ವಯಸ್ಸು ಕೇವಲ ಸಂಖ್ಯೆಯಷ್ಟೆ: ವೃದ್ಧ ದಂಪತಿಯ ಪ್ರೀತಿಗೆ ಮನಸೋತ ಸಹ ಪ್ರಯಾಣಿಕರು!
ವಯಸ್ಸಾದ ದಂಪತಿ ಹೀರೋ ಸ್ಪ್ಲೆಂಡರ್ ಅಥವಾ ಆಕ್ಟೀವಾದಂತಹ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ದುಬಾರಿ ಮೋಟಾರ್‌ಸೈಕಲ್‌ನಲ್ಲಿ ಓಡಾಡುವುದು ಬಹಳ ಅಪರೂಪ. ಇಂತಹ ಅಪರೂಪದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜ್ಜ-ಅಜ್ಜಿ ಕೆಟಿಎಂ ಆರ್‌ಸಿ 390 ಮೋಟಾರ್‌ಸೈಕಲ್‌ನಲ್ಲಿ ಸವಾರಿ ಮಾಡುತ್ತಾ ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಾರಿನ ಮುಂದೆ ಕೆಟಿಎಂ ಆರ್‌ಸಿ ಮೋಟಾರ್‌ಸೈಕಲ್‌ನಲ್ಲಿ ಈ ಜೋಡಿ ಕಾಣುತ್ತಿದ್ದಂತೆ ಕಾರಿನಲ್ಲಿದ್ದ ವ್ಯಕ್ತಿ ತಮ್ಮ ಫೋನ್ ಹೊರತೆಗೆದು ದೃಶ್ಯವನ್ನು ಸೆರೆಹಿಡಿದ್ದಾರೆ.
ಇದರಲ್ಲಿ ಬೈಕಿನ ವಿಶೇಷತೆ ಏನಿದೆ ಎಂದು ನೀವು ಕೇಳಬಹುದು... ಇಲ್ಲಿ ಬೈಕ್ ಅಲ್ಲ, ಅದನ್ನು ಸವಾರಿ ಮಾಡಿದ ದಂಪತಿ ಇದನ್ನು ವಿಶೇಷಗೊಳಿಸಿದ್ದಾರೆ. ಬೈಕ್ ಅನ್ನು ವಯಸ್ಸಾದ ವ್ಯಕ್ತಿ ಓಡಿಸುತ್ತಿದ್ದರೆ ಆತನ ಹೆಂಡತಿ ಹಿಂಬದಿ ಕುಳಿತಿದ್ದಾರೆ. ದೇಶದಲ್ಲಿ ವಯಸ್ಸಾದ ದಂಪತಿ ಹೀಗೆ ಕೆಟಿಎಂ ಆರ್‌ಸಿಯಂತಹ ಪರ್ಫಾಮೆನ್ಸ್ ಬೈಕ್ ಅನ್ನು ಓಡಿಸುತ್ತಾ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಈ ವೀಡಿಯೊ ವಿಶೇಷತೆ ಪಡೆದುಕೊಂಡಿದೆ.

ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ದಂಪತಿ ಗಮನಿಸಿದ್ದು, ಹಿಂಬದಿ ಕುಳಿತಿದ್ದ ಹಿರಿಯ ಮಹಿಳೆ ನಗುತ್ತಿರುವುದನ್ನು ಸಹ ನಾವು ನೋಡಬಹುದು. ಬೈಕ್ ಸವಾರಿ ಮಾಡುತ್ತಿದ್ದ ವೃದ್ಧ ಬೈಕ್ ಅನ್ನು ಸಲೀಸಾಗಿ ನಿಯಂತ್ರಣ ಮಾಡುತ್ತಿದ್ದರು. ಆತ ಬೈಕ್ ಓಡಿಸಲು ಹೆಣಗಾಡುತ್ತಿದ್ದಂತೆ ಕಾಣಲಿಲ್ಲ. ಕೆಟಿಎಂ ಆರ್‌ಸಿಯಲ್ಲಿ ಸವಾರಿ ಮಾಡುತ್ತಿರುವ ಈ ವೃದ್ಧ ದಂಪತಿ ವಯಸ್ಸು ಕೇವಲ ಸಂಖ್ಯೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಎಲ್ಲವೂ ಓಕೆ, ಆದ್ರೆ ಏಕೈಕ ನಕಾರಾತ್ಮಕ ಅಂಶವೆಂದರೆ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ನೀವು ಭಾರತದ ಹೆಚ್ಚು ಗ್ರಾಮೀಣ ಪ್ರದೇಶಗಳು ಮತ್ತು ಹಳ್ಳಿಗಳಿಗೆ ಹೋದರೆ ಹೆಲ್ಮೆಟ್ ಬಳಕೆ ತೀರಾ ಕಡಿಮೆ. ಸ್ವಲ್ಪ ದೂರ ಸವಾರಿ ಮಾಡುತ್ತಿದ್ದರು ಸಹ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ. ಏಕೆಂದರೆ ರೈಡಿಂಗ್ ಗೇರ್ ಎಷ್ಟು ಮುಖ್ಯ ಎಂದು ತಿಳಿದವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ.

ಕೆಟಿಎಂ ಆರ್‌ಸಿ ಮತ್ತು ಡ್ಯೂಕ್‌ನಂತಹ ಮೋಟಾರ್ ಸೈಕಲ್‌ಗಳು ತುಂಬಾ ಶಕ್ತಿಶಾಲಿಯಾಗಿದ್ದು, ತುಸು ಯಾಮಾರಿದರು ಇಂತಹ ಮೋಟಾರ್ ಸೈಕಲ್‌ಗಳು ನಿಯಂತ್ರಣವನ್ನು ಕಳೆದುಕೊಳ್ಳುತ್ತವೆ. ಭಾರತೀಯ ರಸ್ತೆಗಳು ಎಷ್ಟು ಸೇಫ್ ಎಂದು ಯಾರಾದರು ಕೇಳಿದ್ರೆ, ನಮಗಿಂತ ಉತ್ತಮವಾಗಿ ನಿಮಗೇ ತಿಳಿದಿರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಗಾಗಿ ಕನಿಷ್ಠ ಹೆಲ್ಮೆಟ್ ಧರಿಸುವುದು ಉತ್ತಮ.
ಕೆಲವು ತಿಂಗಳ ಹಿಂದೆ, ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಲ್ಲಿ ವೃದ್ಧರೊಬ್ಬರು ನಿಂತ ಜಾಗದಲ್ಲೇ ಬೈಕ್ ಅನ್ನು ಟರ್ನ್ ಮಾಡುತ್ತಿದ್ದರು. ಈ ವೀಡಿಯೊ ಕೂಡ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಕಂಡುಬರುವ ವಯಸ್ಸಾದ ದಂಪತಿಗಳಂತೆಯೇ, ಆ ವೀಡಿಯೊದಲ್ಲಿರುವ ವೃದ್ಧ ಸಲೀಸಾಗಿ ಬೈಕ್ ಸವಾರಿ ಮಾಡುತ್ತಿದ್ದರು.

ಮತ್ತೊಂದು ವೀಡಿಯೊದಲ್ಲಿ, 84 ವರ್ಷದ ಅಜ್ಜ ಹಳೆಯ ತಲೆಮಾರಿನ ರಾಯಲ್ ಎನ್ಫೀಲ್ಡ್ ಬುಲೆಟ್‌ನಲ್ಲಿ ಸ್ಟಂಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈಗಿನ ಯುವಕರೇ ಬುಲ್ಲೆಟ್‌ನಲ್ಲಿ ಸ್ಟಂಟ್ ಮಾಡಲು ಹೆಣಗಾಡುತ್ತಾರೆ. ಆದ್ರೆ 84ರ ವೃದ್ಧ ಮಾಡಿದ ಸ್ಟಂಟ್ ಫುಲ್ ವೈರಲ್ ಆಗಿ ಮೆಚ್ಚುಗೆ ಗಳಿಸಿತ್ತು. ಇವರೆಲ್ಲರೂ ವಯಸ್ಸು ಕೇವಲ ಸಂಖ್ಯೆಯಷ್ಟೆ ಎಂಬುದನ್ನು ಸಾಭೀತು ಪಡಿಸಿ ಯುವಕರಿಗೆ ಮಾದರಿಯಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








