ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಸುಜುಕಿ ಕಂಪನಿಯು ಇತ್ತೀಚೆಗೆ ತನ್ನ ಹೊಸ ತಲೆಮಾರಿನ ಸುಜುಕಿ ಹಯಾಬುಸಾ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಸುಜುಕಿ ಹಯಾಬುಸಾ ಭಾರತದಲ್ಲಿರುವ ಅಪ್ರತಿಮ ಬೈಕ್'ಗಳಲ್ಲಿ ಒಂದಾಗಿದೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಜುಕಿ ಹಯಾಬುಸಾ ಬೈಕಿನ ಮೊದಲ ಬ್ಯಾಚ್ ಮಾರಾಟವಾಯಿತು. ಇತ್ತೀಚೆಗೆ ಬಿಡುಗಡೆಯಾಗಿರುವ ವೀಡಿಯೊವೊಂದರಲ್ಲಿ 2021ರ ಸುಜುಕಿ ಹಯಾಬುಸಾ ಬೈಕಿನ ಮೊದಲ ಮಹಿಳಾ ಮಾಲೀಕರನ್ನು ಕಾಣಬಹುದು.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಬಿಯರ್ಡ್ ಬೈಕರ್ ಎಂಬ ಚಾನಲ್ ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ವೀಡಿಯೊದಲ್ಲಿ ವ್ಲಾಗ್ಗರ್ ತಮ್ಮ ಹೆಂಡತಿಯನ್ನು ಹೊಸ ಸೂಪರ್ ಬೈಕ್'ನೊಂದಿಗೆ ಅಚ್ಚರಿಗೊಳಿಸುತ್ತಾನೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಮೊದಲಿಗೆ ಆತನ ಹೆಂಡತಿಗೆ 2021ರ ಸುಜುಕಿ ಹಯಾಬುಸಾ ಬೈಕ್ ಅನ್ನು ಖರೀದಿಸಲಾಗಿದೆ ಎಂಬುದೇ ತಿಳಿದಿರುವುದಿಲ್ಲ. ಆತನ ಹೆಂಡತಿಯ ಹೆಸರು ಅಂಕಿತಾ ಖನ್ನಾ. ಈ ಮೂಲಕ ಅಂಕಿತಾ ಖನ್ನಾ 2021ರ ಸುಜುಕಿ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಸುಜುಕಿ ಕಂಪನಿಯು ಹೊಸ ಹಯಾಬುಸಾ ಬೈಕಿನ ಕೇವಲ 101 ಯುನಿಟ್'ಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಿದೆ. ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಎಲ್ಲಾ ಯುನಿಟ್'ಗಳು ಕೇವಲ ಎರಡು ದಿನಗಳಲ್ಲಿ ಮಾರಾಟವಾಗಿವೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಹಯಾಬುಸಾ ಬೈಕ್ ಅನ್ನು ಜನರು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಮೊದಲ ಬ್ಯಾಚ್‌ನಲ್ಲಿ ಮಾರಾಟವಾದ ಹಯಾಬುಸಾ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.16.4 ಲಕ್ಷಗಳಾಗಿದೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಕಂಪನಿಯು ಹೊಸ 2021 ಸುಜುಕಿ ಹಯಾಬುಸಾ ಬೈಕ್ ಅನ್ನು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ / ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್ / ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್ / ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಮೂರು ಹೊಸ ಬಣ್ಣ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಈ ಬೈಕಿನ ವಿತರಣೆಯನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಕಂಪನಿಯು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದೆ. ಹಳೆಯ ಮಾದರಿಯಲ್ಲಿದ್ದ ಚಾಸಿಸ್'ನಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಜೊತೆಗೆ ಟ್ವಿನ್ ಸ್ಪಾರ್ ಅಲ್ಯೂಮಿನಿಯಂ ಫ್ರೇಮ್ ಸಹ ಮುಂದುವರೆದಿದೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಈ ಬೈಕ್ 1,480 ಎಂಎಂ ವ್ಹೀಲ್‌ಬೇಸ್‌, 120 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 800 ಎಂಎಂ ಸೀಟ್ ಹೈಟ್ ಹೊಂದಿದೆ. 2021ರ ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿ, 4-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಳೆಯ ಮಾದರಿಗೆ ಹೋಲಿಸಿದರೆ ಪವರ್ ಅಂಕಿ ಅಂಶಗಳು ಕಡಿಮೆಯಾಗಿದ್ದರೂ, ಅದರ ಪರ್ಫಾಮೆನ್ಸ್ ಮೊದಲಿಗಿಂತ ಉತ್ತಮವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಈಕೆ ಹೊಸ ಹಯಾಬುಸಾ ಬೈಕ್ ಖರೀದಿಸಿದ ಭಾರತದ ಮೊದಲ ಮಹಿಳೆ

ಈ ಬೈಕ್ 6 ಆಕ್ಸಿಸ್ ಐಎಂಯು ಆಧಾರಿತ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ವ್ಹೀಲಿ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಮೂರು ಪವರ್ ಮೋಡ್‌, ಟೂ ವೇ ಕ್ವಿಕ್‌ಶಿಫ್ಟರ್ ಹಾಗೂ ಎಬಿಎಸ್'ಗಳನ್ನು ಹೊಂದಿದೆ.

ಚಿತ್ರ ಕೃಪೆ: ಮೊದಲ ಆರು ಚಿತ್ರಗಳನ್ನು ಬಿಯರ್ಡ್ ಬೈಕರ್'ನಿಂದ ಪಡೆಯಲಾಗಿದೆ.

Most Read Articles

Kannada
English summary
New Hayabusa bike delivered to first female owner in India. Read in Kannada.
Story first published: Wednesday, June 23, 2021, 14:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X