ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್‌ಗೆ RTO ಮುಂದೆ ಟೆಸ್ಟ್ ಕೊಡಬೇಕಿಲ್ಲ: ಹೊಸ ರೂಲ್ಸ್, ನಿಮ್ಮೂರಲ್ಲೇ ಟೆಸ್ಟ್!
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಳ್ಳುವುದು ಅಷ್ಟೇನು ಕಷ್ಟದ ವಿಷಯವಲ್ಲ. ಸರಿಯಾದ ರೀತಿಯಲ್ಲಿ ಡ್ರೈವಿಂಗ್ ಕಲಿತು, ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ಅನ್ನು ಕೊಟ್ಟರೆ ಕೆಲವೇ ದಿನಗಳಲ್ಲಿ ಎಲ್‌ಎಲ್ಆರ್ ಮತ್ತು ಕೊಂಚ ಕಾದರೆ ವಾಹನ ಚಲಾವಣಾ ಪರವಾನಿಗೆಯನ್ನು ಪಡೆಯಬುದು.
ಆದರೆ ಭಾರತ ಸರ್ಕಾರ ಇದೀಗ ವಾಹನ ಚಲಾಚಣಾ ಪರವಾನಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಿದ್ದು, ಇನ್ನು ಮುಂದೆ ನೀವು ಸುಲಭವಾಗಿ ಇದನ್ನು ಪಡೆಯಬಹುದಾಗಿದೆ. ಇನ್ನು ಮುಂದೆ ಜನರು ಡ್ರೈವಿಂಗ್ ಟೆಸ್ಟ್ ಅನ್ನು ಪಾಸ್ ಆಗಲು, ಸ್ಥಳೀಯ ಸರ್ಕಾರಿ ಸಾರಿಗೆ ಇಲಾಖಾ ಕಛೇರಿಗೆ ಹೋಗಬೇಕಾಗಿಲ್ಲ. ಇದಕ್ಕೆ ಬದಲಿ ಉಪಾಯವನ್ನು ಸರ್ಕಾರ ಸದ್ಯದಲ್ಲೇ ಜಾರಿಗೆ ತರಲಿದೆ.

ಹೌದು, ಮಾಹಿತಿಗಳ ಪ್ರಕಾರ ಮುಂಬರುವ ಜೂನ್ 1 ರಿಂದ ವ್ಯಕ್ತಿಗಳು ಆರ್‌ಟಿಒ ಆಫೀಸ್‌ಗೆ ಹೋಗದೆ, ಖಾಸಗಿ ಡ್ರೈವಿಂಗ್ ಟ್ರೈನಿಂಗ್ ಸೆಂಟರ್‌ಗಳಲ್ಲಿ ಟೆಸ್ಟ್ ಅನ್ನು ಕೊಡಬಹುದಾಗಿದ್ದು, ಇದಕ್ಕಾಗಿ ಸರ್ಕಾರ ಕೆಲವೊಂದು ರೂಪು ರೇಷೆಗಳನ್ನು ಸಿದ್ದಡಪಡಿಸಿದೆ. ಖಾಸಗಿ ಡ್ರೈವಿಂಗ್ ಟ್ರೈನಿಂಗ್ ಸೆಂಟರ್‌ಗಳು, ಟೆಸ್ಟ್‌ನಲ್ಲಿ ಪಾಸಾದವರಿಗೆ ಲೈಸೆನ್ಸ್ ಅನ್ನು ವಿತರಿಸುವ ಅಧಿಕಾರವನ್ನು ಹೊಂದುತ್ತಾರೆ.
ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಹೊಸ ನಿಯಮಗಳ ಅನುಷ್ಟಾನದಿಂದ ಸುಮಾರು 900,000 ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿದೆ. ಅದು ಮಾತ್ರವಲ್ಲದೇ ಇನ್ನು ಮುಂದೆ ವಾಹನಗಳಿಂದ ಹೊರ ಸೂಸುವ ಹೊಗೆಯ ತಪಾಸಣೆಯನ್ನು ಮತ್ತಷ್ಟು ಕಟ್ಟು ನಿಟ್ಟುಗೊಳಿಸಲಾಗುತ್ತದೆ.

ಡ್ರೈವಿಂಗ್ ಟೆಸ್ಟ್ ನಡೆಸಿ, ಪರವಾನಿಗೆಯನ್ನು ನೀಡಲು ಖಾಸಗೀ ಡ್ರೈವಿಂಗ್ ಶಾಲೆಗಳು ಅನುಸರಿಸಬೇಕಾಗಿರುವ ಹೊಸ ನಿಯಮಗಳನ್ನು ಸಹ ಸರ್ಕಾರ ಪಟ್ಟಿ ಮಾಡಿದೆ. ಸರ್ಕಾರಿ ನಿಯಮದ ಪ್ರಕಾರ ಡ್ರೈವಿಂಗ್ ಶಾಲೆಗಳಲ್ಲಿ ಕನಿಷ್ಟ ಭೂಮಿಯ ಸೌಲಭ್ಯವಿರಬೇಕು. ಚಾಲನಾ ತರಬೇತಿ ಕೇಂದ್ರಗಳು ಕನಿಷ್ಠ 1 ಎಕರೆ ಭೂಮಿಯನ್ನು ಹೊಂದಿರಬೇಕು (ನಾಲ್ಕು ಚಕ್ರಗಳ ತರಬೇತಿಗಾಗಿ 2 ಎಕರೆ).
ಡ್ರೈವಿಂಗ್ ಶಾಲೆಗಳು, ವ್ಯಕ್ತಿಗಳಿಗೆ ಅವಶ್ಯಕವಾಗಿರುವ ಪರೀಕ್ಷೆಗಳಿಗೆ ಸೌಲಭ್ಯವನ್ನು ಒದಗಿಸಬೇಕು. ಇದು ಮಾತ್ರವಲ್ಲದೇ ತರಬೇತುದಾರರು ಹೈಸ್ಕೂಲ್ ಡಿಪ್ಲೊಮಾ (ಅಥವಾ ತತ್ಸಮಾನ), ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು ಮತ್ತು ಬಯೋಮೆಟ್ರಿಕ್ಸ್ ಮತ್ತು ಐಟಿ ವ್ಯವಸ್ಥೆಗಳೊಂದಿಗೆ ಪರಿಚಿತರಾಗಿರಬೇಕು.

ಇನ್ನು ತರಬೇತಿಯ ಅವಧಿಯನ್ನು ನೊಡುವುದಾದರೆ, ಲಘು ಮೋಟಾರು ವಾಹನಗಳು (LMV) 4 ವಾರಗಳಲ್ಲಿ 29 ಗಂಟೆಗಳು, 8 ಗಂಟೆಗಳ ಥಿಯರಿ ಮತ್ತು 21 ಗಂಟೆಗಳ ಪ್ರಾಯೋಗಿಕ ತರಬೇತಿ ಎಂದು ವಿಂಗಡಿಸಲಾಗಿದೆ. ಹೆವಿ ಮೋಟಾರ್ ವೆಹಿಕಲ್ಸ್ (HMV) 6 ವಾರಗಳಲ್ಲಿ 38 ಗಂಟೆಗಳು, 8 ಗಂಟೆಗಳ ಥಿಯರಿ ಮತ್ತು 31 ಗಂಟೆಗಳ ಪ್ರಾಯೋಗಿಕ ತರಬೇತಿ ಎಂದು ವಿಂಗಡಿಸಲಾಗಿದೆ.
ಈ ನಿಯಮಗಳು ಖಾಸಗಿ ತರಬೇತಿ ಶಾಲೆಗಳಲ್ಲಿ ಹೊಸ ಚಾಲಕರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಚಾಲನಾ ಅನುಭವವನ್ನು ನೀಡುತ್ತದೆ.
ಅಪ್ಲಿಕೇಶನ್ ಪ್ರಕ್ರಿಯೆಯು ಬಹುತೇಕ ಒಂದೇ ಆಗಿರುತ್ತದೆ. ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ https://parivahan.gov.in/ ನಲ್ಲಿ ಅರ್ಜಿ ಸಲ್ಲಿಸಬಹುದು . ಅರ್ಜಿ ಶುಲ್ಕವು ಪರವಾನಗಿ ಪ್ರಕಾರವನ್ನು ಅವಲಂಬಿಸಿರುತ್ತದೆ. ದಾಖಲೆಗಳನ್ನು ಸಲ್ಲಿಸಲು ಮತ್ತು ಪರವಾನಗಿ ಅನುಮೋದನೆಗಾಗಿ ನಿಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಲು ನೀವು RTO ಗೆ ಭೇಟಿ ನೀಡಬೇಕಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








