ಈ ಚೀನಾ ಕಂಪನಿ ಕಾರ್‌ಗಾಗಿ ಮುಗಿಬಿದ್ದ ಭಾರತದ ಸೆಲೆಬ್ರಿಟಿಗಳು: ಇದರ ವಿಶೇಷತೆಗಳೇನು?

ವಿಶ್ವದಾದ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ (BYD) ಗುರುತಿಸಿಕೊಂಡಿದೆ. ಬಿಲ್ಡ್ ಯುವರ್ ಡ್ರೀಮ್ (ಬಿವೈಡಿ) ಕಂಪನಿಯು ಜನಪ್ರಿಯ ಟೆಸ್ಲಾ ಜೊತೆ ಪೈಪೋಟಿ ನಡೆಸುತ್ತಿದೆ. ಭಾರತಕ್ಕೆ ಬಿವೈಡಿ (BYD) ಕಂಪನಿಯು 2021ರಲ್ಲಿ e6 ಎಂಬ ಮಾದರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತು. ಆದರೆ 2022ರಲ್ಲಿ ಬಿವೈಡಿ ಕಂಪನಿಯು ಸಾರ್ವಜನಿಕರಿಗಾಗಿ e6 ಮಾರಾಟ ಪ್ರಾರಂಭಿಸಿತು. ನಂತರ ಬಿವೈಡಿ ಕಂಪನಿಯು ಆಟ್ಟೊ 3 ಕಾಂಪ್ಯಾಕ್ಟ್ ಕ್ರಾಸ್ಒವರ್ ಬಿಡುಗಡೆಗೊಳಿಸಿತು. ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಬಿವೈಡಿ ಕಾರುಗಳನ್ನು ಇತ್ತೀಚೆಗೆ ಸೆಲೆಬ್ರಿಟಿಗಳು ಹೆಚ್ಚಾಗಿ ಖರೀಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಬಿಜಿಬಾಲ್ ಅವರು ಹೊಸ ಬಿವೈಡಿ ಆಟ್ಟೊ 3 (BYD Atto 3) ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯನ್ನು ಖರೀದಿಸಿದ್ದಾರೆ. ಈ ಖ್ಯಾತ ಸಂಗೀತ ನಿರ್ದೇಶಕ ಬಿಜಿಬಾಲ್ ಅವರು ಎರಡು ದಶಕಗಳಿಂದ 150 ಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸಿದ್ದಾರೆ. ಕೆಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸುವ ಮೂಲಕ ಮಲಯಾಳಂ ಚಿತ್ರ ಲೋಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

BYD Atto 3

2013 ರಲ್ಲಿ, ಅವರು ಕಲಿಯಚ್ಚನ್ ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಸ್ವೀಕರಿಸಿದ ಕೀರ್ತಿಗೆ ಪಾತ್ರದವರಾಗಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಚಿತ್ರಗಳು ಅರಾಬಿಕಥಾ, ಪಥೇಮರಿ, ವೆಳ್ಳಿಮೂಂಗ, ಬಾಲ್ಯಕಲಾಸಖಿ, ತೊಂಡಿಮುತ್ತಲು ದೃಕ್ಷಾಕ್ಷಿ,ಕಾರ್ಬನ್, ವಾಟರ್ ಮತ್ತು ತಂಗಂ ಆಗಿದೆ. ಬಿವೈಡಿ ಡೀಲರ್‌ಶಿಪ್ ನಲ್ಲಿ ತಮ್ಮ ಮಕ್ಕಳಾದ ದೇವದತ್ ಮತ್ತು ದಯಾ ಅವರೊಂದಿಗೆ ವಾಹನದ ವಿತರಣೆಯನ್ನು ಬಿಜಿಬಾಲ್ ತೆಗೆದುಕೊಳ್ಳುತ್ತಿರುವ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆ ರೂ 26.40 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್-ಎಂಡ್ ರೂಪಾಂತರದ ಬೆಲೆ 35.94 ಲಕ್ಷಗಳಾಗಿದೆ. ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. 3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಇ6 ಎಂಪಿವಿಯ ನಂತರ ಬ್ರ್ಯಾಂಡ್‌ನ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ.

BYD Atto 3

ಇದು SKD (ಸೆಮಿ-ನಾಕ್ಡ್ ಡೌನ್) ಮಾರ್ಗದ ಮೂಲಕ ಬರುತ್ತದೆ ಮತ್ತು ಚೆನ್ನೈ ಬಳಿಯ ಬ್ರ್ಯಾಂಡ್‌ನ ಶ್ರೀಪೆರಂಬದೂರ್ ಮೂಲದ ಸ್ಥಾವರದಲ್ಲಿ ಜೋಡಿಸಲಾಗಿದೆ. ಈ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 60kWh ಬಿವೈಡಿ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ ARAI- ಪ್ರಮಾಣೀಕರಿಸಿದ ಪ್ರಕಾರ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಈ ಎಸ್‍ಯುವಿ 201 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಅನ್ನು 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಈ ಎಸ್‍ಯುವಿಯು ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಎಂಬ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಈ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ತನ್ನ ದೊಡ್ಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ. ಇದರ ಜೊತೆಗೆ, ಬಿ ಇದರಲ್ಲಿ ನಿಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಬರುತ್ತದೆ.

ಇದನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್ ಅಥವಾ ಪೋಟ್ರೇಟ್ ಓರಿಯಂಟೇಶನ್‌ಗೆ ತಿರುಗಿಸಬಹುದು. ಮುಂಬರುವ ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿನ ಇತರ ಗಮನಾರ್ಹ ವೈಶಿಷ್ಟ್ಯಗಳು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಹೊಂದಿದೆ. ಇದರೊಂದಿಗೆ ಡಿಜಿಟಲ್ ಡ್ರೈವರ್ಸ್ ಡಿಸ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, 8-ಸ್ಪೀಕರ್ ಆಡಿಯೋ ಸಿಸ್ಟಮ್, ಪನೋರಮಿಕ್ ಸನ್‌ರೂಫ್, CN95 ಏರ್ ಫಿಲ್ಟರ್ ಮತ್ತು ವಾಯ್ಸ್ ಕಂಟ್ರೋಲ್ ಅನ್ನು ಹೊಂದಿದೆ.

More from DriveSpark

Article Published On: Thursday, December 26, 2024, 13:30 [IST]
English summary
Music director bijibal buys new byd atto 3 details
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+