ಲಾಕ್‌ಡೌನ್ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೂ ತಗ್ಲಾಕಿಕೊಂಡ ಯುವತಿಯರು..!

ಕರೋನಾ ಹರಡದಿರಲಿ ಎಂಬ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. 2020, ಕ್ಯಾಲೆಂಡರ್‌ನಿಂದ ಅಳಿಸಬೇಕಾದ ವರ್ಷ ಎಂದು ಹಲವರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಕರೋನಾ ವೈರಸ್‌ನಿಂದ ಜನರನ್ನು ಕಾಪಾಡಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಆಧಾರದ ಮೇಲೆ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ ಕೆಲವರು ಈ ಲಾಕ್‌ಡೌನ್ ಅನ್ನು ಉಲ್ಲಂಘಿಸುತ್ತಲೇ ಇದ್ದಾರೆ.

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಪೊಲೀಸರು ಅಗತ್ಯವಿಲ್ಲದೆ ಹೊರಬರುವ ಜನರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪೊಲೀಸರಿಗೆ ಯಾಮಾರಿಸಿ ತಪ್ಪಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಹೊರಬಂದ ಇಬ್ಬರು ಯುವತಿಯರು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಘಟನೆ ನಡೆದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊವನ್ನು ಯುಸಿಎನ್ ಎಂಬ ಸುದ್ದಿ ಸಂಸ್ಥೆ ಬಿಡುಗಡೆಗೊಳಿಸಿದೆ. ತಪಾಸಣೆ ನಡೆಸುವ ವೇಳೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಆದರೆ ಆ ಮಹಿಳೆಯರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಅವರು ಹೊರಬರಲು ಯತ್ನಿಸಿದ ಪ್ರದೇಶವನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗಿದೆ. ಆದರೂ ಮುಖ ಮುಚ್ಚಿ ಕೊಂಡಿದ್ದ ಇಬ್ಬರು ಯುವತಿಯರು ತಪ್ಪಿಸಿಕೊಂಡು ಹೊರಬರಲು ಪ್ರಯತ್ನಿಸಿದ್ದಾರೆ. ಎಲ್ಲಾ ಕಡೆ ಪೊಲೀಸರಿದ್ದ ಕಾರಣಕ್ಕೆ ಬೇರೆ ದಾರಿ ಕಾಣದೇ ಪೊಲೀಸರಿಗೆ ಶರಣಾಗಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಪೊಲೀಸರು ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಇಬ್ಬರು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ಕರೆದೊಯ್ಯುವ ಮೊದಲು ಅವರಿಗೆ ಲಾಠಿ ರುಚಿ ತೋರಿಸಿ, ಬಸ್ಕಿ ಹೊಡೆಸಿದ್ದಾರೆ. ಯುವತಿಯರು ಯಾವ ಕಾರಣಕ್ಕೆ ಹೊರಬಂದರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಹೊರಬರಲು ಆ ಯುವತಿಯರು ಯಾವುದೇ ಪಾಸ್ ಹೊಂದಿರಲಿಲ್ಲ. ವಿಶೇಷ ಪಾಸ್ ಹೊಂದಿದ್ದರೂ ಸಹ, ಪೊಲೀಸರ ಪರಿಶೀಲನೆಯ ನಂತರವೇ ಮುಂದುವರಿಯಬೇಕು. ಆದರೆ ಈ ಯುವತಿಯರು ಹೊರಬರಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಸಂದರ್ಭದಲ್ಲಿ ವಿಶೇಷ ಪಾಸ್ ಪಡೆಯುವುದು ಅಗತ್ಯವಾಗಿದೆ. ಮಹಾರಾಷ್ಟ್ರವು ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಈ ಕಾರಣಕ್ಕೆ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಲಾಕ್‌ಡೌನ್ ಎಫೆಕ್ಟ್: ತಪ್ಪಿಸಿಕೊಳ್ಳಲು ಯತ್ನಿಸಿ ತಗ್ಲಾಕಿಕೊಂಡ ಯುವತಿಯರು..!

ಇದರಿಂದಾಗಿ ಅನೇಕ ಭಾಗಗಳಲ್ಲಿ, ಚೆಕ್ ಪೋಸ್ಟ್ ಸ್ಥಾಪಿಸಿ, ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಹೊರಗೆ ಸುತ್ತಾಡುತ್ತಿದ್ದು, ಪೊಲೀಸರಿಗೆ ಸಿಕ್ಕಿಬಿದ್ದು ತೊಂದರೆಗೀಡಾಗುತ್ತಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಮಾಹಾಮಾರಿ ಕರೋನಾ ವೈರಸ್ ತಡೆಯಲು ದೇಶಾದ್ಯಂತ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನಸಂದಣಿ ಉಂಟಾಗದಂತೆ ಲಾಕ್‌ ಡೌನ್ ಮಾಡಲಾಗಿದೆ. ಇದರಿಂದ ಇಡೀ ದೇಶವೇ ಸ್ತಬ್ದವಾಗಿದ್ದು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಹರಡುವಿಕೆಯನ್ನು ಮಟ್ಟಹಾಕಬಹುದು ಎನ್ನುವ ಆಲೋಚನೆ ಮಾಡಲಾಗುತ್ತಿದೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಆದರೆ ಕೆಲವರಿಗೆ ಲಾಕ್ ಡೌನ್ ಮಾಡಿರುವ ಅರ್ಥವೇ ಗೊತ್ತಾಗದೆ ರಸ್ತೆಗಳು ಖಾಲಿ ಇದೆ ಅಂತಾ ಜಾಲಿ ರೈಡ್ ಮಾಡುವ ಮನಸ್ಥಿತಿಗೆ ತಲುಪಿದ್ದಾರೆ. ಹೀಗೆ ಇಲ್ಲೊಬ್ಬ ಲಾಕ್ ಡೌನ್ ವೇಳೆ ಜಾಲಿ ರೈಡ್ ಮಾಡಲು ಹೋಗಿ ಪೊಲೀಸರ ಕೈ ಸಿಲುಕಿ ಒದೆ ತಿಂದಿದ್ದಾನೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಕೊನೆಗೆ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೋರಿದ್ದಲ್ಲದೆ ಇನ್ನೊಂದು ಬಾರಿ ಇಂತಹ ತಪ್ಪು ಮಾಡುವುದಿಲ್ಲ ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾನೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಲಾಕ್ ಡೌನ್‌ನಿಂದ ಸಂಚಾರಿ ವ್ಯವಸ್ಥೆಯು ಸಂಪೂರ್ಣವಾಗಿ ಬಂದ್ ಆಗಿರುವುದಿಂದ ತುರ್ತು ವಾಹನಗಳ ಸಂಚಾರವನ್ನು ಹೊರತುಪಡಿಸಿ ಯಾವುದೇ ವಾಹನಗಳನ್ನು ಹೊರಗೆ ಬಿಡುತ್ತಿಲ್ಲ. ಇದರಿಂದ ಸಣ್ಣಪುಟ್ಟ ರಸ್ತೆಗಳು ಮಾತ್ರವಲ್ಲದೆ ಹೆದ್ದಾರಿಗಳಲ್ಲೂ ಯಾವುದೇ ವಾಹನಗಳು ಓಡಾತ್ತಿಲ್ಲ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಈ ವೇಳೆ ದಿನನಿತ್ಯದ ಸಾಮಾಗ್ರಿಗಳ ಖರೀದಿಗೆ ಬಂದಿದ್ದ ವ್ಯಕ್ತಿವೊಬ್ಬ ಸಾಮಗ್ರಿಗಳನ್ನು ತೆಗೆದುಕೊಂಡು ಸುಮ್ಮನೆ ಮನೆ ಸೆರುವುದನ್ನು ಬಿಟ್ಟು ಮುಖ್ಯ ರಸ್ತೆಯಲ್ಲೇ ರಾಂಗ್ ಸೈಡ್‌ನಲ್ಲಿ ಬರುವ ಮೂಲಕ ಜಾಲಿ ರೈಡ್ ವಿಡಿಯೋ ಮಾಡಿದ್ದಾನೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಒಂದು ಕೈಲಿಯಲ್ಲಿ ಮೊಬೈಲ್ ಮತ್ತು ಮತ್ತೊಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದುಕೊಂಡಿರುವ ಈ ವ್ಯಕ್ತಿಯ ಸುಮಾರು 1 ಕಿ.ಮೀ ನಷ್ಟು ಜಾಲಿ ರೈಡ್ ಮಾಡಿಕೊಂಡು ಮೊಬೈಲ್ ಸೆಲ್ಪಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಸರ್ಕಲ್ ಒಂದರ ಬಳಿಯಲ್ಲೇ ಕಾವಲಿಗೆ ನಿಂತಿದ್ದ ಪೊಲೀಸರು ಬೈಕ್ ಹಿಡಿದುಹಾಕಿದ್ದಲ್ಲದೇ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಲಾಕ್ ಡೌನ್ ಇರುವಾಗ ಹೊರಗೆ ಬರದಿರುವಂತೆ ಎಚ್ಚರಿಸಿದ ಪೊಲೀಸರು ಮೊಬೈಲ್ ವಿಡಿಯೋ ಆನ್‌ನಲ್ಲೇ ಇರುವುದನ್ನು ಗಮನನಿಸಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಆಗ ಅನುಮಾನ ಬಂದ ಪೊಲೀಸರು ಯಾವ ವಿಡಿಯೋ ಮಾಡುತ್ತಿದ್ದೆ ಎಂದು ಪ್ರಶ್ನಿಸಿದಾಗ ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಮೊಬೈಲ್ ಚೆಕ್ ಮಾಡಿದಾಗ ಕೆಲವೇ ನಿಮಿಷ ಹಿಂದೆ ಸೆಲ್ಪಿ ವಿಡಿಯೋ ಮಾಡಿರುವುದು ಗೊತ್ತಾಗಿದೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಇದರಿಂದ ಮತ್ತಷ್ಟು ಕುಪಿತಗೊಂಡ ಪೊಲೀಸರು ಬೈಕ್ ಸವಾರರನ್ನು ನೆರವಾಗಿ ಠಾಣೆಗೆ ಕರೆತಂದು ತಮ್ಮದೇ ಶೈಲಿಯಲ್ಲಿ ಉಪಚಾರ ಮಾಡಿದ್ದಾರೆ. ತದನಂತರ ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎನ್ನುವ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡು ವಿಡಿಯೋವನ್ನು ಕೂಡಾ ಮಾಡಿಸಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಮಾಹಿತಿಗಳ ಇದು ಮಹಾರಾಷ್ಟ್ರದ ಜಲಗಾಂ ಹೊರವಲಯದಲ್ಲಿ ನಡೆದಿದೆ ಎನ್ನಲಾಗಿದ್ದು, ಇದೀಗ ಜಾಲಿ ರೈಡ್ ವಿಡಿಯೋ ಮತ್ತು ಒದೆ ತಿಂದ ನಂತರ ಕ್ಷಮೆ ಕೇಳುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯುಲು ಸರ್ಕಾರಗಳು, ವೈದ್ಯರು, ಪೊಲೀಸರು ಹರಸಾಹಸಪಡುತ್ತಿದ್ದು, ಲಾಕ್ ಡೌನ್ ಅರ್ಥ ಮಾಡಿಕೊಳ್ಳದ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಹೊರಗೆ ತಿರುಗುವ ಮೂಲಕ ಅಪಾಯ ತಾವೇ ತಂದುಕೊಳ್ಳುತ್ತಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಅನಾವಶ್ಯಕವಾಗಿ ಹೊರಗೆ ತಿರುವ ಮೂಲಕ ವೈರಸ್ ಹರಡುವಿಕೆಯನ್ನು ಸುಲಭವಾಗಿಸುತ್ತಿದ್ದು, ಇಂತವರ ವಿರುದ್ಧ ಪೊಲೀಸರು ಈಗಾಗಲೇ ಹಲವು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ನೀವು ಕೂಡಾ ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಹೊರಗೆ ತಿರಗದೆ, ಅವಶ್ಯವಿದ್ದಲ್ಲಿ ಅಗತ್ಯ ಸುರಕ್ಷಾ ಸಾಧನ ಬಳಕೆ ಮಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

Most Read Articles

Kannada
English summary
Nagpur cops busted girls with Activa Scooter for violating lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more