Mahindra Thar: ಗುಜರಿ ಸೇರಿದ್ದ ಕಾರಿಗೆ ಮಾಡ್ರನ್ ಟಚ್: ಹೊಸ ಥಾರ್‌ಗೆ ಸೆಡ್ಡು!
ಹಳೇ ಕಾರುಗಳನ್ನು ಹೊಸ ಕಾರುಗಳಂತೆ ಮಾರ್ಪಾಡಿಸುವುದು ಅಸಮಾನ್ಯ ಕೆಲಸವೇನಲ್ಲ. ಆದ್ರೆ ಹಳೇ ಕಾರನ್ನು ಹೊಸ ಮಾದರಿಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾಡಿಫೈಗೊಳಿಸುವುದೇ ಶ್ಲಾಗಿಸುವಂತಹ ಕಾರ್ಯ. ಹಳೆಯ ಥಾರ್ ಅನ್ನು ಹೊಸದಾಗಿ ರೂಪಾಂತರಿಸಿ ಆಟೋ ಪ್ರಿಯರ ಉತ್ಸಾಹ ಹೆಚ್ಚಿಸಿರುವ ಕಾರೊಂದು ಈಗ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣುವ ಹಳೆಯ ಮಾದರಿಯನ್ನು ಹೊಸ ಥಾರ್‌ನಂತೆ ಮಾಡಿಫೈಗೊಳಿಸುವುದು ಇವರ ಮುಖ್ಯ ಉದ್ದೇಶ. ಆದ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ. ಕೆಳಗಿನ ಸಸ್ಪೆನ್ಶನ್ ಸೆಟಪ್ ಹಳೆಯ ಥಾರ್‌ನಿಂದ ಬದಲಾಗದೆ ಹಾಗೇ ಉಳಿದಿದೆ, ಏಕೆಂದರೆ ಚಾಸಿಸ್‌ಗೆ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಮುಂಭಾಗದಲ್ಲಿ ಮಲ್ಟಿ-ಲಿಂಕ್ ರಿಯರ್ ಸಸ್ಪೆನ್ಶನ್ ಅನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಉದ್ದಳತೆಯ ವಿಷಯಕ್ಕೆ ಬಂದರೆ, ಹೊಸ ಥಾರ್‌ನಂತೆ ಪುನರಾವರ್ತಿಸಲು ವಾಹನವನ್ನು ನಿಖರವಾಗಿ ನವೀಕರಿಸಲಾಗಿದೆ. ಗ್ಯಾರೇಜ್ ಮಾಲೀಕರು ಅಗತ್ಯ ಘಟಕಗಳನ್ನು ಅಳವಡಿಸಿದ್ದಾರಾದರೂ ಹೊಸ ಥಾರ್‌ನಂತೆ ಬಾಗಿಲುಗಳನ್ನು ಅಳವಡಿಸಿಲ್ಲ. ಶೀಘ್ರದಲ್ಲೇ ಅವುಗಳನ್ನು ಸಹ ಸ್ಥಾಪಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಹೊರಭಾಗ ಬಹುತೇಕ ನವೀಕರಣಗೊಂಡಿದ್ದರೇ, ಇಂಟೀರಿಯರ್ ಕೆಲಸ ಬಾಕಿ ಉಳಿದಿದೆ. ಕ್ಯಾಬಿನ್ ಮಾರ್ಪಾಡುಗಳಿಗೆ ಒಳಗಾಗಬೇಕಿದೆ.
ರೂಫ್ ಸಂಪೂರ್ಣವಾಗಿ ಕಬ್ಬಿಣದಿಂದ ನಿರ್ಮಿಸಲಾಗಿದ್ದು, ಸನ್ರೂಫ್ ಅನ್ನು ಒಳಗೊಂಡಿದೆ. ಹಾಗೆಯೇ ಹಿಂಭಾಗದ ಬಾಗಿಲು ಹೊಸ ಥಾರ್‌ನಂತೆ ಅಲ್ಲದೇ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿದೆ. ವಾಹನವು ಅಗಲದಲ್ಲಿ 12cm ಹೆಚ್ಚಳವನ್ನು ಹೊಂದಿದೆ. ಸ್ಟಾಕ್ ವಿಂಡ್‌ಶೀಲ್ಡ್ ವಿನ್ಯಾಸವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಒಟ್ಟಾರೆ ನೋಡುವುದಾದರೆ ನೋಟದಲ್ಲಿ ಹೊಸ ಥಾರ್‌ನಂತೆ ಬಹುತೇಕ ಕಾಣುತ್ತದೆ.

ಹಳೆಯ CRDE ಎಂಜಿನ್: ಕಾರಿಗೆ ಎಲ್ಲವೂ ಸರಿಯೇ ಆದರೆ ಎಂಜಿನ್ ವಿಷಯದಲ್ಲಿ ಮಾತ್ರ ಹಾಗೇ ಉಳಿಸಿದ್ದಾರೆ. ಅಂದರೆ ಹಳೆಯ CRDE ಎಂಜಿನ್ ಅನ್ನು ಹಾಗೆಯೇ ಇಟ್ಟಿದ್ದಾರೆ. ಪ್ರಸ್ತುತ ಹೊಸ ಥಾರ್ 2.2-ಲೀಟರ್ ಟರ್ಬೋಚಾರ್ಜ್ಡ್ mHawk ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು 130 Bhp ಮತ್ತು 320 Nm ಟಾರ್ಕ್ ಅನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಜೊತೆಗೆ 2.0-ಲೀಟರ್ ಟರ್ಬೋಚಾರ್ಜ್ಡ್ mStallion ಪೆಟ್ರೋಲ್ ಎಂಜಿನ್ 150 Bhp ಮತ್ತು 320 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ-ಪೀಳಿಗೆಯ ಥಾರ್ ಡಿಸೈನ್ ಮತ್ತು ಒಟ್ಟಾರೆ ನಿರ್ಮಾಣ ಗುಣಮಟ್ಟ ಎರಡರಲ್ಲೂ ಗಮನಾರ್ಹವಾದ ವರ್ಧನೆಯನ್ನು ಪ್ರದರ್ಶಿಸುತ್ತದೆ. ಹಾಗೆಯೇ ಮೊದಲ ತಲೆಮಾರಿನ ಥಾರ್ 2.5-ಲೀಟರ್ CRDe ಎಂಜಿನ್, ಗರಿಷ್ಠ 105 Bhp ಮತ್ತು 247 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಮೋಟಾರು ವಾಹನ ಕಾಯಿದೆಗಳನ್ವಯ ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಮಾಡಿಫೈ ಕಾರುಗಳನ್ನು ನಿಷೇಧಿಸಲಾಗಿದೆ. ಈ ವಾಹನಗಳು ಪ್ರಾಜೆಕ್ಟ್ ಕಾರುಗಳಾಗಿ ಕಾರ್ಯನಿರ್ವಹಿಸಬಹುದು ಮತ್ತು ರೇಸಿಂಗ್ ಟ್ರ್ಯಾಕ್‌ಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಮಾತ್ರ ಬಳಸಬಹುದು. ಸಾರ್ವಜನಿಕ ರಸ್ತೆಗಳಲ್ಲಿ ಕಂಡುಬಂದರೆ ವಶಪಡಿಸಿಕೊಳ್ಳಬಹುದು ಎಂಬುದನ್ನು ಗಮನಿಸಬೇಕು.
ಭಾರತದಲ್ಲಿ, ಬುಲ್‌ಬಾರ್‌ಗಳು ಮತ್ತು ಬಹಳಷ್ಟು ಆಫ್ಟರ್ ಮಾರ್ಕೆಟ್ ಬಿಡಿಭಾಗಗಳನ್ನು ನಿಷೇಧಿಸಲಾಗಿದೆ. ವಾಹನಗಳಿಗೆ ದೊಡ್ಡ ಗಾತ್ರದ ಟೈರ್‌ಗಳನ್ನು ಅಳವಡಿಸುವುದನ್ನು ಸಹ ನಿರ್ಬಂಧಿಸಲಾಗಿದೆ. ಈ ಮಾರ್ಪಡಿಸಿದ ವಾಹನಗಳು ರಸ್ತೆಗಳಲ್ಲಿ ಸಂಭವನೀಯ ಅಪಘಾತಗಳಿಗೆ ಕಾರಣವಾಗಬಹುದು. ಅವುಗಳನ್ನು ಸರಿಯಾದ ವೆಲ್ಡಿಂಗ್ ಉಪಕರಣಗಳಿಲ್ಲದೆಯೇ ಸ್ಥಳೀಯ ಗ್ಯಾರೇಜುಗಳಲ್ಲಿ ನಿರ್ಮಿಸಲಾಗುವುದರಿಂದ ಅಪಾಯಗಳನ್ನು ಉಂಟುಮಾಡುತ್ತವೆ.
ಇಂತಹ ವಾಹನಗಳ ರಸ್ತೆ ಪ್ರಯಾಣದ ಸಮಯದಲ್ಲಿ ಅವುಗಳ ಗುಣಮಟ್ಟವು ಗಂಭೀರ ಅಪಘಾತಕ್ಕೆ ಕಾರಣವಾಗಬಹುದು. ಅಂತಹ ಮಾರ್ಪಾಡುಗಳನ್ನು ಮೇಲ್ವಿಚಾರಣೆ ಮಾಡಲು, ವಿವಿಧ ರಾಜ್ಯಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸುತ್ತಾರೆ. ರಸ್ತೆ ಸುರಕ್ಷತೆ ಮತ್ತು ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳಿಗೆ ಬದ್ಧವಾಗಿರುವುದು ಅತ್ಯಗತ್ಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








