90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ನಮ್ಮ ಸಂಪತ್ತು ಕೊಳ್ಳೆ ಹೊಡೆದ ಬ್ರಿಟಿಷರು ಭಾರತ ಬರಿದಾಗಿತ್ತು. 1947ರ ನಂತರ ಭಾರತ ಸ್ವತಂತ್ರ್ಯವಾಗಿ ತಲೆಎತ್ತಿ ನಿಂತಿತ್ತು. ಅಂದು ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಕಾರು ಬೈಕ್‌ಗಳು ಕಾಣಸಿಗುತ್ತಿತ್ತು. ಬಳಿಕ 1980 ಹಾಗೂ 1990ರ ದಶಕ ಭಾರತದ ಆಟೋಮೊಬೈಲ್ ಕ್ಷೇತ್ರ ಕ್ರಾಂತಿ ಮಾಡಿತ್ತು.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

90ರ ದಶಕದಲ್ಲಿ ಹಲವರ ಮನೆಗಳಲ್ಲಿ ಬೈಕ್ ಕಾರುಗಳು ಬರತೊಡಗಿತು. ಮಾರುತಿ 800 ಬಳಿಕ ಭಾರತದಲ್ಲಿ ಹಲವು ಕಾರುಗಳು ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಅಂಬಾಸಿಡರ್, ಫಿಯೆಟ್ ಕಂಪೆನಿಯ ಪ್ರೀಮಿಯರ್ ಪದ್ಮಿನಿ 1990-2000ದಲ್ಲೂ ತನ್ನ ಘನತೆ ಗಾಂಭೀರ್ಯ ಉಳಿಸಿಕೊಂಡಿತ್ತು. ಮಾರುತಿ 800, ಅಂಬಾಸಿಡರ್ ಜೊತೆಗೆ ಇತರ ಕಾರುಗಳು ಭಾರತವನ್ನ ಆಕ್ರಮಿಸಿಕೊಂಡಿತ್ತು. ಅದರಲ್ಲಿ ಕಾಂಟೆಸ್ಸಾ, ಮಾರುತಿ 1000 ಮತ್ತು ಮಾರುತಿ ಜೆನ್ ನಂತಹ ಕಾರುಗಳಿವೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಆದರೆ ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಕಾರು ಸಾರ್ವಕಾಲಿಕ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ವಾಹನದ ಮೇಲಿನ ವಾಹನ ಸವಾರರ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು 2014 ರಲ್ಲಿ ಸ್ಥಗಿತಗೊಳಿಸಲಾಯಿತು.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಆದರೆ ಇಂದು ಕಾರುಗಳು ಇಂದು ಸೂಪರ್ ಮಾಡರ್ನ್ ಆಗಿವೆ. ಒಂದು ಬಟನ್, ವಾಯ್ಸ್ ಕಾಮೆಂಡ್ ಅಥವಾ ಟಜ್ ಮೂಲಕ ಹಲವು ಫೀಚರ್ಸ್ ಗಳನ್ನು ನಿಯಂತ್ರಿಸಬಹುದು. ಹಳೆಯ ಕಾರಿನ ವೈಶಿಷ್ಟ್ಯಗಳು ಇಂದಿಗೂ ಹಲವರಿಗೆ ನೆನಪಿದೆ. ಕ್ಯಾಸೆಟ್ ಟೇಪ್‌ಗಳಿಂದ ಹಿಡಿದು ರೇಡಿಯೊ ಆಂಟೆನಾಗಳವರೆಗೆ, 90ರ ದಶಕದ ಮಕ್ಕಳು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವ ಕೆಲವು ಹಳೆಯ ಕಾರ್ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಮ್ಯಾನುವಲ್ ವಿಂಡೋಸ್

ನಮ್ಮ ಕಾರುಗಳಲ್ಲಿ ಸ್ವಲ್ಪ ಗಾಳಿಯನ್ನು ಪಡೆಯಲು ನಾವು ಬಳಸುತ್ತಿದ್ದ ಲೋಕೀ ಆರ್ಮ್ ವರ್ಕೌಟ್ ಅನ್ನು ನೆನಪಿಸಿಕೊಳ್ಳಿ? ಲಿವರ್ ಸಹಾಯದಿಂದ ವಿಂಡೋಗಳನ್ನು ಮ್ಯಾನುವಲ್ ಆಗಿ ಕೆಳಗೆ ಇಳಿಸುವುದು ಮತ್ತು ಅದನ್ನು ಮೇಲೆಕ್ಕೆ ಏರಿಸಬೇಕು. ಮಕ್ಕಳಿಗೆ ಅದು ಮೋಜಿನ ಅನುಭವ. ಹಳೆಯ ಕಾರುಗಳನ್ನು ಅಥವಾ ಕಡಿಮೆ ಬೆಲೆಯ ಕಾರುಗಳ ವಿಂಡೋಗಳನ್ನು ಈಗಲೂ ಮ್ಯಾನುವಲ್ ಆಗಿ ಇಳಿಸುವುದು ಅಥವಾ ಏರಿಸುವುದು ಮಾಡಬೇಕಿದೆ. ಆದರೆ ಹೊಸ ಪ್ರೀಮಿಯಂ ಕಾರಿಗಳಲ್ಲಿ ವಿಂಡೋಗಳು ಆಟೋಮ್ಯಾಟಿಕ್ ಆಗಿದೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ರಿಮೂವ್ ಮಾಡಬಹುದಾದ ಆಡಿಯೋ ಸಿಸ್ಟಂ

ಅತ್ಯಂತ ಸಾಮಾನ್ಯವಾದ ಹಳೆಯ ಕಾರಿನ ವೈಶಿಷ್ಟ್ಯವೆಂದರೆ ರಿಮೂವ್ ಮಾಡಬಹುದಾದ ಆಡಿಯೋ ಸಿಸ್ಟಂ. ಇದು ಅಂದಿನ ಕಾಲದಲ್ಲಿ ಸುಲಭವಾಗಿತ್ತು. ಈ ರಿಮೂವ್ ಮಾಡಬಹುದಾದ ಆಡಿಯೋ ಸಿಸ್ಟಂ ಹೆಚ್ಚು ಕಳ್ಳತನವಾಗುತ್ತಿತ್ತು.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಹೊಸ ಪ್ರೀಮಿಯಂ ಕಾರುಗಳಲ್ಲಿ ಇದನ್ನು ಕಾಣಸಿಗುವುದಿಲ್ಲ. ಹೊಸ ಇನ್ಪೋಟೈನ್ ಮೆಂಟ್ ಸಿಸ್ಟಂ ಅನ್ನು ನೋಡಬಹುದು. ಇದರಲ್ಲಿ ಆಡಿಯೋ ಮತ್ತು ವಿಡಿಯೋಗಳನ್ನು ಹೊಂದಿರುತ್ತದೆ. ಇದರ ಜೊತೆ ಕನಕ್ಟಿವಿಟಿ ಫೀಚರ್ ಅನ್ನು ಕೂಡ ಒಳಗೊಂಡಿದೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ರೇಡಿಯೋ ಆಂಟೆನಾ

ಹಿಂದೆ Bluetooth, CarPlay ಮತ್ತು AndroidAuto ಸಾಮಾನ್ಯವಾಗಿರದಿದ್ದಾಗ, ನಾವು ರೇಡಿಯೊವನ್ನು ಕೇಳುತ್ತಿದ್ದೆವು. ಮತ್ತು ನಮ್ಮಲ್ಲಿ ಶಾರ್ಕ್ ಫಿನ್ ಆಂಟೆನಾಗಳು ಇರಲಿಲ್ಲ, ಹಳೆಯ ಕಾರುಗಳು ಆಂಟೆನಾಕ್ಕಾಗಿ ತೆಳುವಾದ ಲೋಹದ ರಾಡ್ ಅನ್ನು ಹೊಂದಿದ್ದವು. ಕೆಲವು ಸಿಗ್ನಲ್‌ಗಳನ್ನು ಹಿಡಿಯಲು ಮತ್ತು ಅನು ಮಲಿಕ್‌ನ ಧ್ವನಿಯನ್ನು ಕೇಳಲು ನಾವು ಆಂಟೆನಾವನ್ನು ಕೈಯಾರೆ ಹೊರತೆಗೆಯಬೇಕಾಗಿತ್ತು

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಕೆಲವು ಕಾರುಗಳು ಸ್ವಲ್ಪ ಹೆಚ್ಚು ದುಬಾರಿಯಾಗಿದ್ದವು ಮತ್ತು ಇವುಗಳು ವಿದ್ಯುತ್ ಚಾಲಿತ ಆಂಟೆನಾಗಳನ್ನು ಪಡೆಯುತ್ತವೆ. 90ರ ದಶಕದ ಮಕ್ಕಳಿಗೆ ಇದು ಅಚ್ಚರಿಯ ವೈಶಿಷ್ಟ್ಯವಾಗಿತ್ತು. ಇಂದು ಹಳೆಯ ಕಾರುಗಳಲ್ಲಿ ಮಾತ್ರ ಇದು ಕಾಣಸಿಗುತ್ತದೆ. ಹಲವು ಹಳೆಯ ಕಾರುಗಳನ್ನು ಹೊಸ ಹೊಸ ನಿಯಮಗಳು ಜಾರಿಯಾಗುವ ವೇಳೆಯಲ್ಲಿ ಸ್ಥಗಿತವಾಗಿವೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಗೇರ್ ಲಿವರ್

80-90ರ ದಶಕದ ಭಾರತೀಯ ಕಾರುಗಳು ಸ್ಟೀರಿಂಗ್ ವ್ಹೀಲ್ ಎಡಭಾಗದಲ್ಲಿ ಗೇರ್ ಲಿವರ್ ಅನ್ನು ಹೊಂದಿದ್ದವು. ಈಗ, ಪ್ರಸ್ತುತ ಕಾರುಗಳಲ್ಲಿ ನೋಡುವಂತೆ ಇದು ಅತ್ಯಾಧುನಿಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಗಿದೆ.. ಇದು ಡ್ರೈವರ್ ಸೀಟ್ ಎಡಬಾಗದಲ್ಲಿ ಗೇರ್ ಬಾಕ್ಸ್ ಇರುತ್ತದೆ. ಇಂದು ಆಟೋಮ್ಯಾಟಿಕ್, ಡಿಸಿಟಿ ಸೇರಿದಂತೆ ಹಲವು ವಿಧದ ಗೇರ್ ಬಾಕ್ಸ್ ಅನ್ನು ಹೊಂದಿದೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಚೋಕ್

ಸ್ಟಾರ್ಟ್‌/ಸ್ಟಾಪ್‌ ಬಟನ್‌ಗಳು ಕನಸಾಗಿದ್ದ ಕಾಲದಲ್ಲಿ ನಮಗೆ ಚೋಕ್ ಆಗುತ್ತಿತ್ತು. ಅತ್ಯಂತ ಉಪಯುಕ್ತವಾದ ಹಳೆಯ ಕಾರಿನ ವೈಶಿಷ್ಟ್ಯಗಳಲ್ಲಿ ಒಂದಾದ, ನಿಮ್ಮ ಕಾರು ಪ್ರಾರಂಭವಾಗದಿದ್ದಾಗ ಚೋಕ್ ಅನ್ನು ಬಳಸಲಾಗಿದೆ. ಚೋಕ್ ಮೂಲಭೂತವಾಗಿ ಮಾಡಿದ್ದು ಎಂಜಿನ್‌ಗೆ ಹೆಚ್ಚಿನ ಇಂಧನವನ್ನು ಪಂಪ್ ಮಾಡುವುದು ಮತ್ತು ನಿಷ್ಕ್ರಿಯ RPM ಗಳನ್ನು ಹೆಚ್ಚಿಸುವುದು, ಎಂಜಿನ್ ಸುಲಭವಾಗಿ ಬೆಚ್ಚಗಾಗಲು ಸಹಾಯ ಮಾಡುತ್ತದೆ.

90ರ ದಶಕದ ಮಕ್ಕಳಿಗೆ ಮಾತ್ರ ತಿಳಿದಿರುವ ಹಳೆಯ ಕಾರುಗಳ ವೈಶಿಷ್ಟ್ಯಗಳು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ಯಾಸೆಟ್ ಟೇಪ್‌ಗಳಿಂದ ಹಿಡಿದು ರೇಡಿಯೊ ಆಂಟೆನಾಗಳವರೆಗೆ ಹಲವು ಫಿಚರ್ಸ್ ಗಳಿತ್ತು. ಆದರೆ ಇಂದು ಕಾರುಗಳು ಇಂದು ಸೂಪರ್ ಮಾಡರ್ನ್ ಆಗಿವೆ. ಹೊಸ ಕಾರುಗಳಲ್ಲಿ ಹಲವು ಫೀಚರ್ಸ್ ಗಳು ಆಟೋಮ್ಯಾಟಿಕ್ ಆಗಿದೆ. ಇತ್ತೀಚೆಗೆ ಬಜೆಟ್ ಬೆಲೆಯ ಕಾರುಗಳಲ್ಲಿಯು ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆಯುತ್ತಿದೆ. ಇತ್ತೀಚೆಗೆ ಕಾರುಗಳು ಕಾಲಕ್ಕೆ ತಕ್ಕಂತೆ ಹೊಸ ನವೀಕರಣಗಳನ್ನು ಪಡೆದುಕೊಳ್ಳುತ್ತಿದೆ. ಪೀಚರ್ಸ್ ವಿಭಾಗದಲ್ಲಿ ಮುಂಚೆ ಐಷಾರಾಮಿ ಕಾರುಗಳಲ್ಲಿ ಇದ್ದ ಫೀಚರ್ಸ್ ಈಗ ಇತರ ಕಾರುಗಳಲ್ಲಿ ಬರತೊಡಗಿದೆ.

Most Read Articles

Kannada
English summary
Old nostalgic car features for 90s kids details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X