ಮಂಗಳೂರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಯಾವುದೇ ಕ್ಷಣದಲ್ಲಿಯೂ ವೇಳಾಪಟ್ಟಿ ಬಿಡುಗಡೆ, ಭಾರೀ ಸಿಹಿಸುದ್ದಿ
ಕರ್ನಾಟಕವು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈ - ಸ್ವೀಡ್ ರೈಲಾಗಿ ಖ್ಯಾತಿಗಳಿಸಿದೆ. ಮಂಗಳೂರಿನಿಂದ ಇವೆರೆಡು ಮಾರ್ಗಗಳಲ್ಲಿ ಈ ರೈಲು ಓಡಾಟ ನಡೆಸುವ ಕಾಲ ಹತ್ತಿರ ಬಂದಿದ್ದು, ಕರಾವಳಿ ಜನರ ಕನಸು ಈಡೇರುತ್ತಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು, 'ಮಂಗಳೂರು - ಮಡಗಾಂ ನಡೆವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ' ಎಂದು ಹೇಳಿದ್ದಾರೆ.

'ಮಂಗಳೂರು (Mangaluru) - ಬೆಂಗಳೂರು (Bengaluru) ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗಾಗಿ ಮಾಡಿದ ಮನವಿ ಕೂಡ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ನಳಿನ್ ಕುಮಾರ್ ಕಟೀಲ್ ಅವರು ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಮೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುತ್ತಿದೆ. ಚೆನ್ನೈ (Chennai) - ಬೆಂಗಳೂರು (Bengaluru) - ಮೈಸೂರು (Mysuru) ಮಾರ್ಗವಾಗಿ ಒಂದು ರೈಲು ಕಾರ್ಯಚರಣೆ ನಡೆಸುತ್ತಿದೆ. ಮತ್ತೊಂದು, ಬೆಂಗಳೂರು (Bengaluru) - ಹುಬ್ಬಳ್ಳಿ (Hubballi) - ಧಾರವಾಡ (Dharwad), ಇನ್ನೊಂದು, ಬೆಂಗಳೂರು (Bengaluru) - ಹೈದರಾಬಾದ್ (Hyderabad) ಮಧ್ಯೆ ಓಡಾಟ ನಡೆಸುತ್ತಿದೆ.

ಬೆಂಗಳೂರು (Bengaluru) - ಶಿವಮೊಗ್ಗ (Shivamogga), ಬೆಂಗಳೂರು (Bengaluru) - ಕಲಬುರಗಿ (Kalaburagi) ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸಬೇಕೆಂಬುದು ಅಲ್ಲಿನ ಸ್ಥಳೀಯರ ಒತ್ತಾಯವಾಗಿದೆ. ಬೆಂಗಳೂರು (Bengaluru) - ಬೆಳಗಾವಿ (Belagavi) ಮಧ್ಯೆಯೂ ವಂದೇ ಭಾರತ್ ರೈಲು ಸಂಚರಿಸಬೇಕೆಂಬುದು ಬಹುದಿನಗಳ ಬೇಡಿಕೆ ಇದ್ದು, ಶೀಘ್ರದಲ್ಲಿ ಪ್ರಾಯೋಗಿಕ ಸಂಚಾರ ಶುರುವಾಗುವ ಸಾಧ್ಯತೆಯಿದೆ.
ಕೆಲವೇ ದಿನಗಳಲ್ಲಿ ಬೆಂಗಳೂರು (Bengaluru) - ಮಧುರೈ (Madurai) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಶುರು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ರೈಲು, ಮಧುರೈನಿಂದ ಸಂಚಾರ ಆರಂಭಿಸಲಿದ್ದು, ದಿಂಡಿಗಲ್, ಕರೂರ್, ಸೇಲಂ, ಧರ್ಮಪುರಿ, ಹೊಸೂರು ಮಾರ್ಗವಾಗಿ ಬೆಂಗಳೂರು ತಲುಪುತ್ತದೆ ಎಂದು ವರದಿಯಾಗಿದ್ದು, ಈಗಿರುವ ಪ್ರಯಾಣದ ಅವಧಿಯು 9 ರಿಂದ 6 ಗಂಟೆಗೆ ಕಡಿಮೆಯಾಗಲಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯವನ್ನು ಒದಗಿಸುತ್ತವೆ. ಆರಾಮದಾಯಕ ಸೀಟುಗಳನ್ನು ಹೊಂದಿದ್ದು, ಪ್ರಯಾಣಿಕರನ್ನು ವೇಗವಾಗಿ ಗಮ್ಯ ಸ್ಥಳವನ್ನು ತಲುಪಿಸುತ್ತಿವೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ವೇಗವನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಸಿದೆ. ವೈಫೈ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ ಹಾಗೂ ಅಗ್ನಿ ನಿರೋಧನ ಸಾಧನಗಳನ್ನು ಒಳಗೊಂಡಿದೆ.
ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲಿ ಆರಾಮದಾಯಕ ಪ್ರಯಾಣವನ್ನು ಒದಗಿಸಲು ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಫೆಬ್ರವರಿ 2024 ರೊಳಗೆ ಲೋಕಾರ್ಪಣೆಯಾಗಬಹುದು. ಇದು 823 ಬರ್ತ್‌ಗಳನ್ನು ಒಳಗೊಂಡಿರಲಿದ್ದು, ವಿಶ್ವದರ್ಜೆಯ ಸೌಕರ್ಯಗಳನ್ನು ಹೊಂದಿರಲಿದೆ. ವಾಸನೆ ಮುಕ್ತ ಶೌಚಾಲಯ, ಸ್ವಯಂ ಚಾಲಿತ ಬಾಗಿಲು ಸೇರಿದಂತೆ ಹತ್ತಾರು ಸೌಕರ್ಯಗಳನ್ನು ಪಡೆದಿರುವ ನೀರಿಕ್ಷೆಯಿದೆ.
ಶಿಘ್ರದಲ್ಲೆಯೇ ಕಡಿಮೆ ಖರ್ಚಿನ ವಂದೇ ಸಾಧಾರಣ್ (Vande Sadharan) ರೈಲು ಕಾರ್ಯಚರಣೆ ನಡೆಸುವ ಸಾಧ್ಯತೆಯಿದೆ. ಈ ರೈಲು ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿದೆ. ಒಟ್ಟು 22 ಬೋಗಿಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 8 ಕಾಯ್ದಿರಿಸದ ಬೋಗಿಗಳು, 14 ಸ್ಲೀಪರ್ ಬೋಗಿಗಳು, ಉಳಿದೆರಡು ಲೋಕೋಮೋಟಿವ್(ಎಂಜಿನ್). ವಂದೇ ಸಾಧಾರಣ್ ರೈಲಿನಲ್ಲಿ 1800 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು.


Click it and Unblock the Notifications