ಫುಲ್ ಟೈಟ್ ಸೆಕ್ಯೂರಿಟಿ.. ರಸ್ತೆಯಲ್ಲಿ ಕಾಣಿಸಿಕೊಂಡಿತು ನೀತಾ ಅಂಬಾನಿಯ ಹೊಸ Rolls Royce ಕಾರು: ವಿಶೇಷತೆಗಳೇನು

ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಯಶಸ್ವಿ ಉದ್ಯಮಿಯಾಗಿದ್ದು, ದೇಶದ ಆಗರ್ಭ ಶ್ರೀಮಂತ ವ್ಯಕ್ತಿಯೂ ಆಗಿದ್ದಾರೆ. ಮೂಲಗಳ ಪ್ರಕಾರ ಅವರ ಗ್ಯಾರೇಜ್‌ನಲ್ಲಿ 168ಕ್ಕೂ ಹೆಚ್ಚು ಕಾರುಗಳಿವೆ. ಇತ್ತೀಚೆಗೆ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ ಕಾರನ್ನು ಖರೀದಿಸಿದ್ದಾರೆ.

ನೀತಾ ಅಂಬಾನಿ ಅವರ ನೂತನ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಕಾರಿನ ಹಲವು ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿಯೂ ಕಾಣಿಸಿಕೊಂಡಿವೆ. ನಿನ್ನೆ ಕಾರ್ ಕ್ರೇಜಿ ಇಂಡಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೀತಾ ಅಂಬಾನಿ ಅವರ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ ಕಾರು, ಇತರೆ ಭದ್ರತಾ ವಾಹನಗಳೊಂದಿಗೆ ರಸ್ತೆಯಲ್ಲಿ ಹೋಗುತ್ತಿರುವುದನ್ನು ನೋಡಬಹುದು.

Nita Ambani buys new Rolls Royce Phantom VIII EWB car worth rs 12 crore

ಬಹುತೇಕ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಬ್ಯ್ಲಾಕ್ (ಕಪ್ಪು) ಅಥವಾ ಬಿಳಿ (ವೈಟ್) ಬಣ್ಣದ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ನೀತಾ ಅಂಬಾನಿ ಅವರ ಈ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ (Rolls Royce Phantom VIII EWB) ಕಾರು, ಆಕರ್ಷಕ ರೋಸ್ ಕ್ವಾರ್ಟ್ಜ್ ಬಣ್ಣವನ್ನು ಹೊಂದಿದ್ದು, ಇದಕ್ಕಾಗಿ ಅವರು ಹೆಚ್ಚಿನ ಹಣ ವ್ಯಯಿಸಿದ್ದಾರೆ ಎನ್ನಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಬೆಲೆ ರೂ.10.48 ಕೋಟಿ (ಎಕ್ಸ್ ಶೋರೂಂ) ಇದೆ. ಈ ಕಾರು, 6749 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 563 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 900 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿದ್ದು, 9.8 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Nita Ambani buys new Rolls Royce Phantom VIII EWB car worth rs 12 crore

ಈ ಕಾರು ಆರ್ಕ್ಟಿಕ್ ವೈಟ್, ಬ್ಲ್ಯಾಕ್, ರೆಡ್, ಸಿಲ್ವರ್, ಡೈಮಂಡ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ದೊರೆಯಲಿದ್ದು, 460 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ. 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಅಲಾಯ್ ವೀಲ್ಸ್ ಒಳಗೊಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಮುಕೇಶ್ ಅಂಬಾನಿ ಅವರ ಗ್ಯಾರೇಜ್‌ನಲ್ಲಿ ನೂರಾರು ಐಷಾರಾಮಿ ಕಾರುಗಳಿವೆ. ಕೆಲವೇ ತಿಂಗಳ ಹಿಂದೆ ಕೊಂಡುಕೊಂಡಿದ್ದ ಫೆರಾರಿ ರೋಮಾ (Ferrari Roma) ಸೂಪರ್‌ಕಾರ್ 4.5 ಕೋಟಿ ಬೆಲೆಯನ್ನು ಹೊಂದಿದೆ. ಇದು 3.9-ಲೀಟರ್ ಸಾಮರ್ಥ್ಯದ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಪಡೆದಿದ್ದು, 8.93 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಬಿಎಂಡಬ್ಲ್ಯೂ 760ಎಲ್ಐ ಸೆಕ್ಯೂರಿಟಿ ಕಾರು ಸಹ ಇದ್ದು, ರೂ. 8.9 ಕೋಟಿ ಬೆಲೆಯನ್ನು ಹೊಂದಿದೆ.

ಇವು ಮಾತ್ರವಲ್ಲದೆ ಮುಕೇಶ್ ಅಂಬಾನಿ ಅವರು, ಫೆರಾರಿ ಎಸ್ಎಫ್ 90 ಸ್ಟ್ರಾಡೇಲ್ ಸ್ಪೋರ್ಟ್ಸ್ ಹೈಬ್ರಿಡ್ ಕಾರಿನ ಮಾಲೀಕರೂ ಆಗಿದ್ದಾರೆ. ಇದು ರೂ.7.50 ಕೋಟಿ ಬೆಲೆಯನ್ನು ಪಡೆದಿದ್ದು, 4-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಹಾಗೆಯೇ 2 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿದೆ. ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಸೇರಿದಂತೆ ಹಲವು ಕಾರುಗಳು ಕೂಡ ಅವರ ಗ್ಯಾರೇಜ್‌ನಲ್ಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 8, 2024, 15:11 [IST]
English summary
Nita ambani buys new rolls royce phantom car worth rs 12 crore details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+