ಥಾರ್ ಉಡುಗೊರೆಯಾಗಿ ಸಿಕ್ಕ ಬಳಿಕ ಮರ್ಸಿಡಿಸ್ ಖರೀದಿಸುವ ನಿರ್ಧಾರ ಕೈಬಿಟ್ಟ ಎರಡನೇ ಚಿನ್ನ ಗೆದ್ದ ಬಾಕ್ಸರ್
ಮಾರ್ಚ್ 26, ಭಾನುವಾರ ದೆಹಲಿಯಲ್ಲಿ ನಡೆದ ವಿಶ್ವ ಬಾಕಿಂಗ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ನಿಖಾತ್ ಜರೀನ್ ((Nikhat Zareen) ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಗೆದ್ದ ಭಾರತದ 2ನೇ ಬಾಕ್ಸರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವ ಬಾಕಿಂಗ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನಿಖಿತ್ ಜರೀನ್‌ಗೆ ಮಹೀಂದ್ರಾ ಕಂಪನಿಯು ಹೊಚ್ಚ ಹೊಸ ಥಾರ್ ಎಸ್‌ಯುವಿಯನ್ನು ಬಹುಮಾನವಾಗಿ ನೀಡಿದ್ದಾರೆ. ಅವರು ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸಿ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದಿದ್ದಾರೆ. ಇನ್ನು ನಿಖಿತ್ ಜರೀನ್ ಅವರು $100,000 ಬಹುಮಾನವನ್ನು ಗೆದ್ದುಕೊಂಡಿತು, ಅದರೊಂದಿಗೆ ಆ ಹಣದಲ್ಲಿ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಲು ಯೋಜಿಸಿದ್ದಳು.

ಆದರೆ ಮಹೀಂದ್ರಾ ಕಂಪನಿಯು ಜರೀನ್‌ಗೆ ತನ್ನ ಉಡುಗೊರೆಯನ್ನು ಘೋಷಿಸಿದ ನಂತರ, ಅವಳು ತಮ್ಮ ಪ್ಲಾನ್ ಅನ್ನು ಬದಲಾಯಿಸಿದ್ದಾರೆ. ಆ ಹಣದಲ್ಲಿ ತಮ್ಮ ಪೋಷಕರನ್ನು ಉಮ್ರಾಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಭಾನುವಾರದ ತನ್ನ ಗೆಲುವಿನ ನಂತರ, ಜರೀನ್ ಇನ್ನು ಮುಂದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ತನ್ನ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ನಾನು ಅದರ ಬಗ್ಗೆ ಯೋಚಿಸಿಲ್ಲ. ಕಳೆದ ಬಾರಿ ನಾನು ಮರ್ಸಿಡಿಸ್ ಬೆಂಝ್ ಕಾರನ್ನು ಖರಿದಿಸುತ್ತೇನೆ ಎಂದು ಹೇಳಿದ್ದೆ ಆದರೆ ನನಗೆ ಥಾರ್ ಉಡುಗೊರೆಯಾಗಿ ಸಿಕ್ಕಿದ್ದರಿಂದ ಈಗ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ. ರಂಜಾನ್ ನಡೆಯುತ್ತಿರುವುದರಿಂದ ನಾನು ನನ್ನ ಹೆತ್ತವರನ್ನು ಉಮ್ರಾಗೆ ಕಳುಹಿಸಲು ಬಯಸುತ್ತೇನೆ. ನಾನು ಈ ಬಗ್ಗೆ ಮನೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಮಹೀಂದ್ರಾ ಕಂಪನಿಯು ಜರೀನ್‌ಗೆ ಗೆಲುವಿನ ನಂತರ ಥಾರ್ ಎಸ್‌ಯುವಿಯನ್ನು ಬಹುಮಾನವಾಗಿ ಘೋಷಿಸಿದರು. ಮಹೀಂದ್ರಾ ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ "ಮಹೀಂದ್ರಾ ಉದಯೋನ್ಮುಖ ಬಾಕ್ಸಿಂಗ್ ಐಕಾನ್‌ಗೆ ಅಭಿನಂದನೆಗಳು. ಹೊಚ್ಚ ಹೊಸ ಆಲ್-ನ್ಯೂ ಥಾರ್ ಆಕೆಯ ಅಗಾಧ ಸಾಧನೆಗಾಗಿ ನಮ್ಮ ಮೆಚ್ಚುಗೆಯ ಸಂಕೇತವಾಗಿದೆ ಎಂದು ಬರೆದುಕೊಂಡಿದ್ದಾರೆ.
ಭಾರತದ ಚಾಂಪಿಯನ್ ಅಥ್ಲೀಟ್‌ಗಳಿಗಾಗಿ ಮಹೀಂದ್ರಾ ವಿಶೇಷ ಆವೃತ್ತಿಯ ವಾಹನಗಳನ್ನು ತಯಾರಿಸಿದ್ದರು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗಾಗಿ ಕಾರು ತಯಾರಕರು ಅದರ ಪ್ರಮುಖ ಎಸ್‍ಯುವಿಯಾದ XUV700 ನ ಜಾವೆಲಿನ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದರು. ಚೋಪ್ರಾ ಹೊರತುಪಡಿಸಿ, ವಿಶೇಷ ಆವೃತ್ತಿಯ XUV700 ಅನ್ನು ಗೆದ್ದ ಇತರ ಕ್ರೀಡಾಪಟುಗಳು ಇದ್ದಾರೆ.

2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಒಲಿಂಪಿಯನ್ ಚಾಂಪಿಯನ್ ಸುಮಿತ್ ಆಂಟಿಲ್‌ಗೆ ಮೊದಲ ಬಾರಿಗೆ ಕಸ್ಟಮೈಸ್ ಮಾಡಿದ XUV700 ಜಾವೆಲಿನ್ ಆವೃತ್ತಿಯನ್ನು ಬಹುಮಾನವಾಗಿ ನೀಡಿದ್ದಾರೆ. ಟೋಕಿಯೊ 2020 ಪ್ಯಾರಾಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಪೊಸಿಷನ್‌ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೆಖರಾ ಅವರಿಗೆ ಕಸ್ಟಮೈಸ್ ಜಾವೆಲಿನ್ ಆವೃತ್ತಿಯನ್ನು ಸಹ ಉಡುಗೊರೆಯಾಗಿ ನೀಡಲಾಯಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications