ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಕಳೆದ ವರ್ಷದ ಸೆಪ್ಟೆಂಬರ್‍‍ನಿಂದ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಸಾವಿರಾರು ರೂಗಳ ದಂಡವನ್ನು ವಿಧಿಸಲಾಗುತ್ತಿದೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ತಮ್ಮ ವಾಹನಗಳನ್ನು ಚಲಾಯಿಸಲು ನೀಡುವ ಪೋಷಕರಿಗೂ ಸಹ ಭಾರೀ ಪ್ರಮಾಣದ ದಂಡವನ್ನು ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತಿದೆ. ಈ ಕ್ರಮಗಳಿಂದಾಗಿ ಕೆಲವೆಡೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಆದರೂ ಕೆಲವರು ಇವುಗಳಿಂದ ಎಚ್ಚೆತ್ತಿಲ್ಲ. ಇನ್ನೂ ಸಹ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ತಮ್ಮ ವಾಹನಗಳನ್ನು ಚಲಾಯಿಸಲು ನೀಡುತ್ತಲೇ ಇದ್ದಾರೆ. ಇದೇ ರೀತಿಯ ಮತ್ತೊಂದು ಪ್ರಕರಣ ಒಡಿಶಾ ರಾಜ್ಯದಲ್ಲಿ ನಡೆದಿದೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ತನ್ನ ತಂದೆಯಿಂದ ಬೈಕ್ ಪಡೆದ ಬಾಲಕನೊಬ್ಬ ಆ ಸ್ಕೂಟರ್‍‍‍ನಲ್ಲಿ ಟ್ರಿಪಲ್ ರೈಡ್ ಮಾಡಿದ್ದಾನೆ. ಅದೂ ಸಹ ಒನ್‍‍ವೇಯಲ್ಲಿ ರಾಂಗ್ ಸೈಡಿನಲ್ಲಿ. ಈ ಘಟನೆ ನಡೆದಿರುವುದು ಒಡಿಶಾದ ಬದ್ರಾಕ್ ಜಿಲ್ಲೆಯ ರಾಣಿಗರಿಯಾದಲ್ಲಿ. ಘಟನೆ ನಡೆಯುತ್ತಲೇ ಆರ್‍‍ಟಿ‍ಒ ಅಧಿಕಾರಿಗಳು ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಹೀಗೆ ರಾಂಗ್ ಸೈಡಿನಲ್ಲಿ ಟ್ರಿಪಲ್ ರೈಡ್ ಮಾಡಿ ಆರ್‍‍‍ಟಿ‍ಒ ಅಧಿಕಾರಿಗಳ ಕೈಗೆ ತಗ್ಲಾಕಿ ಕೊಂಡಿರುವ ಬಾಲಕನ ಹೆಸರು ಆಕಾಶ್ ಬೋಹ್ರಾ. ಆತ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಟ್ರಿಪಲ್ ರೈಡ್ ಮಾಡಿದ್ದಾನೆ. ಮೂವರೂ ಸಹ ಅಲ್ಲಿನ ಕಾಲೇಜೊಂದರ ವಿದ್ಯಾರ್ಥಿಗಳು.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ತನಿಖೆಯ ನಂತರ ಆಕಾಶ್ ಬೋಹ್ರಾನ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವುದು ತಿಳಿದು ಬಂದಿದೆ. ಬೈಕ್ ಚಾಲನೆ ಮಾಡಲು ಆಕಾಶ್ ಬೋಹ್ರಾ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ. ಬೈಕ್ ಚಾಲನೆ ಮಾಡುವ ವೇಳೆಯಲ್ಲಿ ಹೆಲ್ಮೆಟ್ ಧರಿಸಿರಲಿಲ್ಲ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಇದೂ ಸಾಲದೆಂಬಂತೆ ಬೈಕ್ ಅನ್ನು ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಲೇ ಅಲ್ಲಿನ ಆರ್‍‍ಟಿ‍ಒ ಅಧಿಕಾರಿ ವಿವಿಧ ನಿಯಮಗಳ ಉಲ್ಲಂಘನೆಗಾಗಿ ರೂ.42,500 ದಂಡ ವಿಧಿಸಿ, ಭಾರೀ ಪ್ರಮಾಣದ ಉಡುಗೊರೆ ನೀಡಿದ್ದಾರೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಈ ದಂಡವನ್ನು ಆಕಾಶ್‍‍ನ ತಂದೆಗೆ ವಿಧಿಸಲಾಗಿದೆ. ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೇ ಬೈಕ್ ಚಾಲನೆ ಮಾಡಿ, ಆತ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಚಾಲನೆ ಮಾಡಿದ ಕಾರಣಕ್ಕೆ, ಇಷ್ಟು ಮೊತ್ತದ ದಂಡವನ್ನು ವಿಧಿಸಲಾಗಿದೆ.

ಮಗನ ತಪ್ಪಿಗೆ ಅಪ್ಪನಿಗೆ ಸೂಪರ್ ಗಿಫ್ಟ್ ನೀಡಿದ ಆರ್‍‍ಟಿ‍ಒ ಅಧಿಕಾರಿ..!

ಸಾರ್ವಜನಿಕರು ಹಾಗೂ ಇತರ ವಾಹನ ಸವಾರರ ಪ್ರಕಾರ ಭಾರತದಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಬೇಕಾಂದರೆ ಇಷ್ಟು ಮೊತ್ತದ ದಂಡವನ್ನು ವಿಧಿಸುತ್ತಿರುವುದು ಸರಿಯಾಗಿದೆ. ಇದರ ಜೊತೆಗೆ ಪೋಷಕರನ್ನು ಜೈಲಿಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.

Most Read Articles

Kannada
English summary
RTO imposes hefty fine on man for giving vehicle to his son. Read in Kannada.
Story first published: Monday, February 10, 2020, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X