NHAI ಹೊಸ ದಾಖಲೆಗೆ ಗಡ್ಕರಿ ಅಚ್ಚರಿ... 100 ಕಿ.ಮೀ ಹೈವೇ ನಿರ್ಮಾಣಕ್ಕಿಡಿದ ಸಮಯವೆಷ್ಟು ಗೊತ್ತಾ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ದೇಶದುದ್ದಕ್ಕೂ ಹೈವೇ ರಸ್ತೆಗಳ ನಿರ್ಮಾಣದಲ್ಲಿ ಫುಲ್ ಜೋಷ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಪ್ರಗತಿ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದ ಅವರು, ಇದೀಗ NHAI ಹೊಸ ದಾಖಲೆಯನ್ನು ತಿಳಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಿರ್ಮಾಣ ಹಂತದಲ್ಲಿರುವ ಹೊಸ ಎಕ್ಸ್ ಪ್ರೆಸ್ ವೇ ಚಿತ್ರಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 100 ಗಂಟೆಗಳಲ್ಲಿ 100 ಕಿ.ಮೀ ಹೊಸ ಎಕ್ಸ್ಪ್ರೆಸ್ ವೇ ಹಾಕುವ ಮೂಲಕ ಮತ್ತೊಂದು ಗರಿಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.

ಈ ಎಕ್ಸ್ಪ್ರೆಸ್ ವೇ ರಾಷ್ಟ್ರೀಯ ಹೆದ್ದಾರಿ 34 ರ ಭಾಗವಾಗಿದ್ದು, ಇದು ಗಾಜಿಯಾಬಾದ್ ಮತ್ತು ಅಲಿಗಢವನ್ನು ಬುಲಂದ್ಶಹರ್ ಮೂಲಕ ಸಂಪರ್ಕಿಸುತ್ತದೆ. ಉತ್ತರ ಪ್ರದೇಶದಲ್ಲಿ ಮುಂಬರುವ ಗಾಜಿಯಾಬಾದ್-ಅಲಿಗಢ ಎಕ್ಸ್ಪ್ರೆಸ್ ವೇ ನಿರ್ಮಾಣದ ಸಂದರ್ಭದಲ್ಲಿ ಈ ಹೆಗ್ಗುರುತನ್ನು ಸಾಧಿಸಲಾಗಿದೆ. ಸಿಂಗಾಪುರ ಮೂಲದ ಏಜೆನ್ಸಿಯಾದ ಲಾರ್ಸೆನ್ ಮತ್ತು ಟೌಬ್ರೊ ಮತ್ತು ಕ್ಯೂಬ್ ಹೆದ್ದಾರಿಗಳ ಸಹಭಾಗಿತ್ವದಲ್ಲಿ ಈ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗುತ್ತಿದೆ.
ಈ ಏಜೆನ್ಸಿಯವರ ಸಾಧನೆಗೆ ಮೆಚ್ಚಿ ನಿತಿನ್ ಗಡ್ಕರಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಬುಲಂದ್ಶಹರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ಈ ಸಾಧನೆಯು ಭಾರತದ ರಸ್ತೆ ಮೂಲಸೌಕರ್ಯ ಉದ್ಯಮದ ಸಮರ್ಪಣೆ ಮತ್ತು ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ" ಇದಕ್ಕೆ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ ತಿಳಿಸಿ ಏಜೆನ್ಸಿ ಅವರನ್ನು ನಿತಿನ್ ಗಡ್ಕರಿ ಅಭಿನಂದಿಸಿದರು.

ಗಾಜಿಯಾಬಾದ್ ನಿಂದ ಅಲಿಗಢ ಎಕ್ಸ್ಪ್ರೆಸ್ ವೇ ಒಟ್ಟು 118 ಕಿ.ಮೀ ಇದೆ. ಈ ಗಾಜಿಯಾಬಾದ್ ಮತ್ತು ಅಲಿಗಢದ ಹೊರತಾಗಿಯೂ ಹೊಸ ಎಕ್ಸ್ಪ್ರೆಸ್ ವೇ ಉತ್ತರ ಪ್ರದೇಶದ ನೋಯ್ಡಾ, ದಾದ್ರಿ, ಬುಲಂದ್ಶಹರ್, ಸಿಕಂದರಾಬಾದ್ ಮತ್ತು ಖುರ್ಜಾದಂತಹ ಸ್ಥಳಗಳನ್ನು ಸಂಪರ್ಕಿಸುತ್ತದೆ. ನಿರ್ಮಾಣದ ಬಳಿಕ ಈ ಮಾರ್ಗದ ಬಹುತೇಕ ಹಳ್ಳಿಗಳು ಆರ್ಥಿಕ ಬೆಳವಣಿಗೆ ಸಾಧಿಸಲಿವೆ.
"ಇದು ನಿರ್ಣಾಯಕ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸಲಿರುವುದರಿಂದ ರಸ್ತೆಯನ್ನು ಸರಕುಗಳ ಸುಗಮ ಸಾಗಾಣಿಕೆ ಹಾಗೂ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಕೃಷಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ಮೂಲಕ ಪ್ರಾದೇಶಿಕವಾಗಿ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ." ಜೊತೆಗೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ಗಡ್ಕರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹೊಸ ಹೆದ್ದಾರಿಗಳನ್ನು ವೇಗವಾಗಿ ನಿರ್ಮಿಸುವಲ್ಲಿ ದಾಖಲೆ ಮಾಡುವುದು ಎನ್ಎಚ್ಎಐಗೆ ಹೊಸತೇನಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ 105 ಗಂಟೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಮರಾವತಿ ಮತ್ತು ಅಕೋಲಾ ನಡುವಿನ 53 ಕಿ.ಮೀ ನಿರಂತರ ಸಿಂಗಲ್ ಬಿಟುಮಿನಸ್ ಕಾಂಕ್ರೀಟ್ ರಸ್ತೆಯನ್ನು ಯಶಸ್ವಿಯಾಗಿ ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications