ಪ್ರವಾಸಿಗರಿಗೆ ಬಿಗ್ ಶಾಕ್! ನಂದಿ ಬೆಟ್ಟಕ್ಕೆ ಇವಿಗಳ ಬಿಟ್ಟು ಉಳಿದೆಲ್ಲಾ ವಾಹನಗಳ ನಿಷೇಧ

ಮುಂದಿನ 6-8 ತಿಂಗಳಲ್ಲಿ ನಂದಿ ಬೆಟ್ಟವನ್ನು ಒಂದು ದಿನದ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವ ಪ್ರವಾಸೋದ್ಯಮ ಇಲಾಖೆಯ ಯೋಜನೆಯ ಭಾಗವಾಗಿ, ನಂದಿ ಬೆಟ್ಟಕ್ಕೆ ಖಾಸಗಿ ಮತ್ತು ವೈಯಕ್ತಿಕ ವಾಹನಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ನಂದಿ ಬೆಟ್ಟಕ್ಕೆ ಪ್ರತಿದಿನ ನೂರಾರು ವಾಹನಗಳು ಬರುತ್ತಿವೆ. ವಾರಾಂತ್ಯದಲ್ಲಿ ಈ ಸಂಖ್ಯೆ ಸಾವಿರಕ್ಕೇರುತ್ತದೆ. ಇದರಿಂದ ಪ್ರವಾಸಿಗರು ಮಾಲಿನ್ಯದ ಗಾಳಿ ಸೇವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್, ಡೀಸೆಲ್ ವಾಹನಗಳು ಬೆಟ್ಟಕ್ಕೆ ಬರಲು ಅವಕಾಶವಿಲ್ಲದಂತೆ ನಿಷೇಧ ಹೇರಲಾಗುತ್ತಿದ್ದು ಪ್ರವಾಸಿಗರಿಗೆ ಪರ್ಯಾಯ ಸಾರಿಗೆ ಕಲ್ಪಿಸಲು ನಿರ್ಧರಿಸಲಾಗಿದೆ.

nandi-hills-fuel-vehicles-ban-except-evs

"ನಾವು ನಂದಿ ಬೆಟ್ಟವನ್ನು ಬೆಂಗಳೂರಿಗರಿಗೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಜೊತೆಗೆ 9ನೇ ಶತಮಾನದ ಭೋಗ ನಂದೀಶ್ವರ ದೇವಸ್ಥಾನವನ್ನು ರಾತ್ರಿ ಬೆಳಕು ಮತ್ತು ಧ್ವನಿ-ಬೆಳಕು ಪ್ರದರ್ಶನದೊಂದಿಗೆ ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಸ್ಥಳದ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿರುವುದಾಗಿ ವರದಿಯಾಗಿದೆ.

ವಾರಾಂತ್ಯದಲ್ಲಿ ನಂದಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳು ತೀರ್ವ ಟ್ರಾಫಿಕ್‌ನಿಂದ ಕೂಡಿರುತ್ತವೆ. ಆಗಾಗ್ಗೆ ಬಂಪರ್ ಟು ಬಂಪರ್ ಟ್ರಾಫಿಕ್ ಕೂಡ ಇರುತ್ತದೆ. ಇವೆಲ್ಲವೂ ಇಂಧನ ಚಾಲಿತ ವಾಹನಗಳಾಗಿರುವುದರಿಂದ ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಧನ ಚಾಲಿತ ವಾಹನಗಳ ಬದಲಿಗೆ ಪ್ರವಾಸಿಗರಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ನಂದಿಬೆಟ್ಟವು ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದ್ದು, ಇದನ್ನು ಅಪಘಾತ ಪೀಡಿತ ವಲಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಹೊಸ ವರ್ಷ ಮತ್ತು ಇತರ ಪ್ರಮುಖ ರಜಾದಿನಗಳಲ್ಲಿ ಬೆಟ್ಟಗಳನ್ನು ಬಯಲು ಪ್ರದೇಶಕ್ಕೆ ಸಂಪರ್ಕಿಸುವ 2 ಕಿ.ಮೀ ವ್ಯಾಪ್ತಿಯನ್ನು ಪ್ರವೇಶಿಸುವ ಬೈಕರ್‌ಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ಈಗಾಗಲೇ ನಿಷೇಧಿಸಿದ್ದಾರೆ.

ಇದರ ಜೊತೆಗೆ ಮುಂದಿನ 6-8 ತಿಂಗಳಲ್ಲಿ ನಂದಿ ಬೆಟ್ಟವನ್ನು ಒಂದು ದಿನದ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಹೊಸ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕ್ರಮಗಳಿಂದ ಸುತ್ತಮುತ್ತಲಿನ ಪ್ರದೇಶದ ಟ್ರಾಫಿಕ್ ಕಡಿಮೆಯಾಗುವುದಲ್ಲದೆ ಪ್ರವಾಸಿಗರಿಗೆ ರಮಣೀಯ ಸೌಂದರ್ಯ ಮತ್ತು ಐತಿಹಾಸಿಕವಾಗಿ ಮಹತ್ವದ ಸ್ಥಳವನ್ನು ಆನಂದಿಸಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.

ಹಾಗೆಯೇ ನಂದಿ ಬೆಟ್ಟಗಳಿಗೆ ಭೇಟಿ ನೀಡಲು ಪ್ರವಾಸಿಗರಿಗಾಗಿ ಕೇಬಲ್ ಕಾರ್ ಆಯ್ಕೆ ಕೂಡ ಇರಲಿದೆ. ಆರಂಭಿಕ ಅಂದಾಜಿನ ಪ್ರಕಾರ, ಇದರಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 250-300 ರೂ. ದರವಿದೆ. ಪ್ರವಾಸಿಗರಿಗೆ ಸ್ಥಳ ಸುರಕ್ಷಿತವಾಗಿರಲು ಇಲಾಖೆಯು ಖಾಸಗಿ ವಾಹನಗಳನ್ನು ಬೆಟ್ಟಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿ, ಮೇಲಕ್ಕೆ ಸಾಗಿಸಲು ಸಣ್ಣ ಎಲೆಕ್ಟ್ರಿಕ್ ಬಸ್ ಫ್ಲೀಟ್ ಅನ್ನು ಒದಗಿಸಲು ನಿರ್ಧರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ನಂದಿ ಬೆಟ್ಟದ ಸೌಂದರ್ಯವನ್ನು ವ್ಲಾಗರ್‌ಗಳು ಹೆಚ್ಚಾಗಿ ತೋರುತ್ತಿರುವುದರಿಂದ ಕೇವಲ ಬೆಂಗಳೂರು ಮಾತ್ರವಲ್ಲದೇ ಪಕ್ಕದಲ್ಲೇ ಇರುವ ಆಂಧ್ರಪ್ರದೇಶದ ಗಡಿ ಪ್ರದೇಶಗಳಿಂದ ಹಲವರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿರುವ ಕಾರಣ ಈಗಲೇ ಕ್ರಮಗಳನ್ನು ಕೈಗೊಂಡರೆ ಪರಿಸರ ಹಾನಿಯನ್ನು ತಡೆಗಟ್ಟಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, September 1, 2023, 15:08 [IST]
English summary
Nandi hills fuel vehicles ban except evs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+