Vande Bharat Express: ದೀಪಾವಳಿಗೆ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಎಲ್ಲಿಂದ, ಎಲ್ಲಿಗೆ?

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಪ್ರೀಮಿಯಂ ಹೈ - ಸ್ವೀಡ್ ರೈಲುಗಳಾಗಿ ಮನೆ ಮಾತಾಗಿದೆ. ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದೀಪಾವಳಿ ಹಬ್ಬಕ್ಕೆ ಈ ಮಾರ್ಗದಲ್ಲಿ ಹೊಸ ರೈಲು ಸಂಚಾರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ - ಕೇರಳ ನಡುವೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ದಕ್ಷಿಣ ರೈಲ್ವೆ (Southern Railway) ಯೋಜಿಸುತ್ತಿದೆ. ಈ ರೈಲು ಎರ್ನಾಕುಲಂ ಮತ್ತು ಬೆಂಗಳೂರು ನಡುವೆ ಸಂಚರಿಸಲಿದ್ದು, ನವೆಂಬರ್ 9 ರಂದು ಚೆನ್ನೈನಿಂದ ಕಾರ್ಯಚರಣೆಯನ್ನು ಆರಂಭಿಸಲಿದೆ. ಎಂಟು ಬೋಗಿಗಳನ್ನು ಒಳಗೊಂಡ ಈ ರೈಲನ್ನು ದೀಪಾವಳಿ ಹಬ್ಬದ ವೇಳೆ ವಾರಾಂತ್ಯದಲ್ಲಿ ಓಡಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Vande Bharat Express: ದೀಪಾವಳಿಗೆ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಎಲ್ಲಿಂದ, ಎಲ್ಲಿಗೆ?

ನೈಋತ್ಯ ರೈಲ್ವೆ (South Western Railway) ಅನುಮತಿ ನೀಡಿದ ಬಳಿಕ, ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆ ಆರಂಭವಾಗಲಿದೆ. ಈ ರೈಲು, ನವೆಂಬರ್ 9 - 12 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ಸಂಚಾರಿಸಲಿದೆ. ನವೆಂಬರ್ 9 ರಂದು ರಾತ್ರಿ ಚೆನ್ನೈನಿಂದ ಹೊರಟು ನವೆಂಬರ್ 10 ರಂದು ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ 4.30ಕ್ಕೆ ಎರ್ನಾಕುಲಂಗೆ ಹೊರಡುತ್ತದೆ. ಮಧ್ಯಾಹ್ನ 1.30ಕ್ಕೆ ಎರ್ನಾಕುಲಂ ತಲುಪಲಿದೆ.

ಮಧ್ಯಾಹ್ನ 2 ಕ್ಕೆ ಎರ್ನಾಕುಲಂನಿಂದ ಸಂಚಾರ ಆರಂಭಿಸಿ, ರಾತ್ರಿ 10.30ಕ್ಕೆ ಬೆಂಗಳೂರಿಗೆ ಬರಲಿದೆ. ನವೆಂಬರ್ 11 - 12 ರಂದು ಬೆಳಗ್ಗೆ 4.30ಕ್ಕೆ ಬೆಂಗಳೂರಿನಿಂದ ಕಾರ್ಯಾಚರಣೆ ಆರಂಭಿಸುವ ರೈಲು, ಮಧ್ಯಾಹ್ನ ಎರ್ನಾಕುಲಂ ತಲುಪಲಿದೆ. ಅಲ್ಲಿಂದ ರಾತ್ರಿ 10.30ಕ್ಕೆ ಬೆಂಗಳೂರಿಗೆ ಬರುವ ರೈಲು, ನವೆಂಬರ್ 12 ರಂದು ರಾತ್ರಿ 11.30ಕ್ಕೆ ಇಲ್ಲಿಂದ ಚೆನ್ನೈಗೆ ಹೊರಡಲಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

Vande Bharat Express: ದೀಪಾವಳಿಗೆ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಎಲ್ಲಿಂದ, ಎಲ್ಲಿಗೆ?

ಕರ್ನಾಟಕದಲ್ಲಿ ಶೀಘ್ರದಲ್ಲೆಯೇ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸುವ ನಿರೀಕ್ಷೆಯಿದೆ. ಮಂಗಳೂರು (Mangaluru) - ಗೋವಾ (Goa) ನಡುವೆ ಓಡಾಟ ನಡೆಸಲಿದ್ದು, ಈ ವರ್ಷಾಂತ್ಯದೊಳಗೆ ಕಾರ್ಯಚರಣೆ ನಡೆಸಲಿದೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಗೋವಾ-ಮಂಗಳೂರು ಮಧ್ಯೆ ವಂದೇ ಭಾರತ್ ಸಂಚಾರಕ್ಕೆ ರೈಲ್ವೆ ಸಚಿವರು, ಅನುಮತಿ ನೀಡುವ ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಹಿಂದೆ ಹೇಳಿದ್ದರು.

ಈಗಾಗಲೇ, ರಾಜ್ಯದಲ್ಲಿ ಮೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಒಂದು ರೈಲು ಮೈಸೂರು (Mysore) - ಬೆಂಗಳೂರು (Bengaluru) - ಚೆನ್ನೈ (Chennai) ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಮತ್ತೊಂದು, ಕಾಚಿಗುಡ (ಹೈದರಾಬಾದ್) - ಯಶವಂತಪುರ (ಬೆಂಗಳೂರು) ನಡುವೆ ಸಂಚರಿಸುತ್ತಿದೆ. ಇನ್ನೊಂದು ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಓಡಾಟ ನಡೆಸುತ್ತಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅತ್ಯಂತ ವೇಗದ ರೈಲುಗಳೆಂದು ಖ್ಯಾತಿಗಳಿಸಿದ್ದು, ಸುರಕ್ಷತೆ ಸಲುವಾಗಿ ಗರಿಷ್ಠ ವೇಗವನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಲಾಗಿದೆ. ಸಂಪೂರ್ಣ ಹವಾ ನಿಯಂತ್ರಣ ಬೋಗಿಯನ್ನು ಹೊಂದಿರುವ ಈ ರೈಲು, ಆರಾಮದಾಯಕ ಆಸನಗಳನ್ನು ಒಳಗೊಂಡಿದೆ. ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಹೊಂದಿದೆ.

ಇದಿಷ್ಟೇ ಅಲ್ಲದೆ, ರಾತ್ರಿ ಪ್ರಯಾಣದ ಅನುಕೂಲಕ್ಕೆ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. 2024ರ ಫೆಬ್ರವರಿ ವೇಳೆಗೆ ಹೊಸ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ಇವು, 857 ಬರ್ತ್‌ಗಳನ್ನು ಒಳಗೊಂಡಿರುತ್ತವೆ. ಅದರಲ್ಲಿ ಪ್ರಯಾಣಿಕರಿಗಾಗಿ 823, ಉಳಿದವು 34 ಬರ್ತ್‌ಗಳನ್ನು ಸಿಬ್ಬಂದಿಗೆ ಮೀಸಲಿಡಲಾಗುತ್ತದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 28, 2023, 16:34 [IST]
English summary
New vande bharat express karnataka for diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+