ಯಾವ ಮಿಲಿಟರಿ ವಾಹನಕ್ಕೂ ಕಮ್ಮಿಯಿಲ್ಲ ಪವನ್ ಕಲ್ಯಾಣ್ 'ವಾರಾಹಿ'

ಕರ್ನಾಟಕ, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಳು ತೀರಾ ಸಮೀಪದಲ್ಲಿ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ರಾಜಕೀಯ ಪಕ್ಷಗಳ ಮುಖಂಡರು ಈಗಿನಿಂದಲೇ ತಯಾರಿ ಆರಂಭಿಸಿದ್ದು, ಪ್ರಚಾರಕ್ಕಾಗಿ ವಾಹನಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಜನಸೇನಾ ಪಕ್ಷದ ಪ್ರಚಾರಕ್ಕಾಗಿ ನಟ, ರಾಜಕಾರಣಿ ಪವನ್ ಕಲ್ಯಾಣ್ ವಿಶೇಷ ವಾಹನವೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ತಿಳಿಯೋಣ.

ನಟ ಪವನ್ ಕಲ್ಯಾಣ್ ಅವರು, ಪಕ್ಷದ ಪ್ರಚಾರಕ್ಕಾಗಿ ರೆಡಿ ಮಾಡಿಕೊಂಡಿರುವ ಈ ವಾಹನ ನೋಡಲು ಮಿಲಿಟರಿ ಪಡೆಗಳು ಬಳಕೆ ಮಾಡುವ ರೀತಿಯಲ್ಲಿಯೇ ಕಾಣಿಸುತ್ತದೆ. ಸದ್ಯ, ತಮ್ಮ ಪಕ್ಷ ಸಂಘಟನೆ ಮಾಡಲು ಯಾತ್ರೆ ಆರಂಭಿಸಲಿರುವ ಪವನ್ ಕಲ್ಯಾಣ್, ಈ ವಾಹನವನ್ನು ಉಪಯೋಗಿಸಲಿದ್ದು, ಇದರ ಮೂಲಕವೇ ಇಡೀ ರಾಜ್ಯವನ್ನು ಸುತ್ತಲಿದ್ದಾರೆ. ಈ ಪ್ರಚಾರ ವಾಹನದ ಫೋಟೋಗಳನ್ನು ಸ್ವ ತಃ ಅವರೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಈ ಫೋಟೋಗಳು ಮಾತ್ರವಲ್ಲದೆ, ವಿಡಿಯೋ ಕೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋವನ್ನು ಶೇರ್ ಮಾಡುವ ಜೊತೆಗೆ ಚುನಾವಣಾ ಸಮರಕ್ಕೆ 'ವಾರಾಹಿ' ಸಿದ್ಧವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ವಾಹನಕ್ಕೆ ವಾರಾಹಿ ಎಂದು ಹೆಸರಿಡುವುದರ ಹಿಂದೆಯೂ ಒಂದು ಕಥೆಯಿದೆ. ವಾರಾಹಿ ಎಂದರೆ ದುರ್ಗಾ ದೇವಿ ಎಂದರ್ಥ. ರಾಕ್ಷಸ ರಕ್ತಬೀಜಸೂರನನ್ನು ವಧೆ ಮಾಡಿದಳು. ಇದನ್ನು ಗಮನದಲ್ಲಿಟ್ಟುಕೊಂಡು ಈ ವಾಹನಕ್ಕೆ ವಾರಾಹಿ ಎಂದು ಹೆಸರಿಡಲಾಗಿದೆ.

ವೈರಲ್ ಆಗಿರುವ ಆಗಿರುತ್ತಿರುವ ಈ ವಿಡಿಯೋದಲ್ಲಿ ಪವನ್ ಕಲ್ಯಾಣ್ ಅವರ ಅಂಗರಕ್ಷರು, ವಾಹನದ ಸುತ್ತಲೂ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅಲ್ಲದೇ, ವಿಡಿಯೋ ನೋಡಿರುವ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಮಿಲಿಟರಿ ವಾಹನದಂತೆ ವಿನ್ಯಾಸ ಮಾಡಿರುವ 'ವಾರಾಹಿ'ಯನ್ನು ಪವನ್ ಕಲ್ಯಾಣ್ ಅವರು, ಬುಧವಾರ ಹೈದರಾಬಾದ್‌ನಲ್ಲಿ ಪ್ರಾಯೋಗಿಕವಾಗಿ ಚಾಲನೆ ಮಾಡಿ, ಪರಿಶೀಲಿಸಿದ್ದಾರೆ. ಪಕ್ಷದ ಮುಖಂಡ ತಂಗೆಲ್ಲ ಉದಯ್ ಶ್ರೀನಿವಾಸ್ ಅವರಿಗೂ ವಾಹನಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಸೂಚನೆ ನೀಡಿದ್ದಾರೆ.

ಈ ವಾಹನವನ್ನು ಪವನ್ ಕಲ್ಯಾಣ್ ರಾಜಕೀಯ ಪ್ರಚಾರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವಾಹವು ಸಣ್ಣ ಸಿಟ್ಟಿಂಗ್ ಕೊಠಡಿಯನ್ನು ಹೊಂದಿದೆ. ಅಲ್ಲದೆ, ವಾಹನದ ಸುತ್ತಲೂ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರಿಂದ ನಿರಂತರ ನಿಗಾ ಇಡಲಾಗುತ್ತದೆ. ಪ್ರಚಾರದ ಮೇಲೆ ಹತ್ತಿ ಮಾತನಾಡಲು ವಾಹನದೊಳಗೆ ಮೆಟ್ಟಿಲುಗಳು ಸಹ ಇವೆ ಎಂದು ಹೇಳಬಹುದು. ಇದರ ಜೊತೆಗೆ ಈ ವಾಹನ ಉತ್ತಮ ಲೈಟಿಂಗ್‌ ವ್ಯವಸ್ಥೆ ಮತ್ತು ಅದ್ಬುತ ಸೌಂಡ್‌ ಸಿಸ್ಟಮ್ ಅನ್ನು ಹೊಂದಿದೆ.

ಜಗಿತ್ಯಾಲ ಜಿಲ್ಲೆಯ ಕೊಂಡಗಟ್ಟು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ 'ವಾರಾಹಿ' ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ, ಈ ವಾಹನವನ್ನು ಪ್ರಚಾರಕ್ಕೆ ಬಳಕೆ ಮಾಡಲಿದ್ದಾರೆ. ಅಲ್ಲದೆ, ಹೊರಗಿಂದ ಗನ್ ಸೇರಿದಂತೆ ಯಾವುದೇ ಸಾಧನಗಳನ್ನು ಉಪಯೋಗ ಮಾಡಿಕೊಂಡು ಶತ್ರುಗಳು ದಾಳಿ ಮಾಡಿದರು ಒಳಗಿರುವವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ ಪವನ್ ಕಲ್ಯಾಣ್ ಪ್ರಚಾರಕ್ಕೆ ದೊಡ್ಡ ವಾಹನವೊಂದು ರೆಡಿಯಾಗಿದೆ. ಆದರೆ, ಈ ವಾಹನದ ನಿರ್ಮಾಣ ವೆಚ್ಚವನ್ನು ಬಹಿರಂಗಪಡಿಸಿಲ್ಲ.

ಈ ಪ್ರಚಾರದ ವಾಹನವು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ತಕ್ಷಣ, ಅನೇಕ ಪವನ್ ಕಲ್ಯಾಣ್ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿದೆ. ಮುಂದಿನ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾಮೆಂಟ್ ಗಳನ್ನೂ ಹಲವು ಮಂದಿ ಮಾಡುತ್ತಿದ್ದಾರೆ. ಆದರೆ, ಯಾವುದೇ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶವು ನಾವು-ನೀವು ಅಂದು ಕೊಡ ರೀತಿಯೇ ಬರಲು ಸಾಧ್ಯವಿಲ್ಲ. ಯಾವ ಪಕ್ಷವನ್ನು ಗೆಲ್ಲಿಸಬೇಕೆಂಬುದು ಜನರ ತೀರ್ಮಾನವಾದರೇ, ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬುದು ಆ ಪಕ್ಷದ ನಿರ್ಧಾರವಾಗಿರುತ್ತದೆ.

ಇನ್ನು, ಪವನ್ ಕಲ್ಯಾಣ್ ಈಗಾಗಲೇ 8 ಮಹೀಂದ್ರಾ ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿದ್ದಾರೆ. ಈ ಕಾರುಗಳ ಬೆಲೆ 1.5 ರೂ. ಕೋಟಿಯವರೆಗೂ ಇರಲಿದೆಯಂತೆ. ಈ ವಾಹನಗಳನ್ನು ಪಕ್ಷದ ಪ್ರಚಾರದ ಭಾಗವಾಗಿಯೂ ಬಳಸಲಾಗುತ್ತದೆ. ಒಟ್ಟಿನಲ್ಲಿ ಪವನ್ ಕಲ್ಯಾಣ್ ಅವರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವಂತೆ ಕಾಣುತ್ತಿದೆ. ಆದರೆ, 2019ರ ಚುನಾವಣೆ ಅವರ ನಿರೀಕ್ಷಿಯಂತೆ ಫಲಿತಾಂಶ ಬಂದಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಮ್ಯಾಜಿಕ್ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.

Most Read Articles

Kannada
English summary
No military vehicle is lacking pawan kalyan varah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X