ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಜನಪ್ರಿಯ ಕ್ಯಾಬ್ ಕಂಪನಿಯಾದ ಓಲಾ, ಓಲಾ ಫೌಂಡೇಶನ್ ಹೆಸರಿನಲ್ಲಿ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ. ಈಗ ಓಲಾ ಫೌಂಡೇಶನ್, ಗಿವ್ ಇಂಡಿಯಾ ಚಾರಿಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಈ ಮೈತ್ರಿಯ ಮೂಲಕ ಉಚಿತ ಆಕ್ಸಿಜನ್ ಸೇವೆ ನೀಡುವುದಾಗಿ ಓಲಾ ಕಂಪನಿ ತಿಳಿಸಿದೆ. ತನ್ನ ಓಲಾ ಕಾಲ್ ಟ್ಯಾಕ್ಸಿ ಬುಕಿಂಗ್ ಆ್ಯಪ್ ಮೂಲಕ ಇದನ್ನು ಪೂರೈಸುವುದಾಗಿ ಓಲಾ ಕಂಪನಿ ತಿಳಿಸಿದೆ. ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತಿದೆ. ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಹಲವು ಕಂಪನಿಗಳು ಆಕ್ಸಿಜನ್ ಒದಗಿಸಲು ಮುಂದೆ ಬಂದಿವೆ. ಈಗ ಓಲಾ ಕಂಪನಿಯು ಸಹ ಮುಂದೆ ಬಂದಿದೆ. ಮೊದಲ ಹಂತದಲ್ಲಿ ಕಂಪನಿಯು 500 ಆಕ್ಸಿಜನ್ ಸಿಲಿಂಡರ್‌ಗಳನ್ನು ಹೊಂದಿರುವ ವಾಹನವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಈ ಸೇವೆಯನ್ನು ದೇಶಾದ್ಯಂತ ನೀಡಲು ಕಂಪನಿಯು ನಿರ್ಧರಿಸಿದೆ. ಓಲಾ ಕಂಪನಿಯು ಕರೋನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ತತ್ತರಿಸಿರುವ ರಾಜ್ಯಗಳು ಹಾಗೂ ನಗರಗಳಲ್ಲಿ ಈ ಸೇವೆ ನೀಡಲು ಆದ್ಯತೆ ನೀಡುತ್ತಿದೆ.

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಆಕ್ಸಿಜನ್ ಅಗತ್ಯವಿರುವವರು ಓಲಾ ಆ್ಯಪ್ ಮೂಲಕ ಬುಕ್ ಮಾಡಬಹುದು. ಬುಕ್ಕಿಂಗ್ ಮಾಡಿದ ನಂತರ ಆಕ್ಸಿಜನ್ ಸಿಲಿಂಡರ್‌ಗಳನ್ನು ಹೊತ್ತ ವಾಹನವು ಸೋಂಕಿತರ ಮನೆಗೆ ತೆರಳಿ ಸೂಕ್ತ ಸೇವೆಯನ್ನು ಒದಗಿಸುತ್ತದೆ. ಸೋಂಕಿತರು ಚೇತರಿಸಿ ಕೊಳ್ಳುವವರೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಬಳಸಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಓಲಾ ಈ ಪಿಕ್ ಅಪ್ ಹಾಗೂ ಡೆಲಿವರಿ ಸೇವೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತದೆ. ಈ ಕಾರಣಕ್ಕಾಗಿಯೇ ಓಲಾ ಗಿವ್ ಇಂಡಿಯಾ ಚಾರಿಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಓಲಾ ಫೌಂಡೇಶನ್, ಗಿವ್ ಇಂಡಿಯಾ ಚಾರಿಟಿ ಕಂಪನಿಗಳು ಒ 2 ಫಾರ್ ಇಂಡಿಯಾ ಯೋಜನೆಯಡಿಯಲ್ಲಿ ಈ ಸೇವೆಯನ್ನು ಆರಂಭಿಸಿವೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವಾಹನ ತಯಾರಕ ಕಂಪನಿಗಳು ದೇಶದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಹಾಯ ಹಸ್ತ ಚಾಚುತ್ತಿವೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಇತ್ತೀಚೆಗಷ್ಟೇ ಹೀರೋ ಮೋಟೊಕಾರ್ಪ್, ಬಜಾಜ್ ಆಟೋ, ಮಾರುತಿ ಸುಜುಕಿ, ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಂಪನಿಗಳು ಕರೋನಾ ಪರಿಹಾರ ಸೇವೆಯನ್ನು ಘೋಷಿಸಿವೆ.

ಮನೆ ಬಾಗಿಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲಿದೆ ಓಲಾ ಫೌಂಡೇಶನ್

ಈಗ ಓಲಾ ಫೌಂಡೇಶನ್ ಹಾಗೂ ಗಿವ್ ಇಂಡಿಯಾ ಮೈತ್ರಿ ಮಾಡಿಕೊಂಡು ಉಚಿತ ಆಕ್ಸಿಜನ್ ಸೇವೆಯನ್ನು ಆರಂಭಿಸಿವೆ. ಈ ಸೇವೆಯು ದೇಶದಲ್ಲಿ ಜನಪ್ರಿಯವಾಗುತ್ತಿದೆ. ಕೆಲವು ವಾಹನ ತಯಾರಕ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಲಸಿಕೆ ಅಭಿಯಾನವನ್ನು ಆರಂಭಿಸಿವೆ.

Most Read Articles

Kannada
English summary
Ola foundation partners with give India to provide free oxygen at door step. Read in Kannada.
Story first published: Tuesday, May 11, 2021, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X