ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ದೇಶಾದ್ಯಂತ ಬಹುತೇಕ ಆಸ್ಪತ್ರೆಗಳು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕರೋನಾ ವೈರಸ್ ಸೋಂಕಿಗೆ ತುತ್ತಾಗಿರುವವರ ಜೀವ ಉಳಿಸಲು ಹಲವಾರು ಜನರು ಮುಂದೆ ಬಂದಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ಅವರಲ್ಲಿ ಮಹಾರಾಷ್ಟ್ರದ ನಾಗ್ಪುರದ ಉದ್ಯಮಿ ಪ್ಯಾರೆ ಖಾನ್ ಸಹ ಒಬ್ಬರು. ಪ್ಯಾರೆ ಖಾನ್ ನಾಗ್ಪುರದಲ್ಲಿ ಸಾರಿಗೆ ಕಂಪನಿಯನ್ನು ನಡೆಸುತ್ತಿದ್ದಾರೆ. ಕರೋನಾ ಸಾಂಕ್ರಾಮಿಕದ ಈ ಸಂಕಷ್ಟದ ಸಂದರ್ಭದಲ್ಲಿ ಸೋಂಕಿತರ ಜೀವ ಉಳಿಸಲು ಅವರು 20 ಆಕ್ಸಿಜನ್ ಟ್ಯಾಂಕರ್‌ಗಳನ್ನು ನೀಡಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ಆಕ್ಸಿಜನ್ ಕಾನ್ಸೆಂಟ್ರೇಟರ್ ಹಾಗೂ ಸಿಲಿಂಡರ್‌ಗಳ ಖರೀದಿಗೆ ಖಾನ್ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದುಕೊಂಡೆ ಎಂದು ಅವರು ಹೇಳಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ನಂತರ ಅವರು ಆಕ್ಸಿಜನ್ ಸಿಲಿಂಡರ್'ಗಳನ್ನು ಪೂರೈಸಲು ಮುಂದಾದರು. ಉದ್ಯಮಿ ಪ್ಯಾರೆ ಖಾನ್ ಮೊದಲು ಬೆಂಗಳೂರಿನಲ್ಲಿರುವ ಆಕ್ಸಿಜನ್ ಸರಬರಾಜುದಾರರನ್ನು ಸಂಪರ್ಕಿಸಿದ್ದಾಗಿ ಹೇಳಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ಆಕ್ಸಿಜನ್ ಟ್ಯಾಂಕರ್‌ಗಳ ಕೊರತೆಯಿಂದಾಗಿ ಆ ಸರಬರಾಜುದಾರರು ಟ್ಯಾಂಕರ್‌ಗೆ ಮೂರು ಪಟ್ಟು ದರವನ್ನು ವಿಧಿಸಿದ್ದಾರೆ. ಇದರ ನಡುವೆಯೂ ಅವರು ಎರಡು ಆಕ್ಸಿಜನ್ ಟ್ಯಾಂಕರ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ನಂತರ ಅವುಗಳನ್ನು ನಾಗ್ಪುರಕ್ಕೆ ಕಳುಹಿಸಿದ್ದಾರೆ. ವಿಶಾಖಪಟ್ಟಣಂನಿಂದ ಆಕ್ಸಿಜನ್ ಸರಬರಾಜು ವ್ಯವಸ್ಥೆ ಮಾಡಲು ನಾಗ್ಪುರ ಸಂಸದ ಹಾಗೂ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ನೆರವು ನೀಡಿದರು ಎಂದು ಅವರು ಹೇಳಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ವಿಶಾಖಪಟ್ಟಣಂನಿಂದ ಐದು ಟ್ಯಾಂಕರ್‌ಗಳನ್ನು ತರಲು ತನ್ನ ಕಂಪನಿಯ ಚಾಲಕರನ್ನು ಕಳುಹಿಸಿದ್ದಾಗಿ ಖಾನ್ ಹೇಳಿದ್ದಾರೆ. ಇದುವರೆಗೂ ಸುಮಾರು 20 ರಿಂದ 22 ಆಕ್ಸಿಜನ್ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ಇದಕ್ಕಾಗಿ ಸುಮಾರು ರೂ.1 ಕೋಟಿ ಖರ್ಚು ಮಾಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಖಾನ್ ಹಾಗೂ ಅವರ ತಂಡವು ನಾಗ್ಪುರ ಜಿಲ್ಲಾಡಳಿತಕ್ಕೆ ಆಕ್ಸಿಜನ್ ಸಾಗಣೆ ಮಾಡಲು ನೆರವಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು 20 ಆಕ್ಸಿಜನ್ ಟ್ಯಾಂಕರ್ ಖರೀದಿಸಿದ ಸಾರಿಗೆ ಉದ್ಯಮಿ

ಪ್ಯಾರೆ ಖಾನ್'ರವರಂತೆಯೇ ಮುಂಬೈನ ಯುವಕನೊಬ್ಬ ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು ತನ್ನ ಫೋರ್ಡ್ ಎಸ್‌ಯು‌ವಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಆಕ್ಸಿಜನ್ ಸಿಲಿಂಡರ್'ಗಳನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದಾನೆ.

Most Read Articles

Kannada
English summary
Nagpur transporter arranges 20 oxygen tankers for Covid 19 infected people. Read in Kannada.
Story first published: Thursday, April 29, 2021, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X