ಕತ್ತಿ ಝಳಪಿಸುತ್ತಾ ಬುಲೆಟ್, ಜೀಪ್ ಓಡಿಸಿ, ಮಹಿಳೆಯರ ಮಸ್ತ್ ಡ್ಯಾನ್ಸ್: ನಾರಿಶಕ್ತಿಯ ವಿಡಿಯೋ ವೈರಲ್!

ದೇಶಾದ್ಯಂತ ನವರಾತ್ರಿ ಸಂಭ್ರಮ ಕಳೆಕಟ್ಟಿದ್ದು, ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಮಹಿಳೆಯರು, ಬುಲೆಟ್ ಬೈಕ್, ಜೀಪ್ & ಹೋಂಡಾ ಆಕ್ಟಿವಾ ಸ್ಕೂಟರ್‌ಗಳ ಮೇಲೆ 'ಗರ್ಬಾ' ನೃತ್ಯವನ್ನು ಪ್ರದರ್ಶಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜ್‌ಕೋಟ್‌ನ ರಾಜ್ವಿ ಪ್ಯಾಲೇಸ್‌ನಲ್ಲಿ ಮಂಗಳವಾರ ಅದ್ದೂರಿಯಾಗಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ, ಮಹಿಳೆಯರಿಬ್ಬರೂ ರಾಯಲ್ ಎನ್‌ಫೀಲ್ಡ್ (Royal Enfield) ಬುಲೆಟ್ ಬೈಕ್ ಹಾಗೂ ಲ್ಯಾಂಡ್ ರೋವರ್‌ (Land Rover) ಜೀಪನ್ನು ಓಡಿಸುತ್ತಾ ಕತ್ತಿ ಝಳಪಿಸಿ 'ಗರ್ಬಾ' ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಂದುವರಿದು, ಹಲವು ಹೋಂಡಾ ಆಕ್ಟಿವಾ (Honda Activa) ಸ್ಕೂಟರ್‌ಗಳ ಮೇಲೆ ಮಹಿಳೆಯರ ಗುಂಪೊಂದು ಬರುತ್ತದೆ.

ಕತ್ತಿ ಝಳಪಿಸುತ್ತಾ ಬುಲೆಟ್ ಮೇಲೆ ಲೇಡಿ ಡ್ಯಾನ್ಸ್: ನವರಾತ್ರಿ ಸಂಭ್ರಮ.. ನಾರಿಶಕ್ತಿಯ ವಿಡಿಯೋ ಫುಲ್ ವೈರಲ್!

ಈ ಸ್ಕೂಟರ್‌ಗಳ ಹಿಂದಿನ ಆಸನದಲ್ಲಿ ನಿಂತಿರುವ ಮಹಿಳೆಯರೂ ಕೂಡ ಎರಡು ಕೈಯಲ್ಲಿ ಕತ್ತಿ ಝಳಪಿಸುತ್ತಾ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಕೊನೆಯಲ್ಲಿ, ಜೀಪ್ ಮೇಲೆ ಕತ್ತಿ ಹಿಡಿದು ನೃತ್ಯ ಪ್ರದರ್ಶನದೊಂದಿಗೆ ಮಹಿಳಾ ತಂಡವೂ ಬರುತ್ತದೆ. ಈ ವಿಡಿಯೋವನ್ನು ಎಎನ್ಐ ಸುದ್ದಿಸಂಸ್ಥೆ ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದು, 300,000 ಹೆಚ್ಚು ವೀಕ್ಷಣೆಯನ್ನು (views) ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಸಹ ಮಹಿಳೆಯರ ಪ್ರದರ್ಶನಕ್ಕೆ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

'ಇದು, ಮಹಿಳಾ ಸಬಲೀಕರಣ' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. 'ಮಹಿಳೆಯ ವಿರುದ್ಧ ಮೋಟಾರ್ ಅಥವಾ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ, ದಂಡ ವಿಧಿಸಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, 'ಖಡ್ಗದೊಂದಿಗೆ ನೃತ್ಯ ಪ್ರದರ್ಶನ ಉತ್ತಮ. ಆದರೆ, ಅಪಾಯಕಾರಿಯೂ ಆಗಿರುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಕತ್ತಿ ಝಳಪಿಸುತ್ತಾ ಬುಲೆಟ್ ಮೇಲೆ ಲೇಡಿ ಡ್ಯಾನ್ಸ್: ನವರಾತ್ರಿ ಸಂಭ್ರಮ.. ನಾರಿಶಕ್ತಿಯ ವಿಡಿಯೋ ಫುಲ್ ವೈರಲ್!

'ಗರ್ಭಾ' ಎಂಬುದು ಗುಜರಾತ್ ರಾಜ್ಯದ ಒಂದು ನೃತ್ಯ ಪ್ರಕಾರವಾಗಿದೆ. ಶಕ್ತಿ ದೇವತೆಯ ಪ್ರತಿಮೆ ಅಥವಾ ದೇವರ ಭಾವಚಿತ್ರವಿಟ್ಟು ಅದರ ಸುತ್ತ ಗರ್ಭಾ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಮುಖ್ಯವಾಗಿ 9 ದಿನಗಳ ನವರಾತ್ರಿ ಆಚರಣೆ ವೇಳೆಯಲ್ಲಿ ಹೆಚ್ಚಾಗಿ ಈ ನೃತ್ಯವನ್ನು ಮಾಡಲಾಗುತ್ತದೆ. ಆಗ, ಪುರುಷರು 'ಕೆಡಿಯು' ಹಾಗೂ ಮಹಿಳೆಯರು ಸಾಂಪ್ರದಾಯಿಕ 'ಚನಿಯ ಚೋಲಿ' ಉಡುಪನ್ನು ಧರಿಸುತ್ತಾರೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ರೂ.1.74 ಲಕ್ಷದಿಂದ ರೂ.2.16 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಮೋಟಾರ್ ಸೈಕಲ್, 349 ಸಿಸಿ ಸಾಮರ್ಥ್ಯದ ಎಂಜಿನ್ ಒಳಗೊಂಡಿದ್ದು, 20.4 PS ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಸ್ಪೆನ್ಷನ್ ಸೆಟಪ್ ಕುರಿತು ಮಾತನಾಡುವುದಾದರೆ, ಮುಂಭಾಗ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ ಟ್ವಿನ್ ಶಾಕ್ ಅಬ್ಸಾರ್ಬರ್‌ ಒಳಗೊಂಡಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಮುಂಭಾಗ 300 ಎಂಎಂ, ಹಿಂಭಾಗ 270 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ ಗೇರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 19, 2023, 15:23 [IST]
English summary
Navratri celebrations women performing garba dance on bikes jeeps video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+