ಇನ್ಮುಂದೆ ಟ್ರಾಫಿಕ್‌ ನಿಯಮ ಉಲ್ಲಂಘಿಸಿದರೆ 11 ಲಕ್ಷದಿಂದ ದಂಡ ಆರಂಭ: ನೀವೊಮ್ಮೆ ಟ್ರೈ ಮಾಡ್ತೀರಾ?

ಭಾರತದಲ್ಲಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸುವುದು ಸರ್ವೇ ಸಾಧಾರಣವಾದ ವಿಷಯ. ದಿನಂಪ್ರತಿ ಟ್ರಾಫಿಕ್‌ ನಿಯಮಗಳ ಉಲ್ಲಂಘನೆಗೆ ಸಂಭಂಧಿಸಿದಂತೆ ಸಾವಿರಾರು ಪ್ರಕರಣಗಳು ದಾಖಲಾಗುತ್ತದೆ. ಇದಕ್ಕೆ ದಂಡವನ್ನು ಎಷ್ಟೇ ವಿಧಿಸಿದರೂ ಕೊಂಚವೂ ಸುಧಾರಿಸದೇ ಮತ್ತೆ ಮಾರನೇ ದಿನ ಅದೇ ರೀತಿಯ ಪ್ರಕರಣಗಳು ದಾಖಲಾಗುತ್ತಿರುತ್ತವೆ ಎಂಬುದು ಎಲ್ಲರಿಗೂ ಗೊತ್ತು.

ಇದೀಗ ಇಲ್ಲೊಂದು ಕಡೆ ರೀತಿ ಟ್ರಾಫಿಕ್‌ ನಿಯಮಗಳನ್ನು (Traffic Rule) ಉಲ್ಲಂಘಿಸಿದರೆ ಕಠಿಣ ಶಿಕ್ಷಯೆಯಾಗಿ ಸುಮಾರು 11 ಲಕ್ಷ ರೂಪಾಯಿಗಳನ್ನು ದಂಡವಾಗಿ ತೆರಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಜುಲೈ ಆರರಿಂದಲೇ ನಿಯಮ ಜಾರಿಗೆ ಬಂದಿದ್ದು, ಜನರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

New Traffic Rule In Dubai

ಹೌದು, ನಂಬಲು ಕಷ್ಟವಾದರೂ ಇದು ಸತ್ಯ. ಕಠಿಣ ನಿಯಮ ಜಾರಿಗೆ ಬಂದಿರುವುದು ಶ್ರೀಮಂತ ರಾಷ್ಟ್ರ ದುಬೈನಲ್ಲಿ. ಇಲ್ಲಿ ಇನ್ನು ಮುಂದೆ ನೀವು ಯಾವುದೇ ಸಂಧರ್ಭದಲ್ಲಾದರೂ ಇಲ್ಲಿನ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ದಂಡವಾಗಿ ನೀವು ಸುಮಾರು ಹನ್ನೊಂದು ಲಕ್ಷ ರೂಗಳನ್ನು ಪಾವತಿಸಬೇಕಾಗುತ್ತದೆ.

ಮಾಹಿತಿಗಳ ಪ್ರಕಾರ ಇಲ್ಲಿ ಇಷ್ಟು ದೊಡ್ಡ ದಂಡವನ್ನು ಯಾವ ಯಾವ ತಪ್ಪು ಮಾಡಿದರೆ ಪಾವತಿಸಬೇಕು ಎನ್ನುವುರ ಸಂಪೂರ್ಣ ಲಿಸ್ಟ್‌ ಅನ್ನು ಸಹ ಅಲ್ಲಿನ ಸರ್ಕಾರ ಜನರ ಮುಂದಿಟ್ಟಿದ್ದು, ಇವುಗಳಲ್ಲಿ ಹಲವರು ನಮ್ಮ ದೇಶದಲ್ಲಿ ಮಾಡುತ್ತಿರುವ ತಪ್ಪುಗಳಾಗಿದೆ. ಅವುಗಳು ಯಾವುವು ಎಂದು ಈಗ ನೊಡೋಣ.

New Traffic Rule In Dubai

ಇನ್ನು ಇಲ್ಲಿನ ಸಾರ್ವಜನಿಕ ರಸ್ತೆಗಳಲ್ಲಿ ಮಾಡಿಫೈಗೊಳಿಸಿದ ವಾಹನಗಳನ್ನು ಓಡಿಸುವುದರಿಂದ ಶಿಕ್ಷೆಗೆ ಒಳಗಾಗುತ್ತಾರೆ. ಅದು ಮಾತ್ರವಲ್ಲದೇ, ವಾಹನಗಳನ್ನು ಇತರರ ಜೀವನಕ್ಕೆ ಹಾನಿಯಾಗುವ ರೀತಿ ಯರ್ರಾಬಿರ್ರಿಯಾಗಿ ಓಡಿಸಿದ್ದೇ ಆದಲ್ಲಿ ನೀವು ಇಲ್ಲಿನ ಸರ್ಕಾರಕ್ಕೆ ದೊಡ್ಡ ಮೊತ್ತದ ದಂಡವನ್ನು ತೆರಬೇಕಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಇಷ್ಟು ಮಾತ್ರವಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಅಂದರೆ ಉದ್ದೇಶ ಪೂರ್ವಕವಾಗಿ ವಾಹನಗಳ ರೇಸ್‌ ಮಾಡಿದರೆ ಅಂತಹ ವಾಹನಗಳ ಮಾಲೀಕರಿಗೆ ಈಗಿರುವ ಮೊತ್ತದ ಡಬಲ್‌ ಅಂದರೆ 11 ಲಕ್ಷದ ಬದಲಾಗಿ ಸುಮಾರು 22 ಲಕ್ಷ ರೂಗಳನ್ನು ದಂಡವಾಗಿ ವಿಧಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಕಥಿಣ ಎಚ್ಚರಿಕೆಯನ್ನು ನೀಡಿದೆ.

ರೆಡ್‌ ಲೈಟ್‌ ಜಂಪ್‌ ಮಾಡುವುದು, ಸುಳ್ಳು ದಾಖಲೆಗಳೊಂದಿಗೆ ವಾಹನ ಚಲಾಯಿಸುವುದು ಮತ್ತು ಮುಖ್ಯವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಹೀಗೆ ಇನ್ನೂ ಹತ್ತು ಹಲವಾರು ಟ್ರಾಫಿಕ್‌ ನಿಯಮಗಳು ಶಿಕ್ಷೆಯ ಅಡಿಯಲ್ಲಿ ಬರುತ್ತಿದ್ದು ಅಲ್ಲಿನ ನಾಗರೀಕರು ಇದರ ಬಗ್ಗೆ ಗಮನ ಹರಿಸಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 9, 2023, 9:00 [IST]
English summary
New traffic rule in dubai fine starting at rs 11 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+