ನೆಲಮಂಗಲ ದುರಂತ: ಕಣ್ಣೀರು ತರಿಸುತ್ತೆ ಈ ವಿಡಿಯೋ.. ಖುಷಿಯಲ್ಲಿ Volvo ಕಾರು ಖರೀದಿಸಿದ್ದ ಉದ್ಯಮಿ ಚಂದ್ರಮ್!

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ (Nelamangala) ಸಮೀಪ ಶನಿವಾರ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. 2 ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ವೋಲ್ವೋ ಕಾರಿನ ಮೇಲೆ ಕಂಟೇನರ್‌ ಬಿದ್ದು, ಐಎಎಸ್‌ಟಿ ಸಾಫ್ಟ್‌ವೇರ್ ಸೊಲ್ಯೂಷನ್ಸ್‌ ಮುಖ್ಯಸ್ಥ ಚಂದ್ರಮ್ ಯೇಗಪ್ಪಗೋಳ (Chandram Yegapagol) ಕುಟುಂಬ ದುರಂತ ಅಂತ್ಯ ಕಂಡಿದೆ. ಸದ್ಯ, ಚಂದ್ರಮ್ ಅವರ ಕುರಿತಂತೆ ಒಂದೊಂದೇ ಕತೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವರೈಲ್ ಆಗುತ್ತಿವೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಮೊರಬಗಿ ಗ್ರಾಮಕ್ಕೆ ಸೇರಿದವರ ಚಂದ್ರಮ್, ಕಷ್ಟಪಟ್ಟು ದುಡಿದು ಮೇಲೆ ಬಂದಿದ್ದರು. ಕಂಪನಿ ಕಟ್ಟಿ ಹಲವರು ಮಂದಿಗೆ ಉದ್ಯೋಗ ನೀಡಿದ್ದರು. ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಆಸೆಯನ್ನು ಹೊಂದಿದ್ದರು. ಆದರೆ, ಕ್ರಿಸ್‍ಮಸ್ ರಜೆಗೆ ಊರಿಗೆ ಹೋಗುವಾಗ ಈ ರಣಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Nelamangala Accident IAST Ceo Chandram Yegapagol Bought Volvo XC90 Two Months Ago Video Viral

ದುರಂತದಲ್ಲಿ ಚಂದ್ರಮ್ ಯೇಗಪ್ಪಗೋಳ ಅವರು ಮಾತ್ರವಲ್ಲದೆ, ಗೌರಾಬಾಯಿ, ಜ್ಞಾನ, ದೀಕ್ಷಾ, ಆರ್ಯ ಮತ್ತು ವಿಜಯಲಕ್ಷ್ಮಿ ಎಂಬುವವರೂ ಕೂಡ ಮೃತಪಟ್ಟಿದ್ದಾರೆ. ಈ ಭೀಕರ ಅಪಘಾತಕ್ಕೆ ವೋಲ್ವೋ ಕಂಪನಿಯು ಬೇಸರ ವ್ಯಕ್ತಪಡಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಅವರು, ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಕಾರು ಖರೀದಿಸಿದ್ದ ಕುಟುಂಬ: ಉದ್ಯಮಿ ಚಂದ್ರಮ್ ಯೇಗಪ್ಪಗೋಳ ತಮ್ಮ ಕುಟುಂಬದೊಂದಿಗೆ ಎರಡು ತಿಂಗಳ ಹಿಂದೆಯಷ್ಟೇ ದುಬಾರಿ ಬೆಲೆಯನ್ನು ವೋಲ್ವೋ ಎಕ್ಸ್‌ಸಿ 90 ಎಸ್‌ಯುವಿಯನ್ನು ಖರೀದಿಸಿದ್ದರು. ಇದೀಗ, ಬೆಂಗಳೂರಿನ ಮಾರ್ಷಲ್ ವೋಲ್ವೋ ಕಾರ್ಸ್ ಶೋರೂಂನಿಂದ ಹೊಸ ಕಾರನ್ನು ವಿತರಣೆ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಸಹ ಮರುಕ ವ್ಯಕ್ತಪಡಿಸಿದ್ದಾರೆ.

Nelamangala Accident IAST Ceo Chandram Yegapagol Bought Volvo XC90 Two Months Ago Video Viral

ವೋಲ್ವೋ ಎಕ್ಸ್‌ಸಿ 90 (Volvo XC90) ಎಸ್‌ಯುವಿ ವಿಶೇಷತೆಗಳೇನು: ಈ ಕಾರು ರೂ.1.01 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2-ಲೀಟರ್ ಮೈಲ್ಡ್ ಹೈಬ್ರಿಡ್ ಟರ್ಬೊ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. 300 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 420 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ.

ಈ ಕಾರು ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್, ಡೆನಿಮ್ ಬ್ಲೂ, ಬ್ರೈಟ್ ಡಸ್ಕ್ ಹಾಗೂ ಪ್ಲಾಟಿನಂ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. ಇದರಲ್ಲಿ 7 ಮಂದಿ ಆರಾಮದಾಯಕವಾಗಿ ಓಡಾಟ ನಡೆಸಬಹುದು. 9-ಇಂಚಿನ ಸೆಂಟರ್ ಡಿಸ್‌ಪ್ಲೇ, 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ, ಬೋವರ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್, ಸನ್‌ರೂಫ್ ಮತ್ತು 4-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Nelamangala Accident IAST Ceo Chandram Yegapagol Bought Volvo XC90 Two Months Ago Video Viral

ನೂತನ ವೋಲ್ವೋ ಎಕ್ಸ್‌ಸಿ 90 ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ರಾಡಾರ್ ಬೇಸ್ಡ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ಸಿಟಿ ಬ್ರೇಕಿಂಗ್ ಸಿಸ್ಟಮ್, ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ರನ್-ಆಫ್ ರೋಡ್ ಪ್ರೊಟೆಕ್ಷನ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಉದ್ಯಮಿ ಚಂದ್ರಮ್ ಯೇಗಪ್ಪಗೋಳ ಕುಟುಂಬ ನೆಲಮಂಗಲ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುರದೃಷ್ಟಕರವಾದ ಸಂಗತಿಯಾಗಿದೆ. ಈ ಪರಿಪ್ರಮಾಣದ ಕಂಟೇನರ್‌ ಬಿದ್ದರೆ ಯಾವುದೇ ಕಾರು ಸಹ ಜಖಂ ಆಗುತ್ತಿತ್ತು ಎಂದು ಅಪಘಾತವನ್ನು ನೋಡಿದ ಸ್ಥಳೀಯರು ಹೇಳುತ್ತಾರೆ. ವೋಲ್ವೋ ಸೇರಿದಂತೆ ಬೇರೆ ಕಾರುಗಳು ಕೂಡ ನಿರ್ದಿಷ್ಟ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಅದು ಮೀರಿದಾಗ ಇಂತಹ ದುರ್ಘಟನೆ ಸಂಭವಿಸುತ್ತವೆ ಎಂಬುದು ಬಲ್ಲವರ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

ವಿಡಿಯೋ ಕೃಪೆ: ಉದಯವಾಣಿ

Article Published On: Monday, December 23, 2024, 12:36 [IST]
English summary
Nelamangala accident iast ceo chandram yegapagol bought volvo xc90 two months ago video viral
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+