Vande Bharat Express: ಇಲ್ಲಿಂದ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ರೈಲು.. ಕೇವಲ 9 ಗಂಟೆ ಪ್ರಯಾಣ!
ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ ಹೈಸ್ವೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದೆ. ಶೀಘ್ರದಲ್ಲೇ ಕೇರಳದಿಂದ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಲಿದ್ದು, ಎರ್ನಾಕುಲಂನಿಂದ ಬೆಂಗಳೂರು ನಡುವೆ ಸಂಚಾರವನ್ನು ನಡೆಸಲಿದೆ ಎಂದು ಹೇಳಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕೇರಳ ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಎರ್ನಾಕುಲಂ (Ernakulam) ಮತ್ತು ಬೆಂಗಳೂರು (Bengaluru) ನಡುವೆ ಕಾರ್ಯಾಚರಣೆಯನ್ನು ನಡೆಸುವ ನಿರೀಕ್ಷೆಯಿದೆ. ಈ ರೈಲಿನ ಸಂಚಾರ ಎಂದಿನಿಂದ ಪ್ರಾರಂಭವಾಗಲಿದೆ, ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿರುತ್ತದೆ ಎಂಬುದರ ಕುರಿತು ಕೇರಳದ ರೈಲ್ವೆ ಅಧಿಕಾರಿಗಳು ಯಾವುದೇ ಅಧಿಕೃತ ವಿವರವನ್ನು ದೃಢಪಡಿಸಿಲ್ಲ.

ಸದ್ಯ ಕೇರಳದಲ್ಲಿ 2 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಕಾರ್ಯಚರಣೆಯನ್ನು ನಡೆಸುತ್ತಿವೆ. ತಿರುವನಂತಪುರಂ (Thiruvananthapuram) - ಕಾಸರಗೋಡು (Kasaragod) ಮತ್ತು ತಿರುವನಂತಪುರಂ (Thiruvananthapuram) - ಮಂಗಳೂರು (Mangaluru) ನಡುವೆ ಯಶಸ್ವಿಯಾಗಿ ಓಡಾಟವನ್ನು ಮಾಡುತ್ತಿವೆ. ಪ್ರಯಾಣಿಕರಿಂದಲೂ ಕೂಡ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಬುಕ್ಕಿಂಗ್ ಗಳು ಬರುತ್ತಿವೆ.
ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಆರಂಭಿಸಿದ ಮೇಲೆ ಎರ್ನಾಕುಲಂ ಮತ್ತು ಬೆಂಗಳೂರು ನಡುವೆಯಿರುವ ಅಂತರವನ್ನು ಕೇವಲ 9 ಗಂಟೆಗಳಲ್ಲಿ ತಲುಪಲಿದೆ. ಇತ್ತೀಚೆಗೆ, ಎರ್ನಾಕುಲಂನಲ್ಲಿರುವ ಮಾರ್ಷಲಿಂಗ್ ಯಾರ್ಡ್‌ನಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆಗೆ ವ್ಯವಸ್ಥೆಯನ್ನು ಕಲ್ಪಿಸಲು ರೈಲ್ವೆ ಇಲಾಖೆ (Indian Railway)ಯು ಅಭಿವೃದ್ಧಿ ಕೆಲಸವನ್ನು ನಡೆಸಿದೆ.

ಬೆಂಗಳೂರು - ಎರ್ನಾಕುಲಂ ನಡುವೆ ಓಡಾಡುವ ಇಂಟರ್‌ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಹೊರಟು ಸಂಜೆ 4.55ರ ಸುಮಾರಿಗೆ ಎರ್ನಾಕುಲಂ ತಲುಪುತ್ತದೆ. ಪ್ರಯಾಣದ ಅವಧಿ ಸರಿಸುಮಾರು 11 ಗಂಟೆಯಿದೆ. ಎರ್ನಾಕುಲಂನಿಂದ ಬೆಳಗ್ಗೆ 9.10ಕ್ಕೆ ಸಂಚಾರವನ್ನು ಆರಂಭಿಸುವ ಇಂಟರ್‌ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ರಾತ್ರಿ 7.50ಕ್ಕೆ ಬೆಂಗಳೂರಿಗೆ ಬರುತ್ತದೆ.
ಏಪ್ರಿಲ್ 5ರಿಂದ ಮೈಸೂರು ಹಾಗೂ ಚೆನ್ನೈ ಸೆಂಟ್ರಲ್ ಮಧ್ಯೆ ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20663/ 20664) ಓಡಾಟವನ್ನು ಪ್ರಾರಂಭಿಸಿದೆ. ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ಈ ರೈಲು, ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೆಆರ್ ಪುರಂ ಮತ್ತು ಕಟಪಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗಿ ಮಧ್ಯಾಹ್ನ 12.25ರ ಸುಮಾರಿಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ.

ಚೆನ್ನೈ ನಿಂದ ಸಂಜೆ 5 ಗಂಟೆಗೆ ಸಂಚಾರವನ್ನು ಶುರು ಮಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್, ರಾತ್ರಿ 11.20ಕ್ಕೆ ಮೈಸೂರಿಗೆ ಬರುತ್ತದೆ. ಈ ರೈಲು ಏಪ್ರಿಲ್ 5 ರಿಂದ ಜುಲೈ 29ರ ನಡುವೆ ಬುಧವಾರದಂದು ಕಾರ್ಯಚರಣೆಯನ್ನು ನಡೆಸುವುದಿಲ್ಲ. ಜುಲೈ 30 ರಿಂದ ಪ್ರತಿ ಗುರುವಾರ ಓಡಾಟವನ್ನು ಮಾಡುವುದಿಲ್ಲ. ಸಂಪೂರ್ಣ ಹವಾನಿಯಂತ್ರಿತ ಬೋಗಿಯನ್ನು ಹೊಂದಿರುವ ವಂದೇ ಭಾರತ್, ಗರಿಷ್ಠ ವೇಗದಲ್ಲಿ ಸಂಚರಿಸಿ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications