ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ತಮಿಳುನಾಡಿನಾದ್ಯಂತವಿರುವ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿರುವ ಬಗ್ಗೆ ವರದಿಯಾಗಿದೆ. ಟೋಲ್ ಶುಲ್ಕವನ್ನು ರೂ.5ಗಳಿಂದ ರೂ.30ಗಳವರೆಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನರು ಈಗಾಗಲೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಎನ್‌ಹೆಚ್‌ಎಐ ಟೋಲ್ ಶುಲ್ಕವನ್ನು ಹೆಚ್ಚಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಟೋಲ್ ಶುಲ್ಕವನ್ನು ಕಡಿಮೆ ಮಾಡಬೇಕು. ಇಲ್ಲವೇ ದೇಶಾದ್ಯಂತ ಟೋಲ್ ತೆಗೆದು ಹಾಕಬೇಕೆಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಆದರೆ ಜನರ ಒತ್ತಾಯಕ್ಕೆ ಮನ್ನಣೆ ನೀಡದ ಕೇಂದ್ರ ಸರ್ಕಾರವು ಬೆಲೆ ಏರಿಕೆಯನ್ನು ಮುಂದುವರೆಸಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಟೋಲ್ ಶುಲ್ಕ ಹೆಚ್ಚಳವು ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಟೋಲ್ ಶುಲ್ಕ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲದ ವಾಹನ ಸವಾರರು ಟೋಲ್ ಪ್ಲಾಜಾ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಕೇಂದ್ರ ಸರ್ಕಾರವು ಟೋಲ್ ಗೇಟ್ ಶುಲ್ಕ ಸಂಗ್ರಹಿಸಲು ಫಾಸ್ಟ್‌ಟ್ಯಾಗ್'ಗಳನ್ನು ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್'ಗಳು ಟೋಲ್ ಶುಲ್ಕ ಪಾವತಿಯನ್ನು ಸುಲಭವಾಗಿಸುತ್ತವೆ. ಫಾಸ್ಟ್‌ಟ್ಯಾಗ್ ವ್ಯವಸ್ಥೆಯಲ್ಲಿ ನಗದು ಹಣದ ಬದಲಿಗೆ ಡಿಜಿಟಲ್ ರೂಪದಲ್ಲಿ ಪಾವತಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್'ಗಳು ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವುದನ್ನು ತಪ್ಪಿಸುತ್ತವೆ. ವಾಹನಗಳು ಗಂಟೆಗಟ್ಟಲೇ ಕಾಯುವುದು ತಪ್ಪುವುದರಿಂದ ಇಂಧನದ ಉಳಿತಾಯವಾಗುತ್ತದೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಸದ್ಯಕ್ಕೆ ದೇಶದಲ್ಲಿರುವ 93% ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ ಎಂದು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸುವಂತೆ ಕೇಂದ್ರ ಸರ್ಕಾರವು ಆದೇಶಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಹೊಸ ಶುಲ್ಕ:

ಕಾರು, ಜೀಪ್, ವ್ಯಾನ್ ಸೇರಿದಂತೆ ಲಘು ವಾಹನಗಳಿಗೆ ಈ ಮೊದಲು ರೂ.80ಗಳವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಈಗ ರೂ.5 ಬೆಲೆ ಏರಿಸಲಾಗಿದೆ. ಇದರಿಂದಾಗಿ ಈ ವಾಹನಗಳು ಹೊಸದಾಗಿ ರೂ.85 ಶುಲ್ಕ ಪಾವತಿಸಬೇಕಾಗುತ್ತದೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಇನ್ನು ಎರಡು ಆಕ್ಸಲ್'ಗಳನ್ನು ಹೊಂದಿರುವ ಬಸ್ಸು ಹಾಗೂ ಇತರ ಭಾರೀ ವಾಹನಗಳಿಗೆ ರೂ.270 ಶುಲ್ಕ ವಿಧಿಸಲಾಗುತ್ತಿತ್ತು. ಈಗ ರೂ.20 ಹೆಚ್ಚಿಸಲಾಗಿದೆ. ಮೂರು ಆಕ್ಸಲ್ ವಾಹನಗಳಿಗೆ ರೂ.295 ಶುಲ್ಕ ವಿಧಿಸಲಾಗುತ್ತಿತ್ತು. ಈಗ ಈ ವಾಹನಗಳು ರೂ.315 ಪಾವತಿಸಬೇಕಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಮೂರರಿಂದ ಆರು ಆಕ್ಸಲ್'ಗಳನ್ನು ಹೊಂದಿರುವ ವಾಹನಗಳಿಗೆ ಈ ಹಿಂದೆ ರೂ.425 ಶುಲ್ಕ ವಿಧಿಸಲಾಗುತ್ತಿತ್ತು. ಟೋಲ್ ಶುಲ್ಕ ಏರಿಕೆಯ ನಂತರ ಈ ವಾಹನಗಳು ರೂ.450 ಪಾವತಿಸಬೇಕಾಗುತ್ತದೆ.

ಟೋಲ್ ಶುಲ್ಕ ಏರಿಕೆ ಮಾಡಿ ವಾಹನ ಸವಾರರನ್ನು ಸಂಕಷ್ಟಕ್ಕೆ ದೂಡಿದ ಎನ್‌ಹೆಚ್‌ಎಐ

ಏಳು ಹಾಗೂ ಅದಕ್ಕಿಂತ ಹೆಚ್ಚಿನ ಆಕ್ಸಲ್ ಹೊಂದಿರುವ ಭಾರೀ ವಾಹನಗಳ ಟೋಲ್ ಶುಲ್ಕವನ್ನು ರೂ.30ರಷ್ಟು ಏರಿಕೆ ಮಾಡಲಾಗಿದೆ. ಈ ವಾಹನಗಳು ಇನ್ನು ಮುಂದೆ ರೂ.550 ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Most Read Articles

Kannada
English summary
NHAI increases toll fees in all toll plazas across Tamilnadu. Read in Kannada.
Story first published: Thursday, April 1, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X