Just In
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 3 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- News
ಬೆಂಗಳೂರು ಟ್ರಾಫಿಕ್ನಿಂದಾಗಿ ಆಂಬುಲೆನ್ಸ್ನಲ್ಲಿ ಹಸುಗೂಸು ಸಾವು!
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿನ್ನ ಬೆಲೆ ಬಹುಕೋಟಿ ಇರಲಿ ಬೆಂಗಳೂರಿಗೆ ಬಂದ್ಮೇಲೆ ಪೂಜೆ ಕಡ್ಡಾಯ: ಲ್ಯಾಂಬೊರ್ಘಿನಿಗೆ ಸಾಂಪ್ರದಾಯಿಕ ಸ್ವಾಗತ
ಭಾರತದಲ್ಲಿ ಸೂಪರ್‌ಕಾರ್‌ಗಳ ಸಂಖ್ಯೆ ಖಂಡಿತವಾಗಿಯೂ ಹೆಚ್ಚುತ್ತಿದೆ. ಹೊಸ ಮಾಲೀಕರು ವಿದೇಶಿ ನಿರ್ಮಿತ ಕಾರುಗಳಿಗೆ ದೇಶೀಯ ಸ್ಟೈಲ್‌ನಲ್ಲಿ ಸ್ವಾಗತ ಕೋರುತ್ತಿದ್ದಾರೆ. ಸಾಂಪ್ರದಾಯಿಕ ಪೂಜೆಗಳೊಂದಿಗೆ ತಮ್ಮ ಹೊಸ ಕಾರುಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಲ್ಯಾಂಬೊರ್ಘಿನಿ ಹುರಾಕನ್‌ಗೆ ಇಲ್ಲಿನ ರಸ್ತೆಬದಿಯಲ್ಲಿ ಪೂಜೆ ಮಾಡುವುದನ್ನು ಗುರುತಿಸಲಾಗಿದೆ. ಸ್ಪಾಟರ್ ಇಂಡಿಯಾ ಹಂಚಿಕೊಂಡಿರುವ ವಿಡಿಯೋದಲ್ಲಿ ಪೂಜಾರಿಯೊಬ್ಬರು ಹೊಚ್ಚಹೊಸ ಹುರಾಕನ್ ಕಾರಿಗೆ ಹಾರವನ್ನು ಹಾಕಿ ಪೂಜೆ ಮಾಡುತ್ತಿರುವುದನ್ನು ನೋಡಬಹುದು.

ಪೂಜಾ ವಿಧಿವಿಧಾನಗಳ ನಂತರ ರಸ್ತೆಗಳಲ್ಲಿ ಕಾರು ಓಡಾಡುವುದನ್ನು ನಾವು ನೋಡಬಹುದು. ಭಾರತದಲ್ಲಿ ವಾಹನದ ದೀರ್ಘಾಯುಷ್ಯಕ್ಕಾಗಿ ಇಂತಹ ಆಚರಣೆಗಳನ್ನು ಮಾಡಲಾಗುತ್ತದೆ. ನಮ್ಮ ಭಾರತದಲ್ಲಿ ಪ್ರತಿಯೊಬ್ಬರು ಕೂಡ ಹೊಸ ವಾಹನ ಖರೀದಿಸಿದರೆ ಪೂಜೆ ಮಾಡಿಸುವುದು ಸರ್ವೇ ಸಾಮಾನ್ಯ. ಇದನ್ನು ವಾಸ್ತವವಾಗಿ ವಾಹನ ಪೂಜೆ ಅಂತಲೇ ಕರೆಯಲಾಗುತ್ತದೆ.

ವಾಹನಗಳ ಮೇಲೆ ಇದೇ ರೀತಿಯ ಆಚರಣೆಗಳನ್ನು ಮಾಡುವ ಹಲವರು ಸೆಲಿಬ್ರಿಟಿಗಳನ್ನು ನೋಡಬಹುದು. ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅವರಿಂದ ಹಿಡಿದು ಚಿಕ್ಕಣನವರೆಗೂ ಪ್ರತಿಯೊಬ್ಬರು ಎಷ್ಟೇ ಐಷಾರಾಮಿ ಕಾರನ್ನು ಕೊಂಡರೂ ಪೂಜೆ ಮಾತ್ರ ಕಡ್ಡಾಯವಾಗಿರುತ್ತದೆ. ಇನ್ನು ಇತ್ತೀಚೆಗಷ್ಟೆ ಬಾಲಿವುಡ್‌ನ ಕರಣ್ ಜೋಹರ್, ಕಾರ್ತಿಕ್ ಆರ್ಯನ್ ಕೂಡ ತಮ್ಮ ಹೊಸ ಸೂಪರ್ ಕಾರುಗಳಿಗೆ ಪೂಜೆ ನೆರವೇರಿಸಿದ್ದರು.

ಲ್ಯಾಂಬೊರ್ಘಿನಿ ಹುರಾಕನ್
ಐಕಾನಿಕ್ ಗಲ್ಲಾರ್ಡೊಗೆ ಬದಲಿಯಾಗಿ 2013 ರಲ್ಲಿ ಹುರಾಕನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. 2020 ರಲ್ಲಿ ಹೊಸ ಹುರಾಕನ್ ಇವೋ ಅನ್ನು ತರುವ ಮೂಲಕ ಲಂಬೊರ್ಘಿನಿ ಭಾರತದಲ್ಲಿ ತನ್ನ ಮಾದರಿಯನ್ನು ನವೀಕರಿಸಿದೆ. ಹೊಸ ಹುರಾಕನ್ ಭಾರತದಲ್ಲಿ ಅನೇಕ ಗ್ರಾಹಕರನ್ನು ಹೊಂದಿದೆ. ವಾಸ್ತವವಾಗಿ ಇದು ಹೊಸ ಉರುಸ್ ಆಗಮನಕ್ಕೂ ಮೊದಲು ಭಾರತದಲ್ಲಿ ಹೆಚ್ಚು ಮಾರಾಟವಾದ ಮಾದರಿಯೂ ಹೌದು.

ಇನ್ನು ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ಹೊಸ ಹುರಾಕನ್ AWD ರೂಪಾಂತರದಂತೆ ತೋರುತ್ತಿದೆ. ಈ ಲಂಬೊರ್ಗಿನಿ ಹುರಾಕನ್ ಎಡಬ್ಲ್ಯೂಡಿ ಬೆಂಗಳೂರಿನಲ್ಲಿ ಸುಮಾರು 4.5 ಕೋಟಿ ರೂ., ಎಕ್ಸ್ ಶೋರೂಂ ಬೆಲೆಯಿದ್ದು, ಆನ್ ರೋಡ್ ಬೆಲೆಯು ಸುಮಾರು 4.8 ಕೋಟಿ ರೂ. ಆಗಬಹುದು. ಹುರಾಕನ್ ನ ಆರಂಭಿಕ ಬೆಲೆಯು ಭಾರತದಲ್ಲಿ ಸುಮಾರು 3.63 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ.

ಭಾರತದಲ್ಲಿ ಹಲವಾರು ಲ್ಯಾಂಬೊರ್ಘಿನಿ ಹುರಾಕನ್ ಕಾರುಗಳಿವೆ. 45 ಮಿ.ಮೀ ಏರುವ ಸಾಮರ್ಥ್ಯ ಹೊಂದಿರುವ ಈ ಕಾರು ಇಲ್ಲಿನ ರಸ್ತೆಗಳಿಗಾಗಿ ಸಾಕಷ್ಟು ಅಭ್ಯಾಸದ ಬಳಿಕ ಹೊಂದಿಕೊಳ್ಳಬೇಕಿದೆ. ವಾಹನದ ಏರ್ ಸಸ್ಪೆನ್ಶನ್ 45 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುವುದರಿಂದ ಇದು ಭಾರತೀಯ ರಸ್ತೆಗಳು ಮತ್ತು ಸ್ಪೀಡ್ ಬ್ರೇಕರ್‌ಗಳಲ್ಲಿ ಓಡಿಸಲು ಪರಿಪೂರ್ಣವಾಗಿದೆ.

ಇದಲ್ಲದೆ ಲಂಬೊರ್ಘಿನಿ ಹುರಾಕನ್ ಕಾರ್ಬನ್ ಫೈಬರ್ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ, ಈ ಮೂಲಕ ಕಾರು ಅತ್ಯಂತ ಹಗುರವಾಗಿದ್ದು ಕಾರಿನ ಪರ್ಫಾಮೆನ್ಸ್‌ಗೆ ಪವರ್ ನೀಡುತ್ತದೆ. ಇದರ 5.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ V10 ಎಂಜಿನ್ ಗರಿಷ್ಠ 640 PS ಪವರ್ ಮತ್ತು 600 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾರ್ಥ್ಯವನ್ನು ಹೊಂದಿದೆ.

ಇದು ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದ್ದು, ಪವರ್ ಔಟ್‌ಪುಟ್ ಅನ್ನು ಬದಲಾಯಿಸುವ ಆಯ್ಕೆಯೊಂದಿಗೆ ಬರುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಆಗುತ್ತದೆ.

ಸುರಕ್ಷತೆಗಾಗಿ ಲಂಬೊರ್ಘಿನಿಯು Hurcan Evo ನ ವೇಗವನ್ನು 325 km/h ಗೆ ಸೀಮಿತಗೊಳಿಸಿದೆ. ಕೆಲವೊಮ್ಮೆ ಅನಿಯಂತ್ರಿತ ಪರಿಸ್ಥಿತಿಗಳಲ್ಲಿ ಕಾರು ಹೆಚ್ಚಿನ ವೇಗವನ್ನು ಪಡೆದುಕೊಳ್ಳಬಹುದು. ಇನ್ನು ಲ್ಯಾಂಬೊರ್ಘಿನಿಯ ಉರುಸ್, ಇಟಾಲಿಯನ್ ಬ್ರಾಂಡ್‌ನಿಂದ ಪ್ರಪಂಚದಲ್ಲಿ ಮತ್ತು ಭಾರತದಲ್ಲಿ ವೇಗವಾಗಿ ಮಾರಾಟವಾಗುವ ವಾಹನವಾಗಿ ಗುರ್ತಿಸಿಕೊಂಡಿದೆ.

ಉರುಸ್ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು ನಮ್ಮ ಕೆಟ್ಟ ರಸ್ತೆಗಳನ್ನು ತಕ್ಕಮಟ್ಟಿಗೆ ಸುಲಭವಾಗಿ ನಿಭಾಯಿಸುತ್ತದೆ. ಇದು ಬೃಹತ್ ಬೂಟ್ ಸ್ಪೇಸ್‌ನೊಂದಿಗೆ ಯೋಗ್ಯವಾದ ಸ್ಥಳವನ್ನು ಹೊಂದಿದೆ. ಇನ್ನು ಇದರ ಡಿಸೈನ್ ಬಗ್ಗೆ ಹೇಳಬೇಕಿಲ್ಲ. ಸೂಪರ್ ಕಾರ್ ಆಗಿರುವುದರಿಂದ ವಿನ್ಯಾಸದಲ್ಲಿ ಯಾವುದೇ ಬೇಸರಗೊಳ್ಳುವ ಅಂಶಗಳೇ ಸಿಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಎಷ್ಟೇ ಬೆಲೆ ಬಾಳುವ ವಸ್ತುಗಳಾಗಲಿ ಭಾರತದಲ್ಲಿ ಪೂಜೆ ಕಡ್ಡಾಯವಾಗಿರುತ್ತದೆ. ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ದೇಶದ ಕುಬೇರರು ಕೂಡ ಗೌರವಿಸಲೇಬೇಕು, ಅಂಬಾನಿಯಿಂದ ಹಿಡಿದು ಅದಾನಿವರೆಗೆ ತಮ್ಮ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಸಲೇಬೇಕು. ಭಾರತೀಯ ಸಂಪ್ರದಾಯದಂತೆ ಈ ಸೂಪರ್ ಕಾರಿಗೆ ಪೂಜೆ ನೆರವೇರಿಸಿದ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.