ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಪ್ರಪಂಚದಾದ್ಯಂತ ಅನೇಕ ಕಾರು ತಯಾರಕ ಕಂಪನಿಗಳು ಭವಿಷ್ಯಕ್ಕಾಗಿ ಹೊಸ ಹೊಸ ಕಾರುಗಳನ್ನು ತಯಾರಿಸುವಲ್ಲಿ ನಿರತವಾಗಿವೆ. ಈ ಕಾರುಗಳನ್ನು ಆಟೋ ಎಕ್ಸ್‌ಪೋ ಅಥವಾ ಆಟೋ ಶೋಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಇದರಿಂದ ಜನರು ಭವಿಷ್ಯದಲ್ಲಿ ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇತ್ತೀಚೆಗೆ ಜಪಾನಿನ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಜಿಟಿಆರ್ (ಎಕ್ಸ್) 2050 ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿದೆ. ಅಮೆರಿಕಾದಲ್ಲಿರುವ ನಿಸ್ಸಾನ್ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವವರೊಬ್ಬರು ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಈ ಕಾರಿನಲ್ಲಿರುವ ವಿಶಿಷ್ಟವಾದ ಸಂಗತಿಯೆಂದರೆ ಅದರಲ್ಲಿರುವ ಸೀಟ್. ಇದು ಕೇವಲ ಕೂರುವ ಸೀಟ್ ಅಲ್ಲ ಬದಲಿಗೆ ಮಲಗುವ ಸೀಟ್. ಮಲಗಿದ ನಂತರ ಚಾಲಕನ ಕಾಲುಗಳು ಹಿಂಭಾಗದಲ್ಲಿದ್ದರೆ, ತಲೆ ಕಾರಿನ ಮುಂಭಾಗದಲ್ಲಿರುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಈ ಕಾರಿನೊಳಗೆ ಹೋಗುವ ಮುನ್ನ ವಿಶೇಷ ಸೂಟ್ ಧರಿಸಬೇಕಾಗುತ್ತದೆ. ಈ ಸೂಟ್‌ನೊಂದಿಗೆ ಹೆಲ್ಮೆಟ್ ಸಹ ನೀಡಲಾಗುತ್ತದೆ. ಈ ಹೆಲ್ಮೆಟ್ ಮೆದುಳಿನಿಂದ ಹೊರಹೊಮ್ಮುವ ಅಲೆಗಳ ಸಹಾಯದಿಂದ ಕಾರನ್ನು ನಿಯಂತ್ರಿಸುತ್ತದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಹೆಲ್ಮೆಟ್ ಧರಿಸಿದ ನಂತರ ಕಾರು ಸಂಪೂರ್ಣವಾಗಿ ಚಾಲಕನ ಮನಸ್ಸಿನ ಜೊತೆಗೆ ಸಂಪರ್ಕ ಸಾಧಿಸುತ್ತದೆ. ನಂತರ ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ. ಈ ಕಾರಿನಲ್ಲಿ ಸ್ಟೀಯರಿಂಗ್ ನೀಡಿಲ್ಲ. ಈ ಫೀಚರ್'ನಿಂದಾಗಿ ಈ ಕಾರನ್ನು ಧರಿಸಬಹುದಾದ ಯಂತ್ರ ಅಂದರೆ ವೇರೆಬಲ್ ಮಷಿನ್ ಎಂದು ಕರೆಯಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಈ ಕಾರು 10 ಅಡಿ ಉದ್ದ ಹಾಗೂ 2 ಅಡಿ ಎತ್ತರವಿದೆ. ಈ ಕಾನ್ಸೆಪ್ಟ್ ಕಾರಿನ ವಿನ್ಯಾಸವು ಸಾಮಾನ್ಯ ಕಾರಿಗಿಂತ ವಿಭಿನ್ನವಾಗಿದೆ. ಈ ಕಾರು ಸ್ಟಾರ್‌ಫಿಶ್‌ನಂತೆ ಕಾಣುತ್ತದೆ. ಈ ಕಾರಿನ ವಿನ್ಯಾಸದಿಂದ ಪ್ರಭಾವಿತವಾಗಿರುವ ಕಂಪನಿಯು ತರಬೇತಿ ಮುಗಿಸಿರುವ ಡಿಸೈನರ್‌ನನ್ನು ಕಂಪನಿಗೆ ನೇಮಿಸಿಕೊಂಡಿದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಮುಂಬರುವ ದಿನಗಳಲ್ಲಿ ಕಂಪನಿಯು ಕಾರನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಉತ್ಪಾದಿಸಲಿದೆ. ನಿಸ್ಸಾನ್ ಕಾನ್ಸೆಪ್ಟ್ ಕಾರುಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.99 ಲಕ್ಷಗಳಾಗಿದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಮೂಲಗಳ ಪ್ರಕಾರ ಕೇವಲ ಐದು ದಿನಗಳಲ್ಲಿ ಈ ಮಾದರಿಯ 5,000 ಕಾರುಗಳನ್ನು ಬುಕ್ಕಿಂಗ್ ಮಾಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಈ ಎಸ್‌ಯುವಿಯನ್ನು ಖರೀದಿಸುವವರು ವಿತರಣೆಯನ್ನು ಪಡೆಯಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಎಕ್ಸ್‌ಇ (ಬೇಸ್), ಎಕ್ಸ್‌ಎಲ್ (ಮಿಡ್), ಎಕ್ಸ್‌ವಿ (ಹೈ) ಹಾಗೂ ಎಕ್ಸ್‌ವಿ (ಪ್ರೀಮಿಯಂ) ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ಇದರ ಜೊತೆಗೆ ಟೆಕ್ ಪ್ಯಾಕ್ ಅಡಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಪಡ್ಲ್ ಲ್ಯಾಂಪ್ ಹಾಗೂ ಜೆಬಿಎಲ್ ಸ್ಪೀಕರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯನ್ನು 1.0 ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಹಾಗೂ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 300, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಾರುತಿ ವಿಟಾರಾ ಬ್ರೆಝಾ ಹಾಗೂ ಟೊಯೋಟಾ ಅರ್ಬನ್ ಕ್ರೂಸರ್ ಗಳಿಗೆ ಪೈಪೋಟಿ ನೀಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಚಾಲಕನ ಮನಸ್ಸು ಬಯಸಿದಂತೆ ಚಲಿಸುತ್ತದೆ ನಿಸ್ಸಾನ್ ಕಂಪನಿಯ ಈ ಕಾನ್ಸೆಪ್ಟ್ ಕಾರು

ನಿಸ್ಸಾನ್ ಕಂಪನಿಯು ಅಮೆರಿಕಾದಲ್ಲಿ ಕಿಕ್ಸ್ ಎಸ್‌ಯುವಿಯ ಫೇಸ್ ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಕಿಕ್ಸ್'ನ ವಿನ್ಯಾಸ ಹಾಗೂ ಫೀಚರ್'ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. 2021ರಲ್ಲಿ ಭಾರತದಲ್ಲಿಯೂ ಕಿಕ್ಸ್ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Nissan concept car controlled by drivers mind. Read in Kannada.
Story first published: Friday, December 18, 2020, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X