗಳಲ್ಲಿ 12.3 ಇಂಚಿನ ಸ್ಕ್ರೀನ್ ಹೊಂದಿದೆ. ಈ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಇನ್ಫೋಟೈನ್ಮೆಂಟ್ ಸಿಸ್ಟಂ ಆಗಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಗಮನಾರ್ಹ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಇದರ ಜೊತೆಗೆ Mercedes Benz G Wagon ಕಾರು ಲೆದರ್ ಸೀಟ್, ಮಲ್ಟಿ ಪರ್ಪಸ್ ಸ್ಟೀಯರಿಂಗ್ ವ್ಹೀಲ್, ಪುಶ್ ಸ್ಟಾರ್ಟ್, ಸ್ಟಾಪ್ ಬಟನ್, ಎಲ್ಇಡಿ ಹೆಡ್ ಲ್ಯಾಂಪ್, ತ್ರೀ ವೇ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. Mercedes Benz G Wagon ಕಾರು ಐಷಾರಾಮಿ ಅಂಶಗಳ ಜೊತೆಗೆ ಸಾಕಷ್ಟು ಸ್ಪೇಸ್ ಪ್ರೆಸೆನ್ಸ್ ಅನ್ನು ಸಹ ಹೊಂದಿದೆ.

ಈ ಕಾರು 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಜೊತೆಗೆ 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯ, 30.9 ಡಿಗ್ರಿ ಅಪ್ರೋಚ್ ಆಂಗಲ್, 29.9 ಡಿಗ್ರಿ ಬ್ರೇಕ್ ಓವರ್ ಆಂಗಲ್, 25.7 ಡಿಗ್ರಿ ಡಿಪಾರ್ಚರ್ ಆಂಗಲ್ ಹೊಂದಿದೆ. Mercedes Benz G Wagon ಕಾರ್ ಅನ್ನು ಅತ್ಯುತ್ತಮ ಆಫ್ ರೋಡ್ ವಾಹನವಾಗಿಯೂ ಬಳಸಬಹುದು. ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ಈ ಕಾರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಇದೂ ಸಹ ಒಂದು ಪ್ರಮುಖ ಕಾರಣವಾಗಿದೆ.

ನಟನ ಕಾರು ತಡೆದು ಸೆಲ್ಫಿ ಕ್ಲಿಕ್ಕಿಸಿಕೊಂಡ ಸಂಚಾರಿ ಪೊಲೀಸರು

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳ ಸ್ಟಾರ್ ನಟ ನಟಿಯರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ಕಾರುಗಳು ಆರಾಮದಾಯಕವಾಗಿರುವುದರ ಜೊತೆಗೆ ಪ್ರೀಮಿಯಂ ಅಂಶಗಳನ್ನು ಹೊಂದಿರುತ್ತವೆ ಎಂಬುದು ಈ ಕಾರುಗಳ ಖರೀದಿಯ ಹಿಂದಿರುವ ಪ್ರಮುಖ ಕಾರಣ.

Most Read Articles

Kannada
English summary
Mumbai traffic cops stop actor suniel shetty s car and takes selfie video details
Story first published: Tuesday, September 21, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X