ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ನರೇನ್ ಕಾರ್ತಿಕೇಯನ್ ಪ್ರತಿಯೊಬ್ಬ ಕಾರು ಉತ್ಸಾಹಿಗಳಿಗೆ ಹಾಗೂ ವಾಹನಗಳನ್ನು ಪ್ರೀತಿಸುವವರಿಗೆ ಚಿರಪರಿಚಿತವಾಗಿರುವ ಹೆಸರು. ನರೇನ್ ಕಾರ್ತಿಕೇಯನ್ ಫಾರ್ಮುಲಾ 1 ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಚಾಲಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ನರೇನ್ ಕಾರ್ತಿಕೇಯನ್ ಫಾರ್ಮುಲಾ 1 ರೇಸ್'ಗೆ ವಿದಾಯ ಹೇಳಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಆಗಾಗ್ಗೆ ಆನ್‌ಲೈನ್‌ನಲ್ಲಿ ವಿವಿಧ ಕಾರ್ ರೇಸ್ ಹಾಗೂ ಟ್ರ್ಯಾಕ್ ಡೇ ವೀಡಿಯೊಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಇತ್ತೀಚಿನ ವೀಡಿಯೊದಲ್ಲಿ ನರೇನ್ ಕಾರ್ತಿಕೇಯನ್ ಖ್ಯಾತ ಲೇಖಕ ಚೇತನ್ ಭಗತ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ಚೇತನ್ಭಗತ್'ರವರಿಗೆ ನೆರವು ನೀಡಲು ನರೇನ್ ಕಾರ್ತಿಕೇಯನ್ ಮುಂದಾಗಿರುವುದನ್ನು ವೀಡಿಯೊದಲ್ಲಿ ಗಮನಿಸಬಹುದು.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಈ ವೀಡಿಯೊದಲ್ಲಿ ನರೇನ್ ಕಾರ್ತಿಕೇಯನ್ ಪೋರ್ಷೆ 911 ಜಿಟಿ 3 ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡುತ್ತಿದ್ದಾರೆ. ಈ ವೀಡಿಯೊವನ್ನು ಚೇತನ್ ಭಗತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಇದೊಂದು ಚಿಕ್ಕ ವೀಡಿಯೊವಾಗಿದ್ದು ಚೇತನ್ ಭಗತ್ ಅವರು ಕೊಯಮತ್ತೂರಿನಲ್ಲಿದ್ದಾಗ ತಮ್ಮ ವಿಮಾನವನ್ನು ತಪ್ಪಿಸಿಕೊಳ್ಳಲಿದ್ದರು. ಕೊಯಮತ್ತೂರು ಮೂಲದವರೇ ಆದ ನರೇನ್ ಕಾರ್ತಿಕೇಯನ್ ಚೇತನ್ ಭಗತ್'ರವರ ಸಹಾಯಕ್ಕೆ ಧಾವಿಸಿದ್ದಾರೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಚೇತನ್ ಭಗತ್ ಅವರು ವಿಮಾನ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ತೆರಳಲು ನರೇನ್ ಕಾರ್ತಿಕೇಯನ್ ನೆರವಾಗಿದ್ದಾರೆ. ಚೇತನ್ ಭಗತ್ ತಾವು ಕುಳಿತಿರುವ ಕಾರಿನಲ್ಲಿಯೇ ಸಾಕಷ್ಟು ಉತ್ಸುಕರಾಗಿದ್ದಾರೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ನರೇನ್ ಕಾರ್ತಿಕೇಯನ್ ತಮ್ಮ ಜಿಟಿ 3 ಕಾರ್ ಅನ್ನು ಚಾಲನೆ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕೇಳಿ ಬರುವ ಎಕ್ಸಾಸ್ಟ್'ನಿಂದ ಗಮನಿಸಬಹುದು. ಕಾರು ನಗರದ ರಸ್ತೆಗಳಲ್ಲಿ ಸಾಗಿ ವಿಮಾನ ನಿಲ್ದಾಣವನ್ನು ತಲುಪುತ್ತದೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಿದ್ದರಿಂದ ವಿಮಾನವು ತಮ್ಮ ಕೈ ತಪ್ಪಲಿಲ್ಲವೆಂದು ಚೇತನ್ ಭಗತ್ ತಿಳಿಸಿದ್ದಾರೆ. ವೀಡಿಯೊ ಚಿಕ್ಕದಾಗಿರುವುದರಿಂದಕಾರು ಎಷ್ಟು ವೇಗವಾಗಿ ಚಲಿಸಿತು, ರಸ್ತೆಯಲ್ಲಿ ಎಷ್ಟು ವಾಹನ ದಟ್ಟಣೆ ಇತ್ತು ಎಂಬುದು ತಿಳಿದು ಬಂದಿಲ್ಲ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ನರೇನ್ ಕಾರ್ತಿಕೇಯನ್ ಈ 911 ಜಿಟಿ 3 ಕಾರ್ ಅನ್ನು 2018ರಲ್ಲಿ ಖರೀದಿಸಿದರು. ಅವರು ಭಾರತದಲ್ಲಿ ಈ ಸೂಪರ್ ಕಾರ್ ಖರೀದಿಸಿದ ಮೊದಲ ಖರೀದಿದಾರರಲ್ಲಿ ಒಬ್ಬರಾಗಿದ್ದಾರೆ. ಪೋರ್ಷೆ 911 ಜಿಟಿ 3 ಕಾರಿನ ಬೆಲೆ ರೂ.3 ಕೋಟಿಗಳಿಗಿಂತ ಹೆಚ್ಚು.

ವೀಡಿಯೊದಲ್ಲಿ ಅವರು ಈ ಕಾರ್ ಅನ್ನು ಚಾಲನೆ ಮಾಡುತ್ತಿರುವುದನ್ನು ಗಮನಿಸಿದಾಗ ಅವರಲ್ಲಿ ಇನ್ನೂ ಚಾಲನಾ ಉತ್ಸಾಹ ಇರುವುದು ಸ್ಪಷ್ಟವಾಗಿದೆ. ಪೋರ್ಷೆ 911 ಜಿಟಿ 3 ಕಾರ್ ಅನ್ನು ರೇಸ್ ಟ್ರ್ಯಾಕ್ ಹಾಗೂ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ.

ಖ್ಯಾತ ಲೇಖಕನನ್ನು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿದ ನರೇನ್ ಕಾರ್ತಿಕೇಯನ್

ಈ ಕಾರಿನಲ್ಲಿ ಅಳವಡಿಸಿರುವ 4.0 ಲೀಟರ್, ಆರು ಸಿಲಿಂಡರ್, ಟರ್ಬೋಚಾರ್ಜ್ಡ್ ಬಾಕ್ಸರ್ ಎಂಜಿನ್ 493 ಬಿಹೆಚ್‌ಪಿ ಪವರ್ ಹಾಗೂ 540 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 3.4 ಸೆಕೆಂಡುಗಳಲ್ಲಿ 0 - 100 ಕಿ.ಮೀ ಆಕ್ಸಲರೇಟ್ ಮಾಡುತ್ತದೆ.

Most Read Articles

Kannada
English summary
Narain Karthikeyan drops Chetan Bhagat to airport in his Porsche car. Read in Kannada.
Story first published: Thursday, June 24, 2021, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X