ಮಹೀಂದ್ರಾದ ಹೊಚ್ಚ ಹೊಸ ಜನಪ್ರಿಯ ಕಾರು 3 ದಿನದಲ್ಲಿ ನಡುರಸ್ತೆಯಲ್ಲಿ ಕೆಟ್ಟು ನಿಂತು ಬಿಡ್ತು!

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮಹೀಂದ್ರಾ ಗುರುತಿಸಿಕೊಂಡಿದೆ. ಪ್ರಮುಖವಾಗಿ ಬಹುಬೇಡಿಕೆಯ ಸ್ಕಾರ್ಪಿಯೋ-ಎನ್‌ ಹಾಗೂ XUV700 ಅನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ XUV700 ಎಸ್‌ಯುವಿ ಇತ್ತೀಚೆಗೆ ಸಖತ್ ಸುದ್ದಿ ಮಾಡುತ್ತಿದೆ. ಇಲ್ಲಿಯು ಸಹ ಮೂರು ದಿನಗಳ ಹಿಂದೆ, ವಿತರಣೆ ಪಡೆದಿದ್ದ ಈ ಕಾರು ನಡುರಸ್ತೆಯಲ್ಲಿಯೇ ಕೆಟ್ಟು ನಿಂತಿದೆ.

ಈ ಬಗ್ಗೆ ಸ್ವತಃ ಕಾರಿನ ಮಾಲಿಕ ರಿಚರ್ಡ್.ಎಂ.ನಾಥನ್ ಅವರೇ ಟ್ವೀಟ್ ಮಾಡಿದ್ದು, ಅಂದು ಏನು ನಡೆದಿದೆ ಎಂಬುದರ ಬಗ್ಗೆ ವಿವರಿಸಿದ್ದಾರೆ. ಬರೋಬ್ಬರಿ 15 ತಿಂಗಳ ಕಾಯುವಿಕೆ ಬಳಿಕ, ಜೂನ್ 1ರಂದು ಮಹೀಂದ್ರಾ XUV700 ಎಸ್‌ಯುವಿಯನ್ನು ವಿತರಣೆ ಪಡೆದೆ. ಜೂನ್ 2ರಂದು ನೋಂದಣಿ ಮಾಡಿಸಿದೆ. ಜೂನ್ 5ರಂದು ಕಾರನ್ನು ಹೊರಗೆ ತೆಗೆದುಕೊಂಡು ಹೋದೆ.

ಮಹೀಂದ್ರಾದ ಹೊಚ್ಚ ಹೊಸ ಜನಪ್ರಿಯ ಕಾರು 3 ದಿನದಲ್ಲಿ ನಡುರಸ್ತೆಯಲ್ಲಿ ಕೆಟ್ಟು ನಿಂತು ಬಿಡ್ತು!

ಹೇಳಿ-ಕೇಳಿ ಚೆನ್ನೈನ ಲುಜ್ ಕಾರ್ನರ್ ಸಿಗ್ನಲ್‌ ನಲ್ಲಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಅಲ್ಲಿ ಮಧ್ಯಾಹ್ನ 2.50ರ ಸುಮಾರಿಗೆ ಈ ನೂತನ XUV700 ಇದ್ದಕ್ಕಿದಂತೆ ಫ್ರಿಜ್ ಆಗಿ ನಿಂತು ಬಿಡುತ್ತದೆ. ನಾನು ಮಹೀಂದ್ರಾದ ರೋಡ್ ಸೈಡ್ ಅಸ್ಸಿಸ್ಟನ್ಸ್ ಸಿಬ್ಬಂದಿಯನ್ನು ಸಂಪರ್ಕಿಸುತ್ತೇನೆ. ಅವರು ಸ್ಥಳಕ್ಕೆ ಬಾರದೇ ಮೊಬೈಲ್ ನಲ್ಲಿಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು.

ಸಿಬ್ಬಂದಿಯ ಈ ಕೆಲಸ ಬೇಸರ ತರಿಸಿದ್ದು, ಕೇವಲ ಮೂರು ದಿನದ ಹಿಂದೆ ವಿತರಣೆ ಪಡೆದ ಕಾರನ್ನು ಸರ್ವಿಸ್ ಮಾಡಿದರೆ ಮತ್ತೆ ಸಮಸ್ಯೆಯಾಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ. ಈಗಾಗಲೇ ಗ್ರಾಹಕರೊಂದಿಗೆ ಈ ರೀತಿಯಾಗಿ ವರ್ತಿಸಿರುವ ಸಿಬ್ಬಂದಿ ಮುಂದೆಯು ಹೀಗೆ ಮಾಡುವುದಿಲ್ಲವೇ? ಅದಕ್ಕೆ ನನಗೆ ಈ ಕಾರು ಬೇಡ. ಸಂಪೂರ್ಣ ಹಣ ವಾಪಾಸ್ ಬೇಕೆಂದು ರಿಚರ್ಡ್ ಹೇಳಿದ್ದಾರೆ.

ವರದಿಗಳ ಪ್ರಕಾರ, XUV700 ಎಸ್‌ಯುವಿಯನ್ನು ಸಮೀಪದ ಸರ್ವಿಸ್ ಸೆಂಟರ್ ಗೆ ಸ್ಥಳಾಂತರಿಸಲು 3 ಗಂಟೆಗಳ ನಂತರ ಟೋಯಿಂಗ್ ವ್ಯಾನ್ ಬಂದಿದೆ. ಇನ್ನು, ರಿಚರ್ಡ್ ತಮ್ಮ ಟ್ವೀಟ್ ಅನ್ನು ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರೆಗೂ ಟ್ಯಾಗ್ ಮಾಡಿದ್ದಾರೆ. ಸದ್ಯ, ಈ ವಿವಾದವನ್ನು ಮಹೀಂದ್ರಾ ಕಂಪನಿ ಹೇಗೆ ಬಗೆಹರಿಸಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

ಕೆಲವೇ ದಿನಗಳ ಹಿಂದೆ, ರಾಜಸ್ಥಾನದ ಜೈಪುರದ ಹೆದ್ದಾರಿಯೊಂದರಲ್ಲಿ XUV700 ಎಸ್‌ಯುವಿವೊಂದು ಹೊತ್ತಿ ಉರಿದಿತ್ತು. ಕುಲದೀಪ್ ಸಿಂಗ್ ಎಂಬುವವರು ತಮ್ಮ ಕುಟುಂಬದೊಂದಿಗೆ ಆರು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ XUV 700ನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಕುಲದೀಪ್ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನೆ ಬಗ್ಗೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಮಹೀಂದ್ರಾ ಕಂಪನಿ, ಆಫ್ಟರ್ ಮಾರ್ಕೆಟ್ ಎಲೆಕ್ಟ್ರಿಕಲ್ ಆಕ್ಸೆಸರಿಗಳನ್ನು ಅಳವಡಿಸಲು ಎಲೆಕ್ಟ್ರಿಕಲ್ ವೈರಿಂಗ್ ಅನ್ನು ಟ್ಯಾಂಪರಿಂಗ್ ಮಾಡಿರುವುದು ಅಗ್ನಿ ಅವಘಡಕ್ಕೆ ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಗ್ರಾಹಕರು ಅನಧಿಕೃತ ವ್ಯಕ್ತಿಗಳಿಂದ ವಾಹನವನ್ನು ಮಾರ್ಪಾಡು ಮಾಡುವುದನ್ನು ತಪ್ಪಿಸಿ' ಎಂದು ಸಲಹೆ ನೀಡಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

Article Published On: Tuesday, June 6, 2023, 16:08 [IST]
English summary
New mahindra xuv700 breaks down in middle chennai city
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+