ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳ ಎರಡೂ ಪಥಗಳಲ್ಲಿ ಹಳದಿ ಲೈನ್'ಗಳನ್ನು ಎಳೆಯುವಂತೆ ಎಲ್ಲಾ ಟೋಲ್ ಬೂತ್ ಗುತ್ತಿಗೆದಾರರಿಗೆ ಸೂಚಿಸಿದೆ.

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಈ ಹಳದಿ ಲೈನ್'ನಿಂದ ಹೊರ ನಿಲ್ಲುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸದಂತೆ ಎನ್‌ಹೆಚ್‌ಎಐ ತಿಳಿಸಿದೆ. ಟೋಲ್ ಪ್ಲಾಜಾದಿಂದ ಸುಮಾರು 100 ಮೀಟರ್ ಅಂತರದಲ್ಲಿ ಹಳದಿ ಲೈನ್'ಗಳನ್ನು ಎಳೆಯುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೇಳಿಕೆಯ ಪ್ರಕಾರ, 100 ಮೀಟರ್‌ನಿಂದ ಹೊರಗೆ ಹೆಚ್ಚು ಹೊತ್ತು ಕಾಯುವ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸದೇ ಉಚಿತವಾಗಿ ಟೋಲ್ ಪ್ಲಾಜಾ ಮೂಲಕ ಹಾದುಹೋಗಲು ಅವಕಾಶವಿರುತ್ತದೆ. ಆದರೆ 100 ಮೀಟರ್‌ನೊಳಗೆ ಇರುವ ವಾಹನಗಳು ಟೋಲ್ ಶುಲ್ಕ ಪಾವತಿಸ ಬೇಕಾಗುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಪ್ರತಿ ವಾಹನಕ್ಕೆ ಟೋಲ್ ಶುಲ್ಕ ಪಾವತಿಗೆ ಕೇವಲ 10 ಸೆಕೆಂಡುಗಳನ್ನು ತೆಗೆದುಕೊಳ್ಳುವಂತೆ ಎನ್‌ಹೆಚ್‌ಎಐ ಸೂಚಿಸಿದೆ. ಈ ಮೂಲಕ ಬಿಜಿ ಇರುವ ಸಮಯದಲ್ಲಿ ವಾಹನಗಳು ಹೆಚ್ಚು ಸಮಯ ಕಾಯದೇ ಬೇಗ ಮುಂದಕ್ಕೆ ಸಾಗಲು ಅವಕಾಶ ಕಲ್ಪಿಸುತ್ತಿದೆ.

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಈಗ ದೇಶಾದ್ಯಂತವಿರುವ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಫಾಸ್ಟ್‌ಟ್ಯಾಗ್ ಬಳಸಲಾಗುತ್ತಿದೆ. ಈ ವರ್ಷದ ಫೆಬ್ರವರಿ ತಿಂಗಳಿನಿಂದ ಫಾಸ್ಟ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ದೇಶಾದ್ಯಂತ ಸುಮಾರು 96%ನಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಪಾವತಿಸುತ್ತಿವೆ. ದೇಶದಲ್ಲಿರುವ ಕೆಲವು ಟೋಲ್ ಪ್ಲಾಜಾಗಳಲ್ಲಿ 99%ನಷ್ಟು ಶುಲ್ಕ ಪಾವತಿಯು ಫಾಸ್ಟ್‌ಟ್ಯಾಗ್ ಮೂಲಕ ನಡೆಯುತ್ತಿದೆ ಎಂದು ವರದಿಯಾಗಿದೆ.

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಭವಿಷ್ಯದಲ್ಲಿ ಭಾರತವನ್ನು ಟೋಲ್ ಮುಕ್ತ ದೇಶವನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಂದರೆ ಅಸ್ತಿತ್ವದಲ್ಲಿರುವ ಟೋಲ್‌ ಪ್ಲಾಜಾಗಳನ್ನು ತೆಗೆದುಹಾಕಿ ಅವುಗಳ ಬದಲಿಗೆ ಆಟೋಮ್ಯಾಟಿಕ್ ಚಾರ್ಜಿಂಗ್ ಡಿವೈಸ್'ಗಳನ್ನು ಅಳವಡಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಈ ಡಿವೈಸ್'ಗಳನ್ನು ಅಳವಡಿಸಿದ ನಂತರ ಟೋಲ್ ಶುಲ್ಕ ಪಾವತಿಸಲು ವಾಹನಗಳು ನಿಲ್ಲುವ ಅವಶ್ಯಕತೆಯಿಲ್ಲ. ಡಿಜಿಟಲ್ ವಹಿವಾಟಿನ ಮೂಲಕ ವಾಹನವು ಚಲಿಸುತ್ತಿರುವಾಗಲೇ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಇನ್ನು ಕೆಲವೇ ವರ್ಷಗಳಲ್ಲಿ ಈ ರೀತಿಯ ಡಿವೈಸ್'ಗಳು ದೇಶದಲ್ಲಿ ಲಭ್ಯವಿರಲಿವೆ ಎಂದು ಎನ್‌ಹೆಚ್‌ಎಐ ಘೋಷಿಸಿದೆ. ಎನ್‌ಹೆಚ್‌ಎಐ ಇತ್ತೀಚಿಗಷ್ಟೇ ಟೋಲ್ ಪ್ಲಾಜಾ ಮೂಲಕ ಸಾಗುವ ಆಕ್ಸಿಜನ್ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕ ವಿಧಿಸದಂತೆ ಟೋಲ್ ಆಪರೇಟರ್'ಗಳಿಗೆ ಸೂಚಿಸಿತ್ತು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಎನ್‌ಹೆಚ್‌ಎಐ

ಈಗ ಟೋಲ್ ಪ್ಲಾಜಾಗಳ ಎರಡೂ ತುದಿಗಳಲ್ಲಿ 100 ಮೀಟರ್ ಅಂತರದಲ್ಲಿ ಹಳದಿ ಲೈನ್'ಗಳನ್ನು ಎಳೆಯುವ ನಿರ್ಧಾರದಿಂದ ದೀರ್ಘ ಕಾಲದವರೆಗೆ ಟೋಲ್ ಪ್ಲಾಜಾಗಳಲ್ಲಿ ಕಾಯುವ ವಾಹನ ಸವಾರರಿಗೆ ಟೋಲ್ ಶುಲ್ಕ ಪಾವತಿಸದೇ ಟೋಲ್ ಪ್ಲಾಜಾ ದಾಟಲು ಸಾಧ್ಯವಾಗಲಿದೆ.

Most Read Articles

Kannada
English summary
NHAI asks toll operators to draw 100 meters yellow lines from the toll gate. Read in Kannada.
Story first published: Friday, May 28, 2021, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X