ವಿಕಲಚೇತನರಿಗಾಗಿ ಎಲೆಕ್ಟ್ರಿಕ್ ವೀಲ್‌ಚೇರ್ ಮೋಟಾರ್‌ಸೈಕಲ್ ನಿರ್ಮಿಸಿದ ನಿಯೋ ಮೋಷನ್
ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಆಗಮನವು ನಿತ್ಯ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಿದೆ. ಮಾಲಿನ್ಯ ನಿಯಂತ್ರಣದ ಮುಖ್ಯ ಗುರಿಯೊಂದಿಗೆ ಹಲವು ಕಂಪನಿಗಳು ವಿಶ್ವದ ಯಾವುದೋ ಒಂದು ಪ್ರದೇಶದಲ್ಲಿ ನಿತ್ಯ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಲೇ ಇದ್ದಾರೆ.

ಮುಂದಿನ ದಿನಗಳಲ್ಲಿ ಬೈಕ್ ನಿಂದ ಹಿಡಿದು ದೊಡ್ಡ ಹಡಗುಗಳ ವರೆಗು ಎಲೆಕ್ಟ್ರಿಕ್ ವಾಹನಗಳೇ ಕಾರ್ಯಾಚರಣೆ ಮಾಡಲಿವೆ. ಈ ನಡುವೆ ಎಲ್ಲರಂತೆ ಅಂಗವಿಕಲರು ಕೂಡ ಬೈಕ್ ಸವಾರಿ ಮಾಡಲು ವಿವಿಧೆಡೆ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನು ತಯಾರಿಸಿದ್ದಾರಾದರೂ, ಮೊದಲ ಬಾರಿಗೆ ಎಲೆಕ್ಟ್ರಿಕ್ ಚಾಲಿತ ವೀಲ್ ಚೇರ್ ಅನ್ನು ತಯಾರಿಸಲಾಗಿದೆ.

ವಿಕಲಚೇತನರು, ವಯಸ್ಸಾದವರಿಗೆ ವೀಲ್‌ಚೇರ್‌ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಲ್ಲದೇ ಅವರು ಒಂದು ಪ್ರದೇಶದಿಂದ ಮತ್ತೊಂದು ಜಾಗಕ್ಕೆ ಪ್ರಯಾಣಿಸಲು ಮತ್ತೊಬ್ಬರ ಸಹಾಯ ಅನಿವಾರ್ಯವಾಗಿರುತ್ತದೆ. ಇದನ್ನು ಮನಗಂಡು ಯಾರ ಸಹಾಯವಿಲ್ಲದೇ ಪ್ರಯಾಣಿಸುವ ಗುರಿ ಹೊಂದಿರುವ ನಿಯೋ ಮೋಷನ್ ನಿಯೋಬಾಲ್ಟ್ ವೀಲ್‌ಚೇರ್ ಮೋಟಾರ್ಸೈಕಲ್ ಅನ್ನು ಪರಿಚಯಿಸಿದೆ.

ಐಐಟಿ ಮದ್ರಾಸ್‌ನಲ್ಲಿ ಇನ್‌ಕ್ಯುಬೇಟೆಡ್ ಚೆನ್ನೈ ಮೂಲದ ನಿಯೋ ಮೋಷನ್, ನಿಯೋಬೋಲ್ಟ್ ಎಂಬ ಮೋಟಾರ್‌ಸೈಕಲ್ ವೀಲ್‌ಚೇರ್ ಅನ್ನು ಆಸಕ್ತಿದಾಯಕ ಉತ್ಪನ್ನವಾಗಿ ನಿರ್ಮಿಸಿದೆ. ಇದು ವಿನೂತನವಾಗಿದ್ದು, ವಿಕಲಚೇತನರನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದು, ಯಾರ ಮೇಲೂ ಅವಲಂಭಿತರಾಗದೆ ನಗರವನ್ನು ಸುತ್ತಲು ಅನುವು ಮಾಡಿಕೊಡುತ್ತದೆ.

ನಿಯೋಬೋಲ್ಟ್ ಎಂಬದು ಯಂತ್ರವಾಗಿದ್ದು, ನಿಯೋಫ್ಲೈ ಎಂದು ಕರೆಯಲ್ಪಡುವ ವೀಲ್‌ಚೇರ್‌ಗೆ ಜೋಡನೆ ಮಾಡಬಹುದಾಗಿದೆ. ಅಲ್ಲದೇ ಅದನ್ನು ಸಂಪೂರ್ಣವಾಗಿ ಕ್ರಿಯಾತ್ಮಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಮಾರ್ಫಿಂಗ್ ಮಾಡಬಹುದು. ಯಂತ್ರ ಜೋಡನೆಯ ಪ್ರಕ್ರಿಯೆಯು ತುಂಬಾ ಸುಲಭವಾಗಿದ್ದು, ಇದನ್ನು ಬಳಕೆದಾರರಿಂದಲೇ ಮಾಡಬಹುದಾಗಿದೆ.

ಸುಗಮ ಸವಾರಿಗಾಗಿ ಈ ವೀಲ್‌ಚೇರ್ ಮೋಟಾರ್ಸೈಕಲ್‌ನ ಮುಂಭಾಗದಲ್ಲಿ ಒಂದು ಟೆಲಿಸ್ಕೋಪಿಕ್ ಸಸ್ಪೆನ್ಶನ್ ಅನ್ನು ಅಳವಡಿಸಲಾಗಿದೆ. ಶೋಕಗಳು ಹೀರಿಕೊಳ್ಳುವ ಸಸ್ಪೆನ್ಶನಗಳು ಇರುವುದರಿಂದ ಇದರಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದು. ನಿಯೋಬೋಲ್ಟ್ ಪ್ರಮಾಣಿತ ವೀಲ್‌ಚೇರ್‌ಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲದೇ ಒರಟಾದ ಭೂಪ್ರದೇಶದಲ್ಲಿ ಅಥವಾ ವೇಗವಾಗಿ ಓಡಿಸಲು ಆಗುವುದಿಲ್ಲ. ಬದಲಾಗಿ ಕಡಿಮೆ ಸ್ಪೀಡ್‌ನಲ್ಲಿ ಉತ್ತಮ ರಸ್ತೆಗಳಲ್ಲಿ ಸಂಚಿರಿಸಲು ನಿರ್ಮಿಸಲಾಗಿದೆ. ನಿಯೋಬೋಲ್ಟ್‌ಗೆ ಪವರ್ ನೀಡಲು ಹಬ್ ಮೋಟಾರ್ ಹೊಂದಿರುವ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒದಗಿಸಲಾಗಿದೆ, ಈ ಕುರಿತ ಸ್ಪೆಕ್ಸ್ ಅನ್ನು ಕಂಪನಿ ಬಹಿರಂಗಪಡಿಸಿಲ್ಲ.

ಮಾರುಕಟ್ಟೆಯಲ್ಲಿ ನಿಯೋಬಾಲ್ಟ್‌ನ ಆರಂಭಿಕ ಬೆಲೆ 94,900 ರೂ. ಇದ್ದು, ಈ ಎಲೆಕ್ಟ್ರಿಕ್ ವೀಲ್‌ಚೇರ್ 25kmph ಗರಿಷ್ಠ ವೇಗದಲ್ಲಿ ಚಲಿಸುವಂತೆ ಡಿಸೈನ್ ಮಾಡಲಾಗಿದೆ. ಒಂದೇ ಚಾರ್ಜ್‌ನಲ್ಲಿ 30km ವ್ಯಾಪ್ತಿಯನ್ನು ಸಹ ನೀಡುತ್ತದೆ ಎಂದು ನಿಯೋ ಮೋಷನ್ ಹೇಳಿಕೊಂಡಿದೆ. ಮೂರು-ಪಿನ್ ಹೋಮ್ ಸಾಕೆಟ್‌ಗೆ ಹೊಂದಿಕೆಯಾಗುವ ಚಾರ್ಜರ್‌ನೊಂದಿಗೆ ಬ್ಯಾಟರಿ ಚಾರ್ಜ್ ಮಾಡಲು ಸುಮಾರು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

ಡಿಜಿಟಲ್ ಬ್ಯಾಟರಿ ಲೆವಲ್ ಇಂಡಿಕೇಟರ್, ಡ್ಯಾಶ್‌ಬೋರ್ಡ್, ಸ್ಪೀಡ್ ಲಿಮಿಟರ್, ಹಾರನ್, ಹೆಡ್‌ಲೈಟ್, ಡೇಲೈಟ್, ಸೈಡ್ ಇಂಡಿಕೇಟರ್‌ಗಳು ಮತ್ತಿತರ ವೈಶಿಷ್ಟ್ಯಗಳನ್ನು ಈ ಎಲೆಕ್ಟ್ರಿಕ್ ವೀಲ್‌ಚೇರ್ ಮೋಟಾರ್‌ಸೈಕಲ್ ಒಳಗೊಂಡಿದೆ. ಈ ವೈಶಿಷ್ಟ್ಯಗಳು ನಿಯೋಬಾಲ್ಟ್ ಭಿನ್ನತೆಯನ್ನು ಹೊಂದಿರುವವರಿಗೆ ತುಂಬಾ ಅನುಕೂಲಕರವಾಗಿದೆ.

ನಿಯೋಬಾಲ್ಟ್ ಆ್ಯಂಟಿ ಟಿಪ್ಪರ್ ಸ್ಪೀಡ್ ರೆಗ್ಯುಲೇಟರ್ ಅನ್ನು ಬಳಸಿದೆ. ಆದ್ದರಿಂದ ಭಯವಿಲ್ಲದೇ ವೇಗದಲ್ಲಿ ಡ್ರೈವ್ ಮಾಡಬಹುದು. ಭಿನ್ನಾಭಿಪ್ರಾಯಗಳಿಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೆ ಮೋಟಾರ್‌ಸೈಕಲ್ ವೀಲ್‌ಚೇರ್‌ನಲ್ಲಿ ಕಾರ್ಗೋ ಕ್ಯಾರಿಯರ್ ಅನ್ನು ಜೋಡಣೆ ಮಾಡಿ ಇತರ ಸವಾರರೊಂದಿಗೆ ಪ್ರಯಾಣಿಸಬಹುದು.


Click it and Unblock the Notifications