ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಪ್ರತಿಯೊಬ್ಬರಿಗೆ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ನಿಯಮ ಎಲ್ಲರಿಗೂ ಗೊತ್ತಿದೆ. ಆದರೆ ಟ್ರಕ್ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ಸಂಚಾರಿ ಪೊಲೀಸರು 1 ಸಾವಿರ ರೂಪಾಯಿ ದಂಡ ವಿಧಿಸಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಒಡಿಸ್ಸಾದಲ್ಲಿ ಟ್ರಕ್ ಚಾಲಕ ಪ್ರಮೋದ್ ಕುಮಾರ್ ತನ್ನ ವಾಹನದ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದರು. ಆದರೆ ಆಧಿಕಾರಿಗಳು ಆತನ ಪರ್ಮಿಟ್ ನವೀಕರಿಸಲು ಸಾಧ್ಯವಿಲ್ಲವೆಂದು ಎಂದು ತಿರಸ್ಕರಿಸಿದ್ದಾರೆ. ಇದರಿಂದ ಗಾಬರಿಗೊಂಡ ಟ್ರಕ್ ಚಾಲಕ ಕಾರಣ ಕೇಳಿದಾಗ ಮೊದಲು ದಂಡವನ್ನು ಕಟ್ಟಲು ಹೇಳಿದ್ದಾರೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಟ್ರಕ್ ಚಾಲಕ ಯಾಕೆ ದಂಡ ಕಟ್ಟಬೇಕೆಂದು ಕಾರಣವನ್ನು ಕೇಳಿದ್ದಾರೆ. ಆದರೆ ಪೊಲೀಸರು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿರುವ ಪ್ರಕರಣ ದಾಖಲಿಸಿ ಒಂದು ಸಾವಿರ ರೂ.1,000 ದಂಡ ವಿಧಿಸಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ನೀವು ದಂಡದ ಮೊತ್ತ ಪಾವತಿಸದಿರುವ ಹಿನ್ನಲೆಯಲ್ಲಿ ನಿಮ್ಮ ವಾಹನದ ಪರ್ಮಿಟ್ ನವೀಕರಣ ಸಾಧ್ಯವಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಇದ್ ಕೇಳಿ ಟ್ರಕ್ ಚಾಲಕ ಪ್ರಮೋದ್ ಕುಮಾರ್ ಬೆಚ್ಚಿ ಬಿದ್ದಿದ್ದಾರೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಆಗ ಟ್ರಕ್ ಚಾಲಕ ನಾನು ನನ್ನ ಜೀವನದಲ್ಲಿ ಟ್ರಕ್ ಬಿಟ್ಟು ಬೇರೆ ವಾಹನ ಚಲಾಯಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಒಡಿಸ್ಸಾದಲ್ಲಿ ಪೊಲೀಸರು ರೂ.1 ಸಾವಿರ ರೂಪಾಯಿ ದಂಡ ಕಟ್ಟದೇ ಪರ್ಮಿಟ್ ನವೀಕರಿಸಲು ಸಾಧ್ಯವಿಲ್ಲವೆಂದು ಎಂದು ಹೇಳಿದ್ದಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಬಳಿಕ ಪ್ರಮೋದ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಹೆಲ್ಮೆಟ್ ಹಾಕಿಕೊಂಡೆ ಟ್ರಕ್ ಚಲಾಯಿಸುವ ಕಾನೂನು ಜಾರಿಗೆ ತಂದರೆ ಅದೇ ರೀತಿ ಮಾಡುತ್ತೇನೆ. ಅದರೆ, ದುರುದ್ದೇಶಪೂರ್ವಕವಾಗಿ ಲಂಚ ಕೀಳಲು ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುವುದು ಯಾವ ನ್ಯಾಯ ಸರ್ಕಾರ ಇಂತಹ ಲಂಚಬಾಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್ ಕುಮಾರ್ ಆಗ್ರಹಿಸಿದ್ದಾರೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಕೆಲವು ಇನ್ನು ಬೈಕಿನಲ್ಲಿ ಹೋಗುವಾಗ ಸೀಟ್ ಬೆಲ್ಟ್ ಹಾಕಿಲ್ಲವೆಂದು ದಂಡ ವಿಧಿಸಬಹುದು ಎಂದು ಕಾಲು ಎಳೆಯುತ್ತಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಇನ್ನು ಮಾರಕ ಕೊರೋನಾ ವೈರಸ್ ನಿಂದಾಗಿ ಎಲ್ಲ ವಲಯಗಳೂ ಮಂಕಾಗಿದೆಯಾದರೂ, ಇದೇ ಹೊತ್ತಿನಲ್ಲಿ ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗುತ್ತಿದೆ. ಸೋಂಕು ನಿರ್ವಹಣೆಗಾಗಿ ಈ ಬಾರಿ ಪೊಲೀಸರು ಹೆಚ್ಚು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದರು. ಅಲ್ಲದೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು, ಹೆಚ್ಚುವರಿ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ಹೆಚ್ಚಿನ ಮೊತ್ತದ ದಂಡ ಸಂಗ್ರಹವಾಗುತ್ತಿದೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಇನ್ನು ಇತ್ತೀಚೆಗೆ ಬೆಳಗಾವಿಯಲ್ಲಿ ಹಾಸಿಗೆಯೊಂದನ್ನು ಖರೀದಿಸಲು ತಮ್ಮ ಪತಿಯೊಂದಿಗೆ ಸ್ಕೂಟರಿನಲ್ಲಿ ಮಾರುಕಟ್ಟೆಗೆ ತೆರಳಿದ್ದರು.ದಂಪತಿ ತಮ್ಮ ಬಳಿ ರೂ.1,800ಗಳನ್ನು ಹೊಂದಿದ್ದರು. ಇದರಲ್ಲಿ ಹಾಸಿಗೆ ಖರೀದಿಸಲು ರೂ.1,700 ಖರ್ಚು ಮಾಡಿದ್ದಾರೆ. ಉಳಿದ 100 ರೂಪಾಯಿಗಳನ್ನು ಉಪಾಹಾರಕ್ಕೆಂದು ಖರ್ಚು ಮಾಡಿದ್ದಾರೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಮನೆಗೆ ಹಿಂದಿರುವಾಗ ಪೊಲೀಸರು ಸಿಟಿ ಬಸ್ ನಿಲ್ದಾಣದ ಬಳಿ ಅವರ ಸ್ಕೂಟರ್ ಅನ್ನು ನಿಲ್ಲಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ರೂ.500 ದಂಡ ಪಾವತಿಸುವಂತೆ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಆದರೆ ತಮ್ಮ ಬಳಿ ಇದ್ದ ಹಣ ಖರ್ಚಾಗಿದೆ ಎಂದು ಭಾರತಿ ಪೊಲೀಸರಿಗೆ ತಿಳಿಸಿದ್ದಾರೆ. ತಮ್ಮನ್ನು ಬಿಟ್ಟು ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಹಣ ಪಾವತಿಸಲೇ ಬೇಕೆಂದು ಪಟ್ಟು ಹಿಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಭಾರತಿ ವಿಬುಧಿರವರ ನಡುವೆ ಮಾತಿನ ಚಕಮಕಿ ನಡೆದಿದೆ.

ಟ್ರಕ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು

ಕೊನೆಗೆ ತನ್ನ ಭಾರತಿ ತಮ್ಮ ಮಂಗಳಸೂತ್ರವನ್ನು ತೆಗೆದು ಪೊಲೀಸ್ ಅಧಿಕಾರಿಗೆ ನೀಡಿದ ಘಟನೆಯು ವರದಿಯಾಗಿತ್ತು. ಈ ರೀತಿಯ ಘಟನೆಗಳಿಂದಾಗಿ ಟ್ರಾಫಿಕ್ ಪೊಲೀಸರುಸಾರ್ವಜನಿಕರಿಂದ ಟೀಕೆಗೆ ಒಳಗಾಗುದ್ದಿದ್ದಾರೆ.

Most Read Articles

Kannada
English summary
Odisha Truck Driver Fined Rs 1000 For Not Wearing A Helmet. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X