ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಹುಡ್ ಎನ್ನುವುದು ಲೋಹದ ವಸ್ತುವಾಗಿದ್ದು ಅದು ಕಾರಿನ ಎಂಜಿನ್ ಸೇರಿದಂತೆ ಕಾರಿನ ಮುಂಭಾಗಗಳನ್ನು ಆವರಿಸುತ್ತದೆ. ಕಾರಿನ ಮುಂಭಾಗದಲ್ಲಿ ಹುಡ್ ಇರುತ್ತದೆ. ಇದನ್ನು ಕೆಲವರು ಬಾನೆಟ್ ಎಂದೂ ಕರೆಯುತ್ತಾರೆ. ಈ ಭಾಗವನ್ನು ಹುಡ್ ಎಂದು ಕರೆಯುವುದು ಸರಿಯೋ ಅಥವಾ ಬಾನೆಟ್ ಎಂದು ಕರೆಯುವುದು ಸರಿಯೋ ಎಂಬ ಪ್ರಶ್ನೆ ಕಾಡುವುದು ಸಹಜ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ವಾಸ್ತವವಾಗಿ ಹುಡ್ ಹಾಗೂ ಬಾನೆಟ್ ಎರಡೂ ಸರಿಯಾಗಿವೆ. ಒಂದೇ ಭಾಗವನ್ನು ಎರಡು ಹೆಸರುಗಳಿಂದ ಕರೆಯಲು ಪ್ರಮುಖ ಕಾರಣ ಅಮೆರಿಕನ್ ಇಂಗ್ಲಿಷ್ ಹಾಗೂ ಬ್ರಿಟಿಷ್ ಇಂಗ್ಲಿಷ್. ಹುಡ್ ಎಂಬುದು ಅಮೆರಿಕನ್ ಇಂಗ್ಲಿಷ್ ಆಗಿದೆ. ಹುಡ್ ಪದವನ್ನು ಅಮೆರಿಕಾ ಹಾಗೂ ಕೆನಡಾದಂತಹ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇನ್ನು ಬಾನೆಟ್ ಬ್ರಿಟಿಷ್ ಇಂಗ್ಲಿಷ್ ಪದವಾಗಿದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಬಾನೆಟ್ ಪದವನ್ನು ಇಂಗ್ಲೆಂಡ್, ಭಾರತ, ಐರ್ಲೆಂಡ್, ಸ್ಕಾಟ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದೇ ರೀತಿ ಕಾರಿನ ಒಂದೇ ಭಾಗವನ್ನು ಉಲ್ಲೇಖಿಸಲು ಅಮೆರಿಕನ್ ಇಂಗ್ಲಿಷ್ ಹಾಗೂ ಬ್ರಿಟಿಷ್ ಇಂಗ್ಲಿಷ್ ನಲ್ಲಿ ಬೇರೆ ಬೇರೆ ಪದಗಳನ್ನು ಬಳಸಲಾಗುತ್ತದೆ. ಅವು ಯಾವುವು ಎಂಬುದನ್ನು ಲೇಖನದಲ್ಲಿ ನೋಡೋಣ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಕಾರಿನ ಹಿಂಭಾಗದಲ್ಲಿ ಸಾಮಾನುಗಳನ್ನು ಸಂಗ್ರಹಿಸಲು ಜಾಗವಿರುತ್ತದೆ. ಅಮೆರಿಕನ್ ಇಂಗ್ಲಿಷ್ ನಲ್ಲಿ ಇದನ್ನು ಟ್ರಂಕ್ ಎಂದು ಕರೆಯಲಾಗುತ್ತದೆ. ಇದೇ ವೇಳೆ ಬ್ರಿಟಿಷ್ ಇಂಗ್ಲಿಷ್ ಬಳಸುವವರು ಇದನ್ನು ಬೂಟ್ ಎಂದು ಕರೆಯುತ್ತಾರೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಗಾಜುಗಳಿಗೆ ಅಮೆರಿಕನ್ ಇಂಗ್ಲಿಷ್ ನಲ್ಲಿ ವಿಂಡ್ ಷೀಲ್ಡ್ ಎಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಇವುಗಳನ್ನು ಬ್ರಿಟಿಷ್ ಇಂಗ್ಲಿಷ್‌ನಲ್ಲಿ ವಿಂಡ್‌ಸ್ಕ್ರೀನ್ ಎಂದು ಕರೆಯಲಾಗುತ್ತದೆ. ಅದೇ ರೀತಿ ಕಾರಿನ ಹಿಂಭಾಗದಲ್ಲಿರುವ ದೀಪಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಟೈಲ್ ಲೈಟ್ಸ್ ಎನ್ನುತ್ತಾರೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇವುಗಳನ್ನು ಬ್ರೇಕ್ ಲೈಟ್ಸ್ ಎಂದು ಕರೆಯಲಾಗುತ್ತದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಹಿಂದೆ ಬರುವ ವಾಹನ ಸವಾರರಿಗೆ ಸೂಚನೆ ನೀಡಲು ದೀಪಗಳು ಇರುತ್ತವೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಇವುಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಟರ್ನಿಂಗ್ ಲೈಟ್ಸ್ ಅಥವಾ ಬ್ಲಿಂಕರ್ಸ್ ಎಂದು ಕರೆಯಲಾಗುತ್ತದೆ. ಇನ್ನು ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇವುಗಳನ್ನು ಇಂಡಿಕೇಟರ್ಸ್ ಎಂದು ಕರೆಯಲಾಗುತ್ತದೆ. ಪಾರ್ಕಿಂಗ್ ಬ್ರೇಕ್ ಅಥವಾ ಎಮರ್ಜೆನ್ಸಿ ಬ್ರೇಕ್ ಎಂಬುದು ಅಮೆರಿಕನ್ ಇಂಗ್ಲಿಷ್ ಪದವಾಗಿದೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇದನ್ನು ಹ್ಯಾಂಡ್ ಬ್ರೇಕ್ ಎಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಕಾರುಗಳಲ್ಲಿ ಗೇರ್ ಬದಲಾಯಿಸಲು ಬಳಸುವ ಭಾಗವನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಗೇರ್ ಶಿಫ್ಟ್ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇದನ್ನು ಗೇರ್ ಸ್ಟಿಕ್ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ ಕಾರಿನ ವ್ಹೀಲ್ ಗಳಲ್ಲಿ ಹಲವು ನಟ್ ಗಳು ಇರುತ್ತವೆ. ಇವುಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಲಗ್ ನಟ್ಸ್ ಎಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಇವುಗಳನ್ನು ಬ್ರಿಟಿಷ್ ಇಂಗ್ಲಿಷ್ ನಲ್ಲಿ ವ್ಹೀಲ್ ನಟ್ಸ್ ಎಂದು ಕರೆಯಲಾಗುತ್ತದೆ. ಆಟೋ ಮೊಬೈಲ್ ಬಗ್ಗೆ ಆಸಕ್ತಿ ಹೊಂದಿರುವವರು ಗೇರ್‌ಬಾಕ್ಸ್ ಹಾಗೂ ಟ್ರಾನ್ಸ್‌ಮಿಷನ್‌ನಂತಹ ಹಲವು ಪದಗಳ ಬಗ್ಗೆ ಕೇಳಿರುತ್ತಾರೆ. ಇವುಗಳಲ್ಲಿ ಟ್ರಾನ್ಸ್‌ಮಿಷನ್‌ ಎಂಬುದು ಅಮೆರಿಕನ್ ಇಂಗ್ಲಿಷ್ ಆಗಿದ್ದರೆ ಗೇರ್ ಬಾಕ್ಸ್ ಬ್ರಿಟಿಷ್ ಇಂಗ್ಲಿಷ್ ಪದವಾಗಿದೆ. ಕಾರುಗಳ ಹಿಂಭಾಗದಲ್ಲಿ ಚಿಮ್ನಿಗಳನ್ನು ನೀಡಲಾಗಿರುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಇವುಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಟೈಲ್ ಪೈಪ್ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಈ ಚಿಮ್ನಿಯನ್ನು ಎಕ್ಸಾಸ್ಟ್ ಪೈಪ್ ಎಂದು ಕರೆಯಲಾಗುತ್ತದೆ. ಇನ್ನು ಕಾರುಗಳಲ್ಲಿರುವ ಫ್ಯೂಯಲ್ ಟ್ಯಾಂಕ್ ಅನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಗ್ಯಾಸ್ ಟ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇದನ್ನು ಪೆಟ್ರೋಲ್ ಟ್ಯಾಂಕ್ ಎಂದು ಕರೆಯುತ್ತಾರೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಕಾರುಗಳ ವೇಗವನ್ನು ಹೆಚ್ಚಿಸಲು ಹಾಗೂ ಕಡಿಮೆ ಮಾಡಲು ನೀಡಲಾಗುವ ಪೆಡಲ್ ಅನ್ನು ಸಹ ಅಮೆರಿಕನ್ ಹಾಗೂ ಬ್ರಿಟಿಷ್ ಇಂಗ್ಲಿಷ್ ನಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಗ್ಯಾಸ್ ಪೆಡಲ್ ಎಂದು ಕರೆಯಲಾಗುತ್ತದೆ. ಬ್ರಿಟಿಷ್ ಇಂಗ್ಲಿಷ್ ನಲ್ಲಿ ಇದನ್ನು ಆಕ್ಸಿಲರೇಟರ್ ಎಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಕಾರುಗಳಲ್ಲಿರುವ ಗ್ಲೌಸ್ ಬಾಕ್ಸ್ ಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಗ್ಲವ್ ಕಂಪರ್ಟ್ ಮೆಂಟ್ ಎಂದು ಕರೆಯಲಾಗುತ್ತದೆ. ಇದನ್ನು ಬ್ರಿಟಿಷ್ ಇಂಗ್ಲಿಷ್ ನಲ್ಲಿಚಬ್ಬಿ ಬಾಕ್ಸ್ ಎಂದು ಕರೆಯಲಾಗುತ್ತದೆ. ಟಯರ್ ಗಳ ಮೇಲಿರುವ ರೇಖೆಗಳಿಗೆ ಅಮೆರಿಕನ್ ಇಂಗ್ಲಿಷ್ ನಲ್ಲಿ ಟಯರ್ ತ್ರೇಡ್ ಎಂದು ಕರೆಯಲಾದರೆ, ಬ್ರಿಟಿಷ್ ಇಂಗ್ಲಿಷ್ ನಲ್ಲಿ ಟಯರ್ ಟ್ರಾಕ್ ಎಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಟಯರ್ ಗಳಿಗೆ ಹಾಕುವ ಕ್ಯಾಪ್ ಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಹಬ್ ಕ್ಯಾಪ್ ಎಂದು ಹಾಗೂ ಬ್ರಿಟಿಷ್ ಇಂಗ್ಲಿಷ್ ನಲ್ಲಿ ನೇವ್ ಪ್ಲೇಟ್ ಎಂದು ಕರೆಯಲಾಗುತ್ತದೆ. ಕಾರುಗಳ ಹಿಂಬದಿಯಲ್ಲಿರುವ ಲೈಟ್ ಗಳನ್ನು ಅಮೆರಿಕನ್ ಇಂಗ್ಲಿಷ್ ನಲ್ಲಿ ಬ್ಯಾಕ್ ಅಪ್ ಲೈಟ್ ಗಳೆಂದು ಹಾಗೂ ಬ್ರಿಟಿಷ್ ಇಂಗ್ಲಿಷ್ ನಲ್ಲಿ ರಿವರ್ಸಿಂಗ್ ಲೈಟ್ ಗಳೆಂದು ಕರೆಯಲಾಗುತ್ತದೆ.

ಕಾರಿನ ಬಿಡಿ ಭಾಗಗಳನ್ನು ಎರಡು ರೀತಿಯ ಇಂಗ್ಲಿಷ್ ಹೆಸರುಗಳಿಂದ ಕರೆಯುವುದು ಹೀಗೆ...

ಅಮೆರಿಕನ್ ಇಂಗ್ಲಿಷ್ ನಲ್ಲಿ ಬ್ಯಾಟರಿ ಎಂದು ಹೇಳಲಾಗುವ ಪದಕ್ಕೆ ಬ್ರಿಟಿಷ್ ಇಂಗ್ಲಿಷ್ ನಲ್ಲಿ ಅಕ್ಯುಮುಲೇಟರ್ ಎಂದು ಕರೆಯಲಾಗುತ್ತದೆ. ಈ ಮೂಲಕ ಕಾರಿನ ಒಂದೇ ಭಾಗವನ್ನು ಅಮೆರಿಕನ್ ಇಂಗ್ಲಿಷ್ ಹಾಗೂ ಬ್ರಿಟಿಷ್ ಇಂಗ್ಲಿಷ್ ನಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

Most Read Articles

Kannada
English summary
Names of various car parts in american english and british english details
Story first published: Tuesday, October 12, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X