ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಜಪಾನ್‌ನ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕಾಜಿಮಾ ಕನ್‌ಸ್ಟ್ರಕ್ಷನ್‌ನ ಸಹಯೋಗದೊಂದಿಗೆ, ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಬಾಹ್ಯಾಕಾಶ ಆವಾಸಸ್ಥಾನ (artificial space habitat) ಮತ್ತು ಭೂಮಿ, ಚಂದ್ರ ಮತ್ತು ಮಂಗಳ ಗ್ರಹಗಳನ್ನು ಸಂಪರ್ಕಿಸುವ ಅಂತರ್-ಗ್ರಹ ರೈಲುಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಶೂನ್ಯ ಮತ್ತು ಕಡಿಮೆ ಗುರುತ್ವಾಕರ್ಷಣೆಯಲ್ಲಿ ಮಾನವ ಮಸ್ಕ್ಯುಲೋಸ್ಕೆಲಿಟಲ್ ವ್ಯವಸ್ಥೆಯಿಂದಾಗುವ ದುರ್ಬಲತೆಯನ್ನು ತಡೆಯಲು ಭೂಮಿಯ ಗುರುತ್ವಾಕರ್ಷಣೆ, ಭೂಪ್ರದೇಶ ಮತ್ತು ವಾತಾವರಣವನ್ನು ಮರುಸೃಷ್ಠಿಸುವ 'ಗ್ಲಾಸ್' ಎಂಬ ಆವಾಸಸ್ಥಾನದ ರಚನೆಯನ್ನು ಅಭಿವೃದ್ಧಿಪಡಿಸುವ ಭವಿಷ್ಯದ ಯೋಜನೆಗಳನ್ನು ಸಂಶೋಧಕರ ತಂಡವು ಘೋಷಿಸಿದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಹೊಸ ಬಾಹ್ಯಾಕಾಶ ಓಟವು ನಮ್ಮ ಕಾಲದ ನಿರ್ಣಾಯಕಗಿದ್ದು, ಯುಎಸ್ ತನ್ನ ಚಂದ್ರನ ಕಾರ್ಯಾಚರಣೆಗಳನ್ನು ಮಾಡುತ್ತಿದ್ದರೆ, ಚೀನಾ ಮಂಗಳನನ್ನು ಅನ್ವೇಷಿಸಲು ಪ್ರಾರಂಭಿಸಿದೆ, ಇನ್ನು ರಷ್ಯಾ ಮತ್ತು ಚೀನಾ ಜಂಟಿಯಾಗಿ ಚಂದ್ರನ ನೆಲೆಯನ್ನು ಯೋಜಿಸುತ್ತಿವೆ. ಈ ಯೋಜನೆಗಳನ್ನು ನೋಡಿದರೆ ಭೂಮಿಯಿಂದ ಹೊರಗೆ ವಾಸಿಸುವ ಮಾನವನ ಕನಸು ದೂರವೇನಿಲ್ಲ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಆದರೆ ಭೂಮಿಯ ಗುರುತ್ವಾಕರ್ಷಣೆಯ ಹೊರಗೆ ವಾಸಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ದೇಹ ಭೂಮಿಯ ವಾತಾವರಣಕ್ಕೆ ಹೊಂದಿಕೊಂಡು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡಿವೆ. ಹಾಗಾಗಿ ಗುರುತ್ವಾಕರ್ಷಣೆಯ ಹೊರಗೆ ವಾಸಿಸುವುದು ಅಪಾಯಗಳನ್ನು ತರಬಹುದು. ಇವೆಲ್ಲವನ್ನು ಗಣನೆಗೆ ತೆಗೆದುಕೊಂಡಿರುವ ಸಂಶೋಧಕರ ತಂಡವು ಗ್ಲಾಸ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

'ಗ್ಲಾಸ್'ನಿಂದ ಚಂದ್ರ ಮತ್ತು ಮಂಗಳನಲ್ಲಿ ಮತ್ತೊಂದು ಭೂಮಿ!

ಮಾನವನ ದೇಹ ಬಾಹ್ಯಾಕಾಶದಲ್ಲಿನ ಕಡಿಮೆ ಗುರುತ್ವಾಕರ್ಷಣೆಗೆ ಹೆಚ್ಚು ಒಗ್ಗಿಕೊಳ್ಳದಿರಬಹುದು, ಸ್ನಾಯುಗಳು, ಮೂಳೆಗಳು ಮತ್ತು ಒಟ್ಟಾರೆ ಎಕ್ಸೋಸ್ಕೆಲಿಟಲ್ ರಚನೆಯು ಕಾಲಾನಂತರದಲ್ಲಿ ಅವುಗಳ ಅಂತರ್ಗತ 'ಶಕ್ತಿ' ಮತ್ತು 'ಮೃದುತ್ವ'ವನ್ನು ಕಳೆದುಕೊಳ್ಳುತ್ತವೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಬಾಹ್ಯಾಕಾಶದಲ್ಲಿ ಮಕ್ಕಳನ್ನು ಬೆಳೆಸುವುದು ಇನ್ನೂ ಅಪಾಯಕಾರಿ, ಏಕೆಂದರೆ ಅದರ ಪರಿಣಾಮಗಳನ್ನು ಇನ್ನೂ ಅಧ್ಯಯನ ಮಾಡಿಲ್ಲ, ಅವರು ಯಶಸ್ವಿಯಾಗಿ ಜನಿಸದಿರುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಮಾಡಿದರೂ ಭೂಮಿಗೆ ಮರಳಿದ ಮೇಲೆ ತಾವಾಗಿಯೇ ನಿಲ್ಲಲು ಕೂಡ ಸಾಧ್ಯವಾಗುವುದಿಲ್ಲ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಹೀಗಾಗಿ, ಕ್ಯೋಟೋ ವಿಶ್ವವಿದ್ಯಾನಿಲಯ ಮತ್ತು ಕಾಜಿಮಾ ನಿರ್ಮಾಣವು 'ದಿ ಗ್ಲಾಸ್' ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ, ಇದು ಕೃತಕ ಗುರುತ್ವಾಕರ್ಷಣೆಯೊಂದಿಗೆ ಶಂಕುವಿನಾಕಾರದ ರಚನೆಯನ್ನು ಹೊಂದಿದೆ. ಇದು ಸಾರ್ವಜನಿಕ ಸಾರಿಗೆ, ಹಸಿರು ಪ್ರದೇಶಗಳು (ಮರ, ಗಿಡಗಳ ವಾತಾವರಣ) ಮತ್ತು ಜಲಮೂಲಗಳೊಂದಿಗೆ ಸಂಪೂರ್ಣ ಭೂಮಿಯ ಮೇಲಿನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಇದರ ಡೆಮೊ ಚಿತ್ರದಲ್ಲಿ ದೊಡ್ಡ ತಿರುಗುವ ಸಿಲಿಂಡರ್ ಆಕಾರದ ನೇರವಾದ ರಚನೆಯನ್ನು ಕಾಣಬಹದು, ಇದು ತಲೆಕೆಳಗಾದ ಕೋನ್ ಆಗಿದ್ದು ಭೂಮಿಯ ನಿಜವಾದ ಗುರುತ್ವಾಕರ್ಷಣೆಯನ್ನು ಹೊಂದಿರುತ್ತದೆ. ಸರಿಸುಮಾರು 1,300 ಅಡಿ ಎತ್ತರ ಮತ್ತು 328 ಅಡಿ ರೇಡಿಯಸ್‌ನೊಂದಿಗೆ, ಸಂಶೋಧಕರು 2050ರ ವೇಳೆಗೆ ಇದನ್ನು ನಿರ್ಮಿಸಲು ಆಶಿಸುತ್ತಿದ್ದಾರೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ದಿ ಅಸಾಹಿ ಶಿಂಬುನ್ ಪ್ರಕಾರ, ಇದರ ಅಂತಿಮ ಆವೃತ್ತಿಯ ನಿರ್ಮಾಣ ಪೂರ್ಣಗೊಳ್ಳುವಷ್ಟರಲ್ಲಿ ಸುಮಾರು ಒಂದು ಶತಮಾನವನ್ನು ತೆಗೆದುಕೊಳ್ಳುತ್ತದೆ. ಇನ್ನು ಚಂದ್ರನ ಮೇಲಿರುವದನ್ನು 'ಲುನಾಗ್ಲಾಸ್' ಮತ್ತು ಮಂಗಳನ ಆವಾಸಸ್ಥಾನವನ್ನು 'ಮಾರ್ಸ್‌ಗ್ಲಾಸ್' ಎಂದು ಕರೆಯಲಾಗುತ್ತದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಅಂತರ್‌ಗ್ರಹ 'ಸ್ಪೇಸ್ ಎಕ್ಸ್ ಪ್ರೆಸ್'!

ಕಡಿಮೆ ಗುರುತ್ವಾಕರ್ಷಣೆಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳನ್ನು ತಗ್ಗಿಸಲು ದೂರದ ಪ್ರಯಾಣದ ಸಮಯದಲ್ಲಿಯೂ 1G ಗುರುತ್ವಾಕರ್ಷಣೆಯನ್ನು ನಿರ್ವಹಿಸುವ 'ಹೆಕ್ಸಾಟ್ರಾಕ್' ಎಂದು ಕರೆಯಲ್ಪಡುವ ಅಂತರ್‌ಗ್ರಹ ಸಾರಿಗೆ ವ್ಯವಸ್ಥೆಯನ್ನು ಅವರು ರೂಪಿಸಲು ಯೋಜಿಸಿದ್ದಾರೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಹೆಕ್ಸಾಕ್ಯಾಪ್ಸುಲ್ಗಳು ಷಡ್ಭುಜೀಯ ಆಕಾರವನ್ನು ಹೊಂದಿರುವ ಕ್ಯಾಪ್ಸುಲ್ಗಳಾಗಿವೆ. ಇವು ಕೇಂದ್ರ ಭಾಗಕ್ಕೆ ಚಲಿಸುವ ಸಾರಿಗೆಯಾಗಿದ್ದು, ಭೂಮಿ ಮತ್ತು ಚಂದ್ರನ ನಡುವೆ ಸಂಚರಿಸಲು ಸಣ್ಣ ಮಿನಿ-ಕ್ಯಾಪ್ಸುಲ್ (15 ಮೀಟರ್ ರೇಡಿಯಸ್) ಶಟ್ಲಿಂಗ್ ಇದೆ. ಇನ್ನು ಭೂಮಿ-ಮಂಗಳ ಮತ್ತು ಚಂದ್ರ-ಮಂಗಳನ ನಡುವೆ ಪ್ರಯಾಣಿಸುವ ದೊಡ್ಡ ಕ್ಯಾಪ್ಸುಲ್ (30 ಮೀಟರ್ ರೇಡಿಯಸ್) ಇದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಇನ್ನು ಕ್ಯಾಪ್ಸುಲ್‌ಗಳು ಪ್ರಯಾಣಿಸುವ ಮಾರ್ಗದಲ್ಲಿ ಹೊರಗಿನ ಚೌಕಟ್ಟು 'ತೇಲುತ್ತದೆ,' ಬಹುಶಃ ಇದಕ್ಕಾಗಿ ವಿದ್ಯುತ್ಕಾಂತೀಯ ತಂತ್ರಜ್ಞಾನವನ್ನು ಬಳಸಬಹುದು, ಜರ್ಮನಿ ಮತ್ತು ಚೀನಾದ ಮ್ಯಾಗ್ಲೆವ್ ರೈಲುಗಳಲ್ಲಿ ಇಂತಹ ವಿನ್ಯಾಸವನ್ನು ನೋಡಬಹುದು. ಇನ್ನು ಚಂದ್ರ ಮತ್ತು ಮಂಗಳ ನಡುವಿನ ಚಲನೆಯು 1G (30 ಮೀಟರ್ ರೇಡಿಯಸ್, 5.5 ಸುತ್ತುಗಳಿಗೆ/ನಿಮಿಷ) ನಿರ್ವಹಿಸುತ್ತದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಭೂಮಿಯ ಮೇಲಿನ ಟ್ರ್ಯಾಕ್‌ನ ನಿಲ್ದಾಣವನ್ನು ಟೆರ್ರಾ ನಿಲ್ದಾಣ ಎಂದು ಕರೆಯಲಾಗುತ್ತದೆ, ಹಾಗಯೇ ಆರು ಕೋಚ್‌ಗಳೊಂದಿಗೆ ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ನಲ್ಲಿ ಚಲಿಸುವ ರೈಲನ್ನು ಸ್ಪೇಸ್ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ಪ್ರತಿ ಗ್ರಹದ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲು ಮತ್ತು ವಾತಾವರಣದ ಹೊರಗಿರುವಾಗ ವೇಗವನ್ನು ಹೆಚ್ಚಿಸಲು ಮತ್ತು ನಿಧಾನಗೊಳಿಸಲು ರಾಕೆಟ್ ಬೂಸ್ಟರ್‌ಗಳನ್ನು ಜೋಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

"ಕಳೆದ ಕೆಲವು ವರ್ಷಗಳಿಂದ ಚರ್ಚೆಗಳ ಮೂಲಕವೇ ಕಾಲ ಕಳೆಯಲಾಗಿದೆ, ಆದರೆ ಈ ಬಾರಿ ಪ್ರಸ್ತಾಪಿಸಿರುವ ಈ ಮೂರು ಯೋಜನೆಗಳು ಇತರ ದೇಶಗಳ ಅಭಿವೃದ್ಧಿಯಲ್ಲಿಲ್ಲದ ಪ್ರಮುಖ ತಂತ್ರಜ್ಞಾನಗಳಾಗಿವೆ. ಭವಿಷ್ಯದಲ್ಲಿ ಮಾನವ ಬಾಹ್ಯಾಕಾಶ ವಸಾಹತುಶಾಹಿಯನ್ನು ಖಚಿತಪಡಿಸಿಕೊಳ್ಳಲು ಅನಿವಾರ್ಯವಾಗಿವೆ" ಎಂದು ಜಪಾನ್ ಹೇಳಿದೆ.

ರಾಕೆಟ್‌ ಅಲ್ಲ ಈ ಬಾರಿ ಚಂದ್ರನ ಮೇಲೆ ಬುಲೆಟ್ ರೈಲನ್ನು ಇಳಿಸಲಿದ್ದೇವೆ: ಜಪಾನ್‌ ಹೇಳಿಕೆ

ಡ್ರೈವ್‌ ಸ್ಪಾರ್ಕ್ ಆಭಿಪ್ರಾಯ

ಕ್ಯೋಟೋ ವಿಶ್ವವಿದ್ಯಾನಿಲಯದ SIC ಮಾನವಸಹಿತ ಕಾಸ್ಮಾಲಜಿ ಸಂಶೋಧನಾ ಕೇಂದ್ರ ಮತ್ತು ಗ್ರಾಜುಯೇಟ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟಿಗ್ರೇಟೆಡ್ ಸ್ಟಡೀಸ್‌ನ ನಿರ್ದೇಶಕ ಯೋಸುಕೆ ಯಮಾಶಿಕಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮಂಗಳ ಗ್ರಹಕ್ಕೆ ವಲಸೆ ಹೋಗಲು ಯೋಜನೆಗಳನ್ನು ರೂಪಿಸಿಕೊಂಡಿದ್ದರೇ, ಜಪಾನ್ ಸಂಪೂರ್ಣವಾಗಿ ವಿಭಿನ್ನವಾದ ವಿಷಯದೊಂದಿಗೆ ಬಂದಿರುವುದು ಹಲವರನ್ನು ದಿಗ್ಭ್ರಮೆಗೊಳಿಸಿದೆ.

Most Read Articles

Kannada
English summary
Not a rocket This time Japan is ready to land a bullet train on the moon
Story first published: Saturday, July 16, 2022, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X