ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ಭಾರತದಲ್ಲಿ ಸೂಪರ್ ಬೈಕುಗಳ ಬಗ್ಗೆ ಅನೇಕ ಜನರು ಕ್ರೇಜ್ ಹೊಂದಿದ್ದಾರೆ. ಈ ಕಾರಣಕ್ಕೆ ಭಾರತದಲ್ಲಿ ಸೂಪರ್ ಬೈಕುಗಳ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಸೂಪರ್ ಬೈಕಿನಲ್ಲಿ ಸಂಚರಿಸುವವರನ್ನು ಬೆಂಗಳೂರು ಹಾಗೂ ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ಸೂಪರ್ ಬೈಕುಗಳನ್ನು ಹೊಂದಿರುವವರು ತಮ್ಮದೇ ಆದ ಗುಂಪುಗಳನ್ನು ರಚಿಸಿಕೊಂಡಿದ್ದು, ವೀಕೆಂಡ್ ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಪೊಲೀಸರು ಈ ಸೂಪರ್ ಬೈಕ್‌ಗಳ ಗುಂಪನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ಬಿಡುಗಡೆಯಾಗಿದೆ. ಈ ವೀಡಿಯೊದಲ್ಲಿ ಕೆಲವು ಕವಾಸಕಿ ನಿಂಜಾ ಝಡ್‌ಎಕ್ಸ್ 10 ಆರ್ ಬೈಕಿನ ಸವಾರರು ಬೈಕ್ ತಡೆಯಲು ಬಂದ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ಈ ಘಟನೆ 3.5 ಕಿ.ಮೀ ಉದ್ದವಿರುವ ಪಾಣಿಪತ್‌ ಬೈಪಾಸ್ ಫ್ಲೈಓವರ್ ಮೇಲೆ ನಡೆದಿದೆ. ಈ ವೀಡಿಯೊದ ಆರಂಭದಲ್ಲಿ ಮೂರು ನಿಂಜಾ ಝಡ್‌ಎಕ್ಸ್ 10 ಆರ್ ಬೈಕ್ ಸವಾರರನ್ನು ಕಾಣಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ನಂತರ ಈ ಮೂವರು ಸವಾರರು ಈ ಫ್ಲೈ ಓವರ್‌ ಮೇಲೆ ಸಾಗುತ್ತಾರೆ. ಸ್ವಲ್ಪ ದೂರ ಸಾಗಿದ ಬೈಕ್ ಸವಾರರನ್ನು ಟ್ರಾಫಿಕ್ ಪೊಲೀಸರು ತಡೆಯುತ್ತಾರೆ. ಆದರೆ ಮೂವರು ಬೈಕ್ ಸವಾರರ ಪೈಕಿ ಇಬ್ಬರು ಪೊಲೀಸರನ್ನು ತಳ್ಳಿ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಪರಾರಿಯಾಗುತ್ತಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ಮತ್ತೊಬ್ಬ ಸೂಪರ್ ಬೈಕ್ ಸವಾರನನ್ನು ಪೊಲೀಸರು ಹಿಡಿಯುತ್ತಾರೆ. ಇದರ ಜೊತೆಗೆ ಮೊದಲ ಕವಾಸಕಿ ನಿಂಜಾ ಝಡ್ಎಕ್ಸ್ 10 ಆರ್ ಬೈಕಿನ ಸವಾರನನ್ನು ಹಿಡಿಯಲು ಪೊಲೀಸರು ಆತನ ಮೇಲೆ ಬ್ಯಾರಿಕೇಡ್ ಕೋನ್ ಎಸೆಯುತ್ತಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೊಲೀಸರು ಬ್ಯಾರಿಕೇಡ್ ಕೋನ್ ಎಸೆದರೂ ಬೈಕ್‌ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ. ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್ ಸವಾರನಿಗೆ ಅತಿ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಕಾರಣಕ್ಕೆ ರೂ.2,000 ದಂಡ ವಿಧಿಸಲಾಗಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಬೈಕ್ ಸವಾರ

ಪೊಲೀಸರಿಂದ ಕೋನ್ ನಲ್ಲಿ ಒದೆ ತಿಂದು ತಪ್ಪಿಸಿಕೊಂಡ ಬೈಕ್ ಸವಾರ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾನೆ. ಪೊಲೀಸರು ತಪ್ಪಿಸಿಕೊಳ್ಳಲು ಅವನು 250 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿ ಸುಮಾರು 20-25 ಕಿ.ಮೀ ದೂರ ಚಲಿಸಿದ ನಂತರ ಬೈಕ್ ನಿಲ್ಲಿಸಿದ್ದಾಗಿ ಹೇಳಿದ್ದಾನೆ. ಚಿತ್ರಕೃಪೆ: ವ್ಹೀಲಿ ಬಾಯ್ ಬನ್ನಿ / ಯೂಟ್ಯೂಬ್

Most Read Articles

Kannada
English summary
Ninja ZX 10 R bike rider rides bike at 250 kmph to escape from cops. Read in Kannada.
Story first published: Thursday, September 3, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X