ಪ್ರಪಾತಕ್ಕೆ ಬಿದ್ದ ಹೊಸ 'ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್'

ಕೆಲವಡೆ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿರುತ್ತದೆ. ವಾಹನಗಳನ್ನು ಅಲ್ಲೇ ಓಡಿಸಲು ಹೋಗಿ ಚಾಲಕರು ಪೇಚಿಗೆ ಸಿಲುಕಿಕೊಳ್ಳುತ್ತಾರೆ. ಅಂತಹದೇ ವಿಡಿಯೋ ವೈರಲ್ ಆಗಿದೆ.

ಇಲ್ಲಿ ಹೊಸ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮಾಲೀಕರು ಅಂತಹದೇ ಪ್ರಯತ್ನವನ್ನು ಮಾಡಿದ್ದು, ಇದಕ್ಕೆ ತಕ್ಕ ಬೆಲೆಯನ್ನು ತೆತ್ತಿದ್ದಾರೆ. ಮಳೆಯಿಂದಾಗಿ ಬೆಟ್ಟಗಳ ಮೇಲೆಂದ ನೀರು ರಭಸವಾಗಿ ಕೆಳಗೆ ಹರಿಯುತ್ತಿದ್ದು, ಹೊಳೆಯು ತುಂಬಿ ಹರಿಯುತ್ತಿದೆ. ಇದನ್ನು ದಾಟಲು ಹೋಗಿ ವಾಹನವನ್ನೇ ಕಳೆದುಕೊಂಡಿದ್ದಾರೆ.

ಈ ಘಟನೆಯಲ್ಲಿ ನಡೆದಿದ್ದು ಇಷ್ಟೇ... ಧಾರಾಕಾರ ಮಳೆಯಿಂದಾಗಿ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ. ಚಾಲಕ ಸ್ಕಾರ್ಪಿಯೋ ಕಾರನ್ನು ಅದರಲ್ಲಿ ಡ್ರೈವ್‌ ಮಾಡಿಕೊಂಡು ಮುಂದೆ ಸಾಗಲು ಪ್ರಯತ್ನ ಮಾಡಿದ್ದಾರೆ. ಆದರೆ, ಅವರಿಗೆ ಅದು ಸಾಧ್ಯವಾಗಿಲ್ಲ. ಕಾರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಲಾರಂಭಿಸಿದೆ. ಆಗ ಪ್ರಾಣ ಉಳಿಸಿಕೊಳ್ಳಲು ಕಾರನ್ನು ಬಿಟ್ಟು ಹೊರಬಂದಿದ್ದು, ಸ್ಕಾರ್ಪಿಯೊ ಪ್ರಪಾತಕ್ಕೆ ಬಿದ್ದಿದೆ. ಇದನ್ನು ಅಲ್ಲೇ ಇದ್ದ ಬೇರೆ ವಾಹನ ಸವಾರರು ಸೆರೆ ಹಿಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಆದರೆ, ಇದು ಯಾವ ಸ್ಥಳ, ಕಾರು ಬಿದ್ದ ಈ ಪ್ರಪಾತ ಎಷ್ಟು ಆಳವಾಗಿತ್ತು ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಹೊಸ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ವಾಹನ ಸಂಪೂರ್ಣವಾಗಿ ಜಖಂ ಆಗಿರಬಹುದು ಎಂದು ಹೇಳಲಾಗಿದೆ. ಸ್ಕಾರ್ಪಿಯೋ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಇತರೆ ವಾಹನಗಳ ಚಾಲಕರು ರಸ್ತೆ ದಾಟಲು ಧೈರ್ಯ ಮಾಡದೇ ಅಲ್ಲೇ ಉಳಿದಿದ್ದಾರೆ. ಇಂತಹ ಹುಚ್ಚು ಸಾಹಸಕ್ಕೆ ಕೈಹಾಕುವ ಮುನ್ನ ಒಮ್ಮೆ ಯೋಚಿಸಿದರೆ ಒಳ್ಳೆಯದು.

ಚಾಲಕನ ಈ ತಪ್ಪು ನಿರ್ಧಾರದಿಂದ ಆಗಿದ್ದು ನಷ್ಟವೇ ಹೊರತು ಬೇರೇನೂ ಅಲ್ಲ. ಇಂತಹ ಘಟನೆಗಳಲ್ಲಿ ವಿಮೆಯನ್ನು ಸಹ ಕ್ಲೈಮ್‌ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಯಬೇಕು. ಈ ಸ್ಕಾರ್ಪಿಯೊ ನೋಂದಣಿ ಸಂಖ್ಯೆ ಸಹ ಹೊಂದಿಲ್ಲ. ಆದ್ದರಿಂದ ಇತ್ತೀಚೆಗೆ ಖರೀದಿ ಮಾಡಿರುವ ನೂತನ ಕಾರು ಎಂಬುದು ಗೊತ್ತಾಗುತ್ತದೆ. ಇಂತಹ ಘಟನೆಗಳು ಅಪರೂಪವೇನಲ್ಲ. ಈ ಹಿಂದೆಯೂ ಇಂತಹದ್ದೇ ಹಲವಾರು ಸನ್ನಿವೇಶಗಳು ಎದುರಾಗಿವೆ. ಆದರೆ, ಜನರು ಮಾತ್ರ ಈ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ.

ನಿಮ್ಮ ವಾಹನದ ಬಗ್ಗೆ ಅರಿವಿರಲಿ

ಕಾರು ಚಲಾಯಿಸುವ ಪ್ರತಿಯೊಬ್ಬರಿಗೂ ತಮ್ಮ ವಾಹನದ ಬಗ್ಗೆ ಸಂಪೂರ್ಣವಾಗಿ ಅರಿವಿರಬೇಕು. ಕಾರು ಬಹಳಷ್ಟು ಸಾಮರ್ಥ್ಯ ಹೊಂದಿದೆ ಎಂದು ಭಾವಿಸಿ, ಈ ರೀತಿ ಮಾಡಲು ಹೊಂದರೆ ನಮ್ಮ ಪ್ರಾಣಕ್ಕೆ ಹಾನಿಯಾಗಬಹುದು. ಮಾರುಕಟ್ಟೆಗೆ ಬರುವ ಹೆಚ್ಚಿನ ಆಧುನಿಕ ಕಾರುಗಳು ಈಗ ಎಲೆಕ್ಟ್ರಿಕಲ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಅವುಗಳನ್ನು ನೀರಿನಿಂದ ತುಂಬಿರುವ ರಸ್ತೆಗಳಲ್ಲಿ ಓಡಿಸುವುದು ಅತ್ಯಂತ ಅಪಾಯಕಾರಿ. ಆ ವಾಹನಗಳ ಎಲ್ಲಾ ವಿಂಡೋಗಳು ವಿದ್ಯುಚ್ಛಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ನೀರು ಕಾರಿನಲ್ಲಿ ತುಂಬಿದರೆ ಅವು ಕೆಲಸ ಮಾಡುವುದಿಲ್ಲ.

ಅಲ್ಲದೆ, ವಾಹನದ ಹೊರಗೆ ನೀರು ರಭಸದಿಂದ ಹರಿಯುತ್ತಿದ್ದಾರೆ. ಆಗ ಕಾರಿನ ಡೋರ್ ಓಪನ್ ಮಾಡುವುದು ಅಸಾಧ್ಯ. ಹೀಗಾಗಿ, ವಾಹನದ ವಿಂಡೋ ಗಾಜುಗಳನ್ನು ಒಡೆದು ಹೊರಗೆ ಬರುವುದೊಂದೇ ದಾರಿ. ಈ ಮೂಲಕ ಪ್ರಾಣ ಉಳಿಸಿಕೊಳ್ಳಬಹುದು. ನಮ್ಮ ಮುಂದಿರುವ ಇನ್ನೊಂದು ಐಡಿಯಾವೆಂದರೆ ಜಲಾವೃತವಾಗಿರುವ ರಸ್ತೆಯನ್ನು ಕಂಡರೆ ಬೇರೆ ದಾರಿಯಲ್ಲಿ ಹೋಗುವುದು ಉತ್ತಮ. ಏಕೆಂದರೆ, ಇಂತಹ ರಸ್ತೆಗಳಲ್ಲಿ ಅನೇಕ ಗುಂಡಿಗಳಿರುತ್ತವೆ. ಜಲಾವೃತವಾಗಿವುದರಿಂದ ಅವು ಕಾಣುವುದಿಲ್ಲ. ಇದರಿಂದ ವಾಹನಕ್ಕೆ ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಆಕರ್ಷಕ ಲುಕ್ ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದರ ಎಂಜಿನ್ 3,750rpmನಲ್ಲಿ 130bhp ಪವರ್ ಹಾಗೂ 1,600 ಮತ್ತು 2,800rpm ನಡುವೆ 300Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅದರ ಹಿಂದಿನ ಆವೃತ್ತಿಗೆ ಹೋಲಿಸಿದರೆ 55kg ಹಗುರವಾಗಿದೆ. ಈ ಕಾರನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಸೆಟ್‌ಅಪ್ ಹೊಂದಿರುವ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ.

Most Read Articles

Kannada
English summary
New mahindra scorpio classic fell into the precipice
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X