ಆರಂಭವಾದ ಆರನೇ ದಿನಕ್ಕೆ ಅಪಘಾತ: ಕರುವಿಗೆ ಡಿಕ್ಕಿ ಹೊಡೆದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್

ಮೈಸೂರಿನಿಂದ ಚೆನ್ನೈಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಅರಕ್ಕೋಣಂ ಬಳಿ ಕರುವಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕರು ಸಾವನ್ನಪ್ಪಿದ್ದು ರೈಲಿಗೆ ಸಣ್ಣ ಡೆಂಟ್ ಆಗಿದೆ.

ದೇಶದ 5 ನೇ ವಂದೇ ಭಾರತ್ ರೈಲು ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿರುವ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ಮೋದಿ ಅವರು ಇದೇ ನವೆಂಬರ್ 12 ರಂದು ಉದ್ಘಾಟಿಸಿದ್ದರು.

ಆರಂಭವಾದ ಆರನೇ ದಿನಕ್ಕೆ ಅಪಘಾತ: ಕರುವಿಗೆ ಡಿಕ್ಕಿ ಹೊಡೆದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್

ಇದು ಇತರ ವಂದೇ ಭಾರತ್ ರೈಲುಗಳಿಗಿಂತ ಹೆಚ್ಚು ಆಧುನಿಕವಾಗಿದೆ. ಈ ರೈಲು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಆದರೆ ಚೆನ್ನೈ-ಮೈಸೂರು ಮಾರ್ಗದಲ್ಲಿ ಆ ಮಟ್ಟದ ವೇಗದಲ್ಲಿ ಪ್ರಯಾಣಿಸಲು ಸರಿಯಾದ ಮೂಲಸೌಕರ್ಯವಿಲ್ಲದ ಕಾರಣ, ಅದರ ವೇಗವನ್ನು ಗಂಟೆಗೆ 130 ಕಿ.ಮೀಗೆ ಸೀಮಿತಗೊಳಿಸಲಾಗಿದೆ.

ಆದರೂ ಮೈಸೂರಿನಿಂದ ಚೆನ್ನೈಗೆ ಬರುತ್ತಿದ್ದ ವಂದೇ ಭಾರತ್ ರೈಲು ಅರಕ್ಕೋಣಂ ಬಳಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಕರುವಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕರುವಿನ ದೇಹ ನಜ್ಜುಗುಜ್ಜಾಗಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದೆ. ಇದರಿಂದ ವಂದೇ ಭಾರತ್ ರೈಲು ಅರ್ಧ ದಾರಿಯಲ್ಲಿ ಸ್ವಲ್ಪ ಹೊತ್ತು ನಿಂತಿತು. ಸ್ವಲ್ಪ ಹೊತ್ತು ರೈಲನ್ನು ನಿಲ್ಲಿಸಿ ಮತ್ತೆ ಚೆನ್ನೈ ಕಡೆಗೆ ನಿರ್ದೇಶಿಸಲಾಯಿತು.

ಆರಂಭವಾದ ಆರನೇ ದಿನಕ್ಕೆ ಅಪಘಾತ: ಕರುವಿಗೆ ಡಿಕ್ಕಿ ಹೊಡೆದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್

ರೈಲಿನ ಕಾರ್ಯಾಚರಣೆ ಆರಂಭವಾದ ಸುಮಾರು ಒಂದು ವಾರದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗದಲ್ಲಿ ಜಾನುವಾರು ಘಟನೆಯನ್ನು ಎದುರಿಸಿದೆ ಎಂದು ವರದಿಯಾಗಿದೆ. ಇದು ಗುರುವಾರ ತಮಿಳುನಾಡಿನ ಅರಕ್ಕೋಣಂನಲ್ಲಿ ವರದಿಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ತನ್ನ ಮಾರ್ಗದಲ್ಲಿ ಒಂದು ನಿಲುಗಡೆಯನ್ನು ತೆಗೆದುಕೊಳ್ಳುವ ಸೆಮಿ-ಹೈ-ಸ್ಪೀಡ್ ರೈಲಿಗೆ ಅಪಘಾತದಿಂದ ಸಣ್ಣ ಡೆಂಟ್ ಆಗಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂದು ವರದಿ ತಿಳಿಸಿದ್ದು, ಸ್ಥಳದಲ್ಲೇ ಕರು ನುಜ್ಜುಗುಜ್ಜಾಗಿದೆ.

ಜಾನುವಾರು ಅಪಘಾತ ಇದೇ ಮೊದಲಲ್ಲ
ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಳೆದ ಸೆಪ್ಟೆಂಬರ್ 6 ರಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಇದಾದ ಒಂದೇ ದಿನದ ಅಂತರದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 7 ರಂದು ಗುಜರಾತ್‌ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಫಲಕಕ್ಕೆ ಹಾನಿಯಾಗಿತ್ತು.

ಈ ರೈಲುಗಳು ಸಾಮಾನ್ಯವಾಗಿ ಹೈ ಸ್ಪೀಡ್ ಅನ್ನು ಹೊಂದಿರುವುದರಿಂದ ಕೂಡಲೇ ಎದುರಾಗುವ ಅಪಘಾತವನ್ನು ತಪ್ಪಿಸುವುದು ಸಾಧ್ಯವಿಲ್ಲ. ಆದರೆ ಸಾಮಾನ್ಯ ರೈಲುಗಳಿಗೆ ಹೋಲಿಸಿಕೊಂಡರೆ ಬ್ರೇಕಿಂಗ್ ವ್ಯವಸ್ತೆಯು ಅತ್ಯುತ್ತಮವಾಗಿದೆ. ಆದರೂ ವೇಗ ಹೆಚ್ಚಾಗಿರುವುದರಿಂದ ಬೃಹತ್ ರೈಲು ಕೂಡಲೇ ನಿಯಂತ್ರಣಕ್ಕೆ ಬರುವುದಿಲ್ಲ.

ಹಾಗಾಗಿ ಈ ಅಪಘಾತಗಳನ್ನು ನಿಯಂತ್ರಿಸಲು ರೈಲ್ವೇ ಇಲಾಖೆಯು ಈ ರೈಲುಗಳ ಬದಿಗಳಲ್ಲಿ ಫೆನ್ಸಿಂಗ್ ನಿರ್ಮಾಣ ಮಾಡಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಒಂದು ವೇಳೆ ಇದನ್ನು ನಿರ್ಮಾಣ ಮಾಡುವುದಾದರೆ ಸಾವಿರಾರು ಕಿ.ಮೀಗಳ ಉದ್ದಕ್ಕೂ ನಿರ್ಮಿಸಬೇಕಾಗಿರುವುದರಿಂದ ಇಲಾಖೆಗೆ ಇದೊಂದು ದೊಡ್ಡ ಸವಾಲಾಗಿರುತ್ತದೆ.

Article Published On: Friday, November 18, 2022, 13:06 [IST]
English summary
Mysore chennai vande bharat express collides with calf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+