ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಗ್ರೇಟ್ ವಾಲ್ ಮೋಟಾರ್ ಕಂಪನಿ ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ವಾಹನಗಳನ್ನು ಉತ್ಪಾದಿಸಲು ನಿರ್ಧರಿಸಿತ್ತು. ಅಂದ ಹಾಗೆ ಗ್ರೇಟ್ ವಾಲ್ ಮೋಟಾರ್ಸ್ ಚೀನಾ ಮೂಲದ ಕಂಪನಿಯಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಕಂಪನಿಯ ಹೂಡಿಕೆಗೆ ಅನುಮೋದನೆ ನೀಡಿರಲಿಲ್ಲ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಇದರ ಪರಿಣಾಮವಾಗಿ ಗ್ರೇಟ್ ವಾಲ್ ಮೋಟಾರ್ ಕಂಪನಿಯು ಭಾರತದಲ್ಲಿ ಮಾಡ ಬೇಕಾಗಿದ್ದ ಹೂಡಿಕೆಯನ್ನು ವಿಶ್ವದ ಬೇರೆ ದೇಶದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದ್ದ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಕಂಪನಿಯು ಈಗ ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಬ್ರೆಜಿಲ್‌ನಲ್ಲಿ ಸುಮಾರು 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಕಂಪನಿಯು ತನ್ನ ವಾಹನಗಳನ್ನು ಉತ್ಪಾದಿಸಲು ಬ್ರೆಜಿಲ್‌ನ ಡೈಮ್ಲರ್‌ನ ವಾಹನ ತಯಾರಕ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತ ಹಾಗೂ ಚೀನಾ ದೇಶದ ನಡುವೆ ಗಡಿ ವಿವಾದ ಏರ್ಪಟ್ಟಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಚೀನಾ ಸೈನಿಕರು ಭಾರತದ ಗಡಿಯೊಳಗೆ ಅತಿಕ್ರಮವಾಗಿ ಪ್ರವೇಶಿಸಿದ್ದರು. ಎರಡೂ ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಹಲವು ಸೈನಿಕರು ಹುತಾತ್ಮರಾಗಿದ್ದರು. ಇನ್ನೂ ಕೆಲವು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಚೀನಾ ವಿರುದ್ಧ ಹಾಗೂ ಚೀನಾ ಕಂಪನಿಗಳ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಚೀನಾ ಕಂಪನಿಗಳನ್ನು ದೇಶದಿಂದ ಹೊರಗಟ್ಟುವಂತೆ ದೇಶಾದ್ಯಂತ ಜನರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಅದರಲ್ಲೂ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾ ದೇಶದ ಕೆಲವು ಸೆಲ್ ಫೋನ್ ಪ್ರೊಸೆಸರ್‌ಗಳ ಮೇಲೆ ನಿಷೇಧ ಹೇರಿತು.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಇದನ್ನು ಅನುಸರಿಸಿ ಕೆಲವು ರಾಜ್ಯ ಸರ್ಕಾರಗಳು ಸಹ ತಮ್ಮ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾ ಕಂಪನಿಗಳ ಹೂಡಿಕೆಗೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದವು. ಮಹಾರಾಷ್ಟ್ರ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿ ಸ್ಥಾಪಿಸಲಾಗಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿತು. ಭಾರತದಲ್ಲಿ ಗ್ರೇಟ್ ವಾಲ್ ಮೋಟಾರ್ ಕಂಪನಿಗೆ ಅನುಮೋದನೆ ದೊರೆಯುವ ಕೆಲ ದಿನಗಳ ಮೊದಲು ಈ ಘಟನೆ ಸಂಭವಿಸಿತು.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಈ ಕಾರಣಕ್ಕೆ ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಿ ಕಾರುಗಳನ್ನು ಬಿಡುಗಡೆಗೊಳಿಸಬೇಕೆಂಬ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ ಕನಸು ಕನಸಾಗೇ ಉಳಿಯಿತು. ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಭಾರತವನ್ನು ಪ್ರವೇಶಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದರೂ ಇನ್ನೂ ಅದರ ಪ್ರಯತ್ನವು ಫಲ ನೀಡಿಲ್ಲ. ಗ್ರೇಟ್ ವಾಲ್ ಮೋಟಾರ್ಸ್ ಎಸ್‌ಯುವಿ ತಯಾರಿಕೆಯಲ್ಲಿ ವಿಶ್ವದ ಅಗ್ರ ಗಣ್ಯ ಕಂಪನಿಗಳಲ್ಲಿ ಒಂದಾಗಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಕಂಪನಿಯು ಭಾರತದಲ್ಲಿ ಹಲವಾರು ಪ್ರಮುಖ ಕಾರು ಮಾದರಿಗಳನ್ನು ಬಿಡುಗಡೆ ಗೊಳಿಸಲು ನಿರ್ಧರಿಸಿದೆ. ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. 2020 ರ ಮೋಟಾರ್ ಶೋನಲ್ಲಿ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿತು. ಇದು ಕಂಪನಿಯ ಎಲೆಕ್ಟ್ರಿಕ್ ಕಾರಿನ ಬಗೆಗಿನ ಊಹಾಪೋಹಗಳಿಗೆ ನಾಂದಿ ಹಾಡಿತು.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಈ ಎಲೆಕ್ಟ್ರಿಕ್ ಕಾರಿನ ಆಗಮನವು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಕ್ರಮದಿಂದ ಈಡೇರದಂತೆ ಆಗಿದೆ. ಗ್ರೇಟ್ ವಾಲ್ ಮೋಟಾರ್ ಕಂಪನಿಯು ತನ್ನ ವಾಹನಗಳನ್ನು ಇತರ ಕಂಪನಿಗಳ ಸಹಾಯದಿಂದ ಮಾರಾಟ ಮಾಡುವ ಪ್ರಯತ್ನದಲ್ಲಿ ತೊಡಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಕೆಲವು ವಿದೇಶಿ ಕಾರು ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಈ ಪ್ರಕ್ರಿಯೆಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರೇಟ್ ವಾಲ್ ಮೋಟಾರ್ ಕಂಪನಿಯು ಭಾರತದಲ್ಲಿ ಹೂಡಿಕೆಗೆ ನಿಗದಿ ಪಡಿಸಿದ ಮೊತ್ತದ ಅಲ್ಪ ಭಾಗವನ್ನು ಬ್ರೆಜಿಲ್ ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಗ್ರೇಟ್ ವಾಲ್ ಮೋಟಾರ್ ಬಿಡುಗಡೆಗೊಳಿಸ ಬೇಕಿದ್ದ ಆರ್ 1 ಎಲೆಕ್ಟ್ರಿಕ್ ಕಾರು ರೂ. 7 ಲಕ್ಷಗಳಿಂದ ರೂ. 8 ಲಕ್ಷಗಳವರೆಗಿನ ಬೆಲೆ ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಈಗ ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳ ಬೆಲೆ ಸರಾಸರಿ ರೂ. 13.99 ಲಕ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟ್ ವಾಲ್ ಮೋಟಾರ್ ಕಂಪನಿಯ ಆರ್ 1 ದೇಶದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಗ್ರೇಟ್ ವಾಲ್ ಮೋಟಾರ್ ಕಂಪನಿಯು ಈ ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ 100 ಕಿ.ಮೀ ವೇಗ ಹಾಗೂ 40 ನಿಮಿಷಗಳಲ್ಲಿ 80% ನಷ್ಟು ಚಾರ್ಜ್ ಆಗುವ ಸಾಮರ್ಥ್ಯ ಸೇರಿದಂತೆ ಹಲವು ಪ್ರಮುಖ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲು ನಿರ್ಧರಿಸಿತ್ತು ಎಂಬುದು ಗಮನಾರ್ಹ.

ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶದತ್ತ ಮುಖ ಮಾಡಿದ ಚೀನಾ ಕಂಪನಿ

ಈ ರೀತಿಯ ವರದಿಗಳಿಂದ ಭಾರತದಲ್ಲಿ ಈ ಎಲೆಕ್ಟ್ರಿಕ್ ಕಾರಿನ ಮೇಲಿರುವ ನಿರೀಕ್ಷೆಯು ಹಲವು ಪಟ್ಟು ಹೆಚ್ಚಾಗಿದೆ. ಈ ನಿರೀಕ್ಷೆ ಈಡೇರುತ್ತದೆಯೇ ಇಲ್ಲವೇ ಎಂಬ ಪ್ರಶ್ನೆ ಭಾರತೀಯ ಗ್ರಾಹಕರಲ್ಲಿ ಉದ್ಭವವಾಗಿದೆ. ಈ ಬಗ್ಗೆ ಕಾರ್ ಅಂಡ್ ಬೈಕ್ ವರದಿ ಮಾಡಿದೆ.

Most Read Articles

Kannada
English summary
No approval from indian government great wall motor to invest in brazil details
Story first published: Saturday, August 14, 2021, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X