ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಮೆಕ್ಲಾರೆನ್ 765 ಎಲ್‌ಟಿ ಮೆಕ್ಲಾರೆನ್ ಕಂಪನಿಯು ಮಾರಾಟ ಮಾಡುವ ಸೀಮಿತ ಸ್ಪೋರ್ಟ್ಸ್ ಕಾರ್ ಆಗಿದೆ. ಕಂಪನಿಯು ಈ ಕಾರಿನ ಕೆಲವೇ ಕೆಲವು ಯುನಿಟ್'ಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡುತ್ತದೆ.

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಇತ್ತೀಚೆಗೆ ಖರೀದಿಸಿದ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಪೆನ್ಸಿಲ್ವೇನಿಯಾದ ಗ್ಯಾಸ್ ಸ್ಟೇಷನ್‌ನಲ್ಲಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯ ಅಗ್ನಿಶಾಮಕ ಇಲಾಖೆ ಪ್ರಕಟಿಸಿದ ವರದಿಗಳ ಪ್ರಕಾರ ಮೆಕ್ಲಾರೆನ್ ಕಾರಿದ್ದ ಜಾಗದಲ್ಲಿ ಗ್ಯಾಸ್ ಸ್ಟೇಷನ್ ಇದ್ದ ಕಾರಣಕ್ಕೆ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಇಲಾಖೆ 2 ಗಂಟೆ ತೆಗೆದು ಕೊಂಡಿದೆ.

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಕಾರಿಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಅಗ್ನಿಶಾಮಕ ಇಲಾಖೆಗೆ ತಕ್ಷಣವೇ ಸೂಚನೆ ನೀಡಲಾಗಿತ್ತು. ಆದರೆ ಅಗ್ನಿಶಾಮಕ ಇಲಾಖೆ ಸ್ಥಳಕ್ಕೆ ಬರುವುದು ತಡವಾಗಿದೆ. ಅಷ್ಟೊತ್ತಿಗೆ ರೂ.2.66 ಕೋಟಿ ಮೌಲ್ಯದ ಮೆಕ್ಲಾರೆನ್ 765 ಎಲ್‌ಟಿ ಕಾರು ಸಂಪೂರ್ಣವಾಗಿ ಸುಟ್ಟುಹೋಗಿತ್ತು.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಈ ಕಾರು ಫೈಬರ್ ಚಾಸಿಸ್ ಆಗಿರುವುದರಿಂದ, ಸುಟ್ಟ ಸ್ಥಿತಿಯಲ್ಲಿರುವ ಕಾರಿನ ಯಾವುದೇ ಭಾಗಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಕಾರನ್ನು ಕೇವಲ ಮೂರು ದಿನಗಳ ಹಿಂದಷ್ಟೇ ಖರೀದಿಸಲಾಗಿತ್ತು.

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಈ ಐಷಾರಾಮಿ ಕಾರಿನಲ್ಲಿ ಕೇವಲ 160 ಕಿ.ಮೀಗಳಷ್ಟು ಸಂಚರಿಸಲಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಬೆಂಕಿಗೆ ಕಾರಣವೇನು ಎಂಬುದನ್ನು ಅಗ್ನಿಶಾಮಕ ಇಲಾಖೆ ಪತ್ತೆ ಹಚ್ಚಿಲ್ಲ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಆದರೆ ಕಾರಿನ ಎಕ್ಸಾಸ್ಟ್ ಪೈಪ್‌ ಮೇಲೆ ಆಕಸ್ಮಿಕವಾಗಿ ಇಂಧನ ಬಿದ್ದ ಕಾರಣ ಕಾರಿಗೆ ಬೆಂಕಿ ಹೊತ್ತಿ ಕೊಂಡಿದೆ ಎಂಬುದು ಕಾರಿನ ಮಾಲೀಕರ ಹೇಳಿಕೆ.ಈ ಕಾರಿನ ಬೆಲೆ ಸುಮಾರು ರೂ.2.66 ಕೋಟಿಗಳಾಗಿದ್ದರೂ ಕಾರು ಮಾಲೀಕರು ಈ ಕಾರಿಗೆ ಸುಮಾರು ರೂ.4.2 ಕೋಟಿ ನೀಡಿ ಖರೀದಿಸಿದ್ದರು ಎಂದು ಹೇಳಲಾಗಿದೆ.

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಕಾರಿನ ಹಿಂಭಾಗವು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಮುಂಭಾಗಕ್ಕೆ ಹೆಚ್ಚು ಬೆಂಕಿ ಹರಡಿಲ್ಲ. ಎಂಜಿನ್ ಮುಚ್ಚಳವು ಹಾಗೇ ಉಳಿದಿದೆ. ಈ ಕಾರಿನ ಯಾವುದೇ ಭಾಗವು ಬಳಸಲು ಯೋಗ್ಯವಾಗಿಲ್ಲ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಈ ಐಷಾರಾಮಿ ಸ್ಪೋರ್ಟ್ಸ್ ಕಾರಿನಲ್ಲಿ 4.0-ಲೀಟರ್ ಟ್ವಿನ್-ಟರ್ಬೊ ವಿ 8 ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 755 ಬಿಹೆಚ್‌ಪಿ ಪವರ್ ಹಾಗೂ 800 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಯ್ತು ಮೂರು ದಿನಗಳ ಹಿಂದೆ ಖರೀದಿಸಿದ್ದ ಐಷಾರಾಮಿ ಕಾರು

ಈ ಎಂಜಿನ್'ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಕಾರು ಕೇವಲ 2.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಚಿತ್ರ ಕೃಪೆ: ಅಪ್ಪರ್ ಗ್ವೆನೆಡ್ ಟೌನ್ ಶಿಪ್ ಫೈರ್ ಡಿಪಾರ್ಟ್ ಮೆಂಟ್

Most Read Articles

Kannada
English summary
New Mclaren sports car burns to ashes. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X