Just In
- 1 hr ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 15 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- Movies
ಫೇಸ್ಬುಕ್ ಲೈವ್ ಬಂದು ಪ್ರಪಂಚದ ದೊಡ್ಡ ಪ್ರಾಬ್ಲಂ ಬಗ್ಗೆ ಹೇಳಿದ ಉಪೇಂದ್ರ!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮ್ಯೂಸಿಕಲ್ ರೋಡ್: ಈ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಕೇಳುತ್ತೆ ಸಂಗೀತ!
ಬಹುತೇಕ ವಾಹನ ಸವಾರರಿಗೆ ರಸ್ತೆಯಲ್ಲಿನ ಬಿಳಿ ಬಣ್ಣದ ಪಟ್ಟಿಗಳ ಬಗ್ಗೆ ಗೊತ್ತೇ ಇರುತ್ತದೆ. ವೇಗವಾಗಿ ಅವುಗಳ ಮೇಲೆ ಸಂಚರಿಸಿದಾಗ ವಿಚಿತ್ರ ಶಬ್ದಗಳು ಹೊರಹೊಮ್ಮುವುದನ್ನು ಹಲವರು ಗಮನಿಸಿರಬಹುದು. ಆದರೆ ಇವುಗಳನ್ನೇ ಬಳಸಿಕೊಂಡು ವಿದೇಶಗಳಲ್ಲಿ ಸಂಗೀತ ಹೊರಹೊಮ್ಮುವಂತೆ ಮಾಡಿದ್ದಾರೆ ಕೆಲವರು ಎಂಜಿನೀಯರ್‌ಗಳು.

ಹೌದು. ಇತ್ತೀಚೆಗೆ sciencegirl ಎಂಬ ಬಳಕೆದಾರರು ಟ್ವಿಟರ್‌ನಲ್ಲಿ, ಇಂತಹ ರಸ್ತೆಯಲ್ಲಿ ಸಂಚರಿಸಿ ವಿಡಿಯೋ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋದಲ್ಲಿ ರಸ್ತೆಯ ಮೇಲೆ ಹಾಕಿರುವ ಸಾವಿರಾರು ರಂಬಲ್ ಸ್ಟ್ರಿಪ್‌ಗಳ (ರಸ್ತೆಯಲ್ಲಿನ ಬಿಳಿ ಬಣ್ಣದ ಪಟ್ಟಿ) ಮೇಲೆ ಕಾರು ಚಾಲನೆ ಮಾಡುವಾಗ, ಹಿತವಾದ ಸಂಗೀತ ಹೊರಹೊಮ್ಮುತ್ತಿದೆ.

ಚಾಲಕರು ತಮ್ಮ ಲೇನ್‌ಗಳ ಅಂಚಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ ಎಂದು ಎಚ್ಚರಿಸಲು ಎಡ, ಬಲ ಮತ್ತು ಮಧ್ಯಭಾಗದಲ್ಲಿ ಪಟ್ಟಿಗಳನ್ನು ಹಾಕಲಾಗುತ್ತದೆ, ಇನ್ನು ಅಡ್ಡಪಟ್ಟಿಗಳು ಸಾಮಾನ್ಯವಾಗಿ ಸಂಪೂರ್ಣ ರಸ್ತೆಯನ್ನು ಆವರಿಸಿರುತ್ತವೆ. ಇವು ಬಂದಾಗ ಚಾಲಕರು ವಾಹನಗಳನ್ನು ನಿಧಾನಗೊಳಿಸಬೇಕು ಎಂದು ಸೂಚಿತ್ತವೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ಬಿಳಿ ಬಣ್ಣದ ಪಟ್ಟಿಗಳು ಕಿವಿಗೆ ಆಹ್ಲಾದಕರ ಶಬ್ದವನ್ನು ನೀಡುತ್ತವೆ. ಇದನ್ನೇ ಸಂಗೀತ ಹೊರಹೊಮ್ಮುವಂತೆ ಏಕೆ ಮಾಡಬಾರದು ಎಂದು ಅರಿತುಕೊಂಡ ಕೆಲವರು ಉದ್ಯಮ ಶೀಲ ವ್ಯಕ್ತಿಗಳು, ಬಿಳಿ ಪಟ್ಟಿಗಳ ಉದ್ದ ಮತ್ತು ಅಂತರವನ್ನು ಬದಲಾಯಿಸಿ ಕಾರುಗಳು ಅವುಗಳ ಮೇಲೆ ಸಂಚರಿಸಿದರೆ ಮಧುರವಾದ ಮ್ಯೂಸಿಕ್ ಬರುವಂತೆ ಮಾಡಿದ್ದಾರೆ.
Listen to this road
— Science girl (gunsnrosesgirl3) July 8, 2022
A musical road is a stretch of road that, when driven over, produces an audible rumble and a tactile vibration that may be felt through the wheels and body of the car and heard as music pic.twitter.com/fRhTaKKBPN
ಪ್ರತಿ ಸ್ಟ್ರಿಪ್ ಅನ್ನು ಮ್ಯೂಸಿಕ್ ಬರುವ ರೀತಿಯಲ್ಲಿ ಇರಿಸಲಾಗುತ್ತದೆ. ಈ ಪಟ್ಟಿಗಳನ್ನು ಸ್ಲೀಪರ್ ಲೈನ್‌ಗಳು, ಆಡಿಬಲ್ ಲೇನ್ಸ್ ಅಥವಾ ವೂ ವೂ ಬೋರ್ಡ್‌ಗಳು ಎಂದೂ ಕರೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಈ ಕಂಪನಗಳನ್ನು ಉಂಟುಮಾಡುವ ಮೂಲಕ ಸಂಭವನೀಯ ಅಪಾಯದ ಬಗ್ಗೆ ಗಮನವಿಲ್ಲದ ಚಾಲಕರನ್ನು ಎಚ್ಚರಿಸಲು ಈ ರಸ್ತೆಗಳನ್ನು ಸುರಕ್ಷತೆಯ ವೈಶಿಷ್ಟ್ಯವಾಗಿ ಬಳಸಲಾಗುತ್ತದೆ.

ಲಾಂಕಾಸ್ಟರ್ ಸಿಟಿಯ ಹೊರವಲಯದಲ್ಲಿ ಈ ಪಟ್ಟಿಗಳನ್ನು ಇರಿಸಿದಾಗ ಮ್ಯೂಸಿಕ್ ರಸ್ತೆಗಳ ಪರಿಕಲ್ಪನೆಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಮೊದಲು ಜನಪ್ರಿಯವಾಯಿತು. 50 mph ವೇಗದಲ್ಲಿ ಚಲಿಸಿದಾಗ ಈ ವಿಶಿಷ್ಟ್ ಮ್ಯೂಸಿಕ್ ಹೊರಹೊಮ್ಮುತ್ತದೆ. ಇಂತಹ ರಸ್ತೆಗಳು ಹೆಚ್ಚು ಆರಾಮದಾಯಕ ಹಾಗೂ ಪ್ರಯಾಣದಲ್ಲಿ ಮೋಜನ್ನು ನೀಡುತ್ತವೆ. ಹಾಗಾದರೆ ಇಂತಹ ರಸ್ತೆಗಳು ಯಾವೆಲ್ಲಾ ದೇಶಗಳಲ್ಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ..

1. ಡೆನ್ಮಾರ್ಕ್
ರೋಡ್-ಆಸ್-ಇನ್ಸ್ಟ್ರುಮೆಂಟ್ ಪರಿಕಲ್ಪನೆಯನ್ನು 1995 ರಲ್ಲಿ ಇಬ್ಬರು ಡ್ಯಾನಿಶ್ ಕಲಾವಿದರು "ಆಸ್ಫಾಲ್ಟೋಫೋನ್" ನೊಂದಿಗೆ ಬಂದಾಗ, ಇವು ರಂಬಲ್ ಸ್ಟ್ರಿಪ್‌ಗಳಿಗಿಂತ ಬಾಟ್ ಡಾಟ್ಸ್ (ರಸ್ತೆಗಳಲ್ಲಿ ಹಾಕಲಾಗುವ ಸಣ್ಣ ಚುಕ್ಕೆಗಳು) ಹೆಚ್ಚು ಸಂಗೀತವನ್ನು ಹೊರಹಾಕಿದವು. ಹಾಗಾಗಿ ಇವುಗಳನ್ನು ಬಳಸಿ ಪಾದಚಾರಿ ಗುರುತುಗಳನ್ನು ಹೆಚ್ಚಿಸಿದರು.

2. ನ್ಯೂ ಮೆಕ್ಸಿಕೋ
ನ್ಯೂ ಮೆಕ್ಸಿಕೋದಲ್ಲಿನ ಸಾರಿಗೆ ಅಧಿಕಾರಿಗಳು "ಅಮೇರಿಕಾ ದಿ ಬ್ಯೂಟಿಫುಲ್" ಆಲ್ಬುಕರ್ಕ್ ಮತ್ತು ಟಿಜೆರಾಸ್ ನಡುವಿನ ಮಾರ್ಗ 66 ರ ವಿಭಾಗದಲ್ಲಿ ಕಾರುಗಳು ನಿಧಾನವಾಗಿ ಚಲಿಸಲು ಮ್ಯೂಸಿಕಲ್ ರೋಡ್ ಅನ್ನು ಬಳಕೆಗೆ ತಂದರು. ವೇಗ ಮತ್ತು ಪಿಚ್‌ನಲ್ಲಿ ಹಾಡನ್ನು ಕೇಳಲು, ವಾಹನಗಳು 45 mph ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಚಾಲಕರು ಮಿತಿಗಿಂತ ವೇಗದಲ್ಲಿ ಹೋದರೆ ಸಂಗೀತವನ್ನು ಕೇಳಲು ಸಾಧ್ಯವಾಗುವುದಿಲ್ಲ.

3. ಕ್ಯಾಲಿಫೋರ್ನಿಯಾ
ಅಮೆರಿಕಾದಲ್ಲಿರುವ ಏಕೈಕ ಸಂಗೀತದ ರಸ್ತೆಯನ್ನು ಕ್ಯಾಲಿಫೋರ್ನಿಯಾದ ಲ್ಯಾಂಕಾಸ್ಟರ್‌ನಲ್ಲಿ ಕಾಣಬಹುದು, ಇಲ್ಲಿ ಕೂಡ 55 mph ವೇಗದಲ್ಲಿ ಚಲಿಸಿದರೆ ಚಾಲಕರಿಗೆ ಮ್ಯೂಸಿಕ್ ಪ್ಲೇ ಆಗುತ್ತದೆ. ಇದನ್ನು ಇಲ್ಲಿನ ಸಮೀಪದ ವಸತಿ ಪ್ರದೇಶದ ಬಳಿ ಸ್ಥಾಪಿಸಲಾಗಿತ್ತು. ಆದರೆ ಇದು ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದ ಕಾರಣ ಅವುಗಳನ್ನು ಸ್ಥಾಪಿಸಿದ ಕೇವಲ ಎರಡು ವಾರಗಳಲ್ಲಿ ತೆಗೆದುಹಾಕಲಾಯಿತು. ಬಳಿಕ ಇದೇ ರಸ್ತೆಯ ಕೈಗಾರಿಕಾ ಪ್ರದೇಶದ ಬಳಿ ಮರುಸ್ಥಾಪಿಸಲಾಯಿತು.

4. ಜಪಾನ್
ಎಂಜಿನಿಯರ್ ಶಿಜುವೊ ಶಿನೋಡಾ ಎಂಬಾತ ಆಕಸ್ಮಿಕವಾಗಿ ಬುಲ್ಡೋಜರ್‌ನಿಂದ ರಸ್ತೆಯನ್ನು ಕೆಡವಿದಾಗ ರಂಬಲ್ ಸ್ಟ್ರಿಪ್‌ಗಳು ಆಸಕ್ತಿದಾಯಕ ಶಬ್ದಗಳನ್ನು ಮಾಡುತ್ತವೆ ಎಂದು ಅರಿತುಕೊಂಡರು. ನಂತರ ಜಪಾನ್ ಇದೀಗ ಹಲವಾರು ಮ್ಯೂಸಕ್ ಹೊರಹಾಕುವ ಬೀದಿಗಳನ್ನು ಒಳಗೊಂಡಿದೆ. ಇವೆಲ್ಲವು ಜಪಾನ್‌ನ ಮೌಂಟ್ ಫ್ಯೂಜಿ ಬಳಿ ಇವೆ.

5. ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾದಲ್ಲಿ ಶೇ70 ರಷ್ಟು ಹೆದ್ದಾರಿ ಅಪಘಾತಗಳು ಡೋಜಿಂಗ್ ಚಾಲಕರಿಂದ ಉಂಟಾಗುತ್ತವೆ. ಆದ್ದರಿಂದ ಕೊರಿಯನ್ ಹೈವೇ ಕಾರ್ಪೊರೇಷನ್, ವಾಹನ ಚಾಲಕರು ಗಮನಹರಿಸುವಂತೆ ಹಾಗೂ ವಿಶೇಷವಾಗಿ ಅಪಾಯಕಾರಿ ರಸ್ತೆಗಳಲ್ಲಿ ಸಂಗೀತದ ರಂಬಲ್ ಸ್ಟ್ರಿಪ್‌ಗಳನ್ನು ಸ್ಥಾಪಿಸಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ರಸ್ತೆಗಳಲ್ಲಿನ ಬಿಳಿ ಬಣ್ಣದ ಪಟ್ಟಿಗಳಿಂದ ಕೇವಲ ಸುರಕ್ಷೆತೆ ಮಾತ್ರವಲ್ಲ, ಬದಲಾಗಿ ಸಂಗೀತವನ್ನು ಹೊರಹೊಮ್ಮಿಸಬಹುದು ಎಂಬುದನ್ನು ಸಾಭೀತು ಮಾಡಿರುವ ಎಂಜಿನೀಯರ್‌ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ಭಾರತದಲ್ಲೂ ಮುಂಬರುವ ದಿನಗಳಲ್ಲಿ ಇಂತಹ ರಸ್ತೆಗಳು ಬರಬೇಕು ಎಂಬುದು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ.