ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಭಾರತದಲ್ಲಿ ಡಿಸೆಂಬರ್ 24ರಂದು ಫಾಸ್ಟ್‌ಟ್ಯಾಗ್ ಮೂಲಕ ರೂ.80 ಕೋಟಿ ಟೋಲ್ ಗೇಟ್ ಶುಲ್ಕವನ್ನು ಸಂಗ್ರಹಿಸಲಾಗಿದೆ. ಒಂದೇ ದಿನ ಫಾಸ್ಟ್‌ಟ್ಯಾಗ್ ಮೂಲಕ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುತ್ತಿರುವುದು ಇದೇ ಮೊದಲು.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ಕಾರಣಕ್ಕೆ ಇದನ್ನು ಒಂದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ. 50 ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್ ವಹಿವಾಟುಗಳ ಮೂಲಕ ಈ ದಾಖಲೆಯನ್ನು ನಿರ್ಮಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ನಿನ್ನೆ (ಡಿಸೆಂಬರ್ 25) ಪ್ರಕಟಣೆಯನ್ನು ಹೊರಡಿಸಿದೆ.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಇಷ್ಟು ದೊಡ್ಡ ಮೊತ್ತ ಸಂಗ್ರಹವಾಗಿರುವುದು ನಿಜಕ್ಕೂ ಒಂದು ಮೈಲಿಗಲ್ಲಾಗಿದೆ. ಅಂದ ಹಾಗೆ 2021ರ ಜನವರಿ 1ರಿಂದ ಫಾಸ್ಟ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಎನ್‌ಹೆಚ್‌ಎಐ ಈ ಯೋಜನೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದೆ. ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದರಿಂದ ಟೋಲ್‌ಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಕಾಯುವುದು ತಪ್ಪುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಇದರ ಜೊತೆಗೆ ಇಂಧನದ ಉಳಿತಾಯವಾಗುತ್ತದೆ. ಇವು ಫಾಸ್ಟ್‌ಟ್ಯಾಗ್'ನಿಂದ ಉಂಟಾಗುವ ಎರಡು ಪ್ರಮುಖ ಪ್ರಯೋಜನಗಳು. ಕೆಲವೊಮ್ಮೆ ಟೋಲ್ ಶುಲ್ಕವನ್ನು ಪಾವತಿಸಲು ಟೋಲ್'ಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಪ್ರತಿ ವಾಹನವು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ವಾಹನಗಳು ಕಿ.ಮೀಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ಸಮಸ್ಯೆಗಳಿಗೆ ಫಾಸ್ಟ್‌ಟ್ಯಾಗ್ ನಿಂದ ಪರಿಹಾರ ಸಿಗಲಿದೆ. ಟೋಲ್ ಗೇಟ್‌ಗಳಲ್ಲಿ ಅಳವಡಿಸಲಾಗಿರುವ ಸ್ಕ್ಯಾನರ್'ಗಳು ವಾಹನದ ಮುಂಭಾಗದಲ್ಲಿ ಅಂಟಿಸಲಾಗಿರುವ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಗಳನ್ನು ಸ್ಕ್ಯಾನ್ ಮಾಡುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಇದರಿಂದ ಟೋಲ್ ಶುಲ್ಕವು ಆಟೋಮ್ಯಾಟಿಕ್ ಆಗಿ ಫಾಸ್ಟ್‌ಟ್ಯಾಗ್ ಖಾತೆಯಿಂದ ಕಡಿತಗೊಳ್ಳುತ್ತದೆ. ಅಗತ್ಯವಿದ್ದಾಗ ಫಾಸ್ಟ್‌ಟ್ಯಾಗ್'ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು. ಫಾಸ್ಟ್‌ಟ್ಯಾಗ್'ಗಳು ರಾಷ್ಟ್ರೀಯ ಹೆದ್ದಾರಿಗಳ ಟೋಲ್'ಗಳಲ್ಲಿ ವಾಹನಗಳನ್ನು ಅಡೆತಡೆಯಿಲ್ಲದ ಚಲಿಸುವಂತೆ ಮಾಡುತ್ತವೆ.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್'ಗಳು ಕಾಗದದ ಬಳಕೆಯನ್ನು ಕಡಿಮೆ ಮಾಡುತ್ತದೆ ಎಂಬುದು ಗಮನಾರ್ಹ. ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಫಾಸ್ಟ್‌ಟ್ಯಾಗ್'ಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಟೋಲ್ ಶುಲ್ಕವನ್ನು ಪಾವತಿಸಲು ಟೋಲ್ ಪ್ಲಾಜಾಗಳ ಸಿಬ್ಬಂದಿಯನ್ನು ಸಂಪರ್ಕಿಸಬೇಕಾಗಿಲ್ಲದ ಕಾರಣ ಸಾಕಷ್ಟು ಸಂಖ್ಯೆಯ ಜನರು ಈಗ ಫಾಸ್ಟ್‌ಟ್ಯಾಗ್'ಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಫಾಸ್ಟ್‌ಟ್ಯಾಗ್ ಮೂಲಕ ಒಂದೇ ದಿನದಲ್ಲಿ ದಾಖಲೆ ಮೊತ್ತವನ್ನು ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದರಿಂದ ಟೋಲ್'ಗಳಲ್ಲಿ ಚಿಲ್ಲರೆ ಸಮಸ್ಯೆಯೂ ಬಗೆಹರಿಯುತ್ತದೆ. ಫಾಸ್ಟ್‌ಟ್ಯಾಗ್ ಕಡ್ಡಾಯ ಅಳವಡಿಕೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಪ್ರತಿಯೊಬ್ಬ ವಾಹನ ಸವಾರರು ತಕ್ಷಣವೇ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
NHAI achieves new milestone in toll collection through Fastag. Read in Kannada.
Story first published: Saturday, December 26, 2020, 9:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X