ಇವಿಗಳನ್ನು ಪ್ರೋತ್ಸಾಹಿಸಲು ದುಬಾರಿ ಬೆಲೆಯ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರಿನಲ್ಲಿ ಆಗಮಿಸಿದ ಕೇಂದ್ರ ಸಚಿವ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ತಿಗೆ ಆಗಮಿಸಿ ಸುದ್ದಿಯಾಗಿದ್ದರು. ವಾಹನಗಳ ಮಾಲಿನ್ಯ ಕಡಿಮೆ ಮಾಡಲು ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆಗಾಗ್ಗೆ ಮಾತನಾಡುತ್ತಾರೆ.

ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಅವರು ಫ್ಲೆಕ್ಸ್ ಇಂಧನಗಳು ಮತ್ತು ಹೈಡ್ರೋಜನ್ ಇಂಧನ ಸೆಲ್ ಕಾರುಗಳಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರು ಆಗಾಗ್ಗೆ ಎಲೆಕ್ಟ್ರಿಕ್ ಕಾರುಗಳನ್ನು ಬಳಸುವುದನ್ನು ನೋಡಿದ್ದಾರೆ ಮತ್ತು ವಿಷಯದ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲು ಕೆಲವು ಕಾರ್ಯಕ್ರಮಗಳಿಗೆ ಆಗಮಿಸಲು ಅವರು ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಾರೆ. ಇತ್ತೀಚೆಗೆ ಅಂತಹ ಒಂದು ಕಾರ್ಯಕ್ರಮದಲ್ಲಿ ಸಚಿವ ನಿತಿನ್ ಗಡ್ಕರಿ ಅವರು ಐಷಾರಾಮಿ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಆಗಮಿಸಿದರು.

ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರಿನಲ್ಲಿ ಆಗಮಿಸಿದ ಕೇಂದ್ರ ಸಚಿವ

ಈ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯ ಚಿತ್ರವನ್ನು carcrazy.india ತಮ್ಮ Instagram ಪೇಜ್ ನಲ್ಲಿ ಹಂಚಿಕೊಂಡಿದೆ. ಈ ಎಸ್‍ಯುವಿಯ ನೋಂದಣಿ ಸಂಖ್ಯೆಯು ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಮಾಲೀಕರ ಹೆಸರನ್ನು ಪರಿಶೀಲಿಸಲು ನಾವು ಆನ್‌ಲೈನ್‌ನಲ್ಲಿ ಪರಿಶೀಲಿಸಿದವು. ಈ ಕಾರು ನಾಗ್ಪುರ ಮೂಲದ CIAN ಆಗ್ರೋ ಇಂಡಸ್ಟ್ರೀಸ್ ಒಡೆತನದಲ್ಲಿದೆ. ಪ್ರಸ್ತುತ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ಒಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಸಚಿವರು ಅದನ್ನು ಸಂಸ್ಥೆಯ ಹೆಸರಿನಲ್ಲಿ ಖರೀದಿಸಿದ್ದಾರೆಯೇ ಅಥವಾ ಸಂಸ್ಥೆಯು ಅದನ್ನು ತಮ್ಮ ಸ್ವಂತ ಬಳಕೆಗೆ ಖರೀದಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದು ಏನೇ ಇರಲಿ, ನಿತಿನ್ ಗಡ್ಕರಿ ಅವರು ಯಾವಾಗಲೂ ಪರಿಸರ ಸ್ನೇಹಿ ಕಾರುಗಳನ್ನು ಬಳಸುವುದು ಉತ್ತಮ ಮಾದರಿ ನಡೆಯಾಗಿದೆ. . ಜರ್ಮನ್ ಕಾರು ತಯಾರಕರಾದ ಬಿಎಂಡಬ್ಲ್ಯು ಒಂದು ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇದನ್ನು ಭಾರತದಲ್ಲಿ ರೂ.1.16 ಕೋಟಿ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಬಿಎಂಡಬ್ಲ್ಯು ಐಎಕ್ಸ್ ಎಂಬುದು AWD ವೈಶಿಷ್ಟ್ಯದೊಂದಿಗೆ ಬರುವ ಎಲ್ಲಾ ಎಲೆಕ್ಟ್ರಿಕ್ SAV (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಬ್ರ್ಯಾಂಡ್ ಆಗಿದೆ. ಅನೇಕ ಬಿಎಂಡಬ್ಲ್ಯು ಕಾರುಗಳಂತೆ, ಐಎಕ್ಸ್ ಅನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ಇದನ್ನು ದೇಶದಲ್ಲಿ CBU ಆಗಿ ಮಾರಾಟ ಮಾಡಲಾಗುತ್ತದೆ ಕಾರಿನ ಬುಕಿಂಗ್‌ಗಳು ಕಳೆದ ವರ್ಷ ಪ್ರಾರಂಭವಾಗಿದ್ದವು ಆದರೆ, ವಿತರಣೆಗಳು 2022ರ ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಪ್ರಾರಂಭವಾಯಿತು. ಇಲ್ಲಿ ಚಿತ್ರಗಳಲ್ಲಿ ಕಂಡುಬರುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ವಾಸ್ತವವಾಗಿ 2022ರ ಜೂನ್ ತಿಂಗಳಿನಲ್ಲಿ ನೋಂದಾಯಿಸಲಾಗಿದೆ.

ಬಿಎಂಡಬ್ಲ್ಯು ಐಎಕ್ಸ್ ಮಾದರಿಗಾಗಿ ಬಿಎಂಡಬ್ಲ್ಯು ಮೂರು ಮಾದರಿಯ ಚಾರ್ಜಿಂಗ್ ಸರ್ಪೊಟ್ ನೀಡಿದೆ.ಗ್ರಾಹಕರು 150kW ಡಿಸಿ ಫಾಸ್ಟ್ ಚಾರ್ಜ್‌ರ್, 50kW ಡಿಸಿ ಚಾರ್ಜ್‌ರ್ ಮತ್ತು 11 kW ಹೋಂ ಚಾರ್ಜರ್ ಆಯ್ಕೆ ನೀಡಿದೆ. 150kW ಡಿಸಿ ಫಾಸ್ಟ್ ಚಾರ್ಜ್‌ರ್ ಮೂಲಕ ಶೇ.80 ಚಾರ್ಜ್‌ಗೆ 31 ನಿಮಿಷ ತೆಗೆದುಕೊಂಡರೆ, 50kW ಡಿಸಿ ಚಾರ್ಜ್‌ರ್ ಮೂಲಕ ಚಾರ್ಜ್ ಮಾಡಲು 73 ನಿಮಿಷ ಮತ್ತು 11 kW ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 7 ಗಂಟೆಗಳ ಕಾಲಾವಕಾಶ ತೆಗದುಕೊಳ್ಳುತ್ತದೆ.

ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ ಕ್ಲಾರ್(CLAR) ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಐಎಕ್ಸ್ ಮಾದರಿಯನ್ನು ಅಭಿವೃದ್ದಿಪಡಿಸಿದ್ದು, ಹೊಸ ಕಾರು ಬಹುತೇಕ ಬಿಡಿಭಾಗಗಳು ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಒಳಗೊಂಡಿದೆ. ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಅಂಶಗಳಿಂದಾಗಿ ಕಾರಿನ ತೂಕ ಇಳಿಕೆಯಾಗುವುದರ ಜೊತೆ ಪರ್ಫಾಮೆನ್ಸ್ ಹೆಚ್ಚಳವಾಗಲೂ ಸಹಕಾರಿಯಾಗಿದ್ದು, ಹೊಸ ಕಾರು ವಿವಿಧ ಡ್ರೈವ್ ಮೋಡ್‌ಗಳ ಮೂಲಕ 326 ಬಿಎಚ್‌ಪಿ, 630 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಕಾಉ ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.

ಈ ಬಿಎಂಡಬ್ಲ್ಯು ಐಎಕ್ಸ್‌ನಲ್ಲಿರುವ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಇಂಟಿಲಿಜಿಟೆಂಡ್ ಡ್ರೈವ್ಸ್ ಅಸಿಸ್ಟೆನ್ಸ್ ಟೆಕ್ನಾಲಜಿಗೆ ನೆರವಾಗುವಂತೆ ಅಳವಡಿಸಲಾಗಿದ್ದು, ಇದರಲ್ಲಿರುವ ರಾಡಾರ್ ಸಿಸ್ಟಂ, ಸೆನ್ಸಾರ್ ಗಳು ಮತ್ತು ಕ್ಯಾಮೆರಾಗಳು ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿವೆ. ಹೊಸ ಬಿಎಂಡಬ್ಲ್ಯು ಐಎಕ್ಸ್ ವಿನ್ಯಾಸವು ವಿಶಿಷ್ಟವಾದ ಸಂರಚನೆಯೊಂದಿಗೆ ಭವಿಷ್ಯದ ಆಧಾರಿತ ಸ್ಟೈಲಿಂಗ್ ಹೊಂದಿದ್ದು, 3ಡಿ ಬ್ಯಾನೆಟ್, ವಿಶಿಷ್ಠ ವಿನ್ಯಾಸದ ವ್ಹೀಲ್ ಆರ್ಚ್, ಹೊಸ ಐಎಕ್ಸ್ ಬ್ರ್ಯಾಂಡ್‌ನ ಹೊಸ ಸ್ಕೇಲೆಬಲ್ ಆರ್ಕಿಟೆಕ್ಚರ್ ಜೊತೆ ಆಕರ್ಷಕ ಇಂಟಿರಿಯರ್ ಅನ್ನು ಸಹ ನೀಡಲಾಗಿದೆ.

Most Read Articles

Kannada
English summary
Nitin gadkari new ride is bmw ix electric suv details
Story first published: Wednesday, December 7, 2022, 13:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X