ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಒಲಂಪಿಕ್ಸ್​ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್​ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಟೋಕಿಯೋದಲ್ಲಿ ನಡೆದ 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಚಿನ್ನದ ಪದಕ ಪಡೆಯುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. 23ರ ಹರೆಯದ ನೀರಜ್ ಚೋಪ್ರಾ 87.58 ಮೀ ಜಾವೆಲಿನ್ ಎಸೆತದಿಂದ ವಿಶ್ವವನ್ನೇ ಬೆರಗುಗೊಳಿಸಿದರು. ಬರೊಬ್ಬರಿ 100 ವರ್ಷಗಳ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ಇದಾಗಿದೆ. ಇನ್ನು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದಿದ್ದರು.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಭಾರತೀಯರ 120 ವರ್ಷಗಳ ಕನಸು ನನಸು ಮಾಡಿದ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಪ್ರತಿಯೊಬ್ಬರು ಕೂಡ ಅವರಿಗೆ ಶುಭ ಕೋರುತ್ತಿದ್ದಾರೆ. ಚಿನ್ನದ ಹುಡುಗ ನೀರಜ್ ಚೋಪ್ರಾ ಹರಿಯಾಣದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದವರು.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಇವರು 1997ರ ಡಿಸೆಂಬರ್ 24 ರಂದು ಜನಿಸಿದರು. ಇನ್ನು ತಮ್ಮ ಕಲಿಕೆಯನ್ನು ಚಂಡೀಗಡದಲ್ಲಿ ಪೂರೈಸಿದರು. ಇವರು 2016ರ ಜೂನಿಯರ್ ಕಮಿಷನ್​ಡ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್​ನೊಂದಿಗೆ ಭಾರತೀಯ ಸೇನೆ ಸೇರಿಕೊಂಡರು.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಬೈಕ್ ಕ್ರೇಜ್ ಅನ್ನು ಹೊಂದಿದಾರೆ. ಅವರು ಇನ್‌ಸ್ಟಾಗ್ರಾಮ್ ನಲ್ಲಿ ಬಜಾಜ್ ಪಲ್ಸರ್ 220 ಎಫ್‌ ಸೇರಿದಂತೆ ಹಲವಾರು ಬೈಕ್ ಗಳ ಜೊತೆ ಚಿತ್ರಗಳನ್ನು ನೋಡಬಹುದು. ನೀರಜ್ ಚೋಪ್ರಾ ಅವರ ಬಳಿ ಐಷಾರಾಮಿ 2019ರ ಹಾರ್ಲೆ-ಡೇವಿಡ್ಸನ್ 1200 ರೋಡ್‌ಸ್ಟರ್ ಬೈಕ್ ಅನ್ನು ಹೊಂದಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಅದೇ ವರ್ಷ ಏಷ್ಯನ್ ಗೇಮ್ಸ್ ಗೆದ್ದ ನಂತರ ಆತ ಈ ಬೈಕನ್ನು ಖರೀದಿಸಿದ್ದಾರೆ. ಈ ಬೈಕ್ ಹರ್ಯಾಣ ರಾಜ್ಯದ ಖಾಂಡ್ರಾ ಗ್ರಾಮದ ಮನೆಯಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಅವರ ಬಳಿ ಬಜಾಜ್ ಪಲ್ಸರ್ 220 ಎಫ್‌ ಮತ್ತು ಹಾರ್ಲೆ-ಡೇವಿಡ್ಸನ್ 1200 ರೋಡ್‌ಸ್ಟರ್ ಬೈಕ್ ಅನ್ನು ಹೊಂದಿದ್ದಾರೆ. ಬೈಕ್ ಕ್ರೇಜ್ ಹೊಂದಿರುವ ಇವರು ಮುಂದಿನ ದಿನಗಳಲ್ಲಿ ಯಾವ ಬೈಕ್ ಅನ್ನು ಖರೀದಿಸುತ್ತಾರೆ ಎಂಬುದನ್ನು ನೋಡಬೇಕು.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ನೀರಜ್ ಚೋಪ್ರಾ ಅವರು ಕರೋನಾ ಸಂಕಷ್ಟದ ಸಂದರ್ಭದಲ್ಲಿ ಪಿಎಂ ಕೇರ್'ಗೆ ರೂ,2 ಲಕ್ಷ ಕೊಡುಗೆಯನ್ನು ನೀಡಿದ್ದರು. 2017ರ ಏಷ್ಯಾನ್ ಚಾಂಪಿಯನ್ ಶಿಪ್ ನಲ್ಲಿ ಇವರು ಚಿನ್ನ ಗೆದ್ದಿದ್ದರು. 2018ರ ಏಷ್ಯಾನ್ ಗೇಮ್ಸ್ ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ನಂತರ 2018ರ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಚಿನ್ನದ ಪದಕ ಪಡೆದಿದ್ದರು.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಈ ಹಾರ್ಲೆ ಡೇವಿಡ್ಸನ್ 1200 ಬೈಕಿನಲ್ಲಿ 1200 ಸಿಸಿ, ಏರ್-ಕೂಲ್ಡ್ ಎವಲ್ಯೂಷನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 97 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆಲ್-ಬ್ಲ್ಯಾಕ್ ರಾಕರ್ಸ್ ಮತ್ತು ಏರ್ ಕ್ಲೀನರ್ ಕವರ್‌ಗಳನ್ನು ಹೊಂದಿದೆ. ಇದರೊಂದಿಗೆ ಆಲ್-ಕ್ರೋಮ್ ಡ್ಯುಯಲ್-ಟ್ಯಾಪರ್ಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಟೋಕಿಯೋ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾಗೆ ಹಲವು ರಾಜ್ಯಗಳು ಮತ್ತು ಸಂಸ್ಥೆಗಳು ಬಹುಮಾನ ಘೋಷಿಸಿವೆ. ಹರಿಯಾಣ ಮೂಲಕ ನೀರಜ್​ ಅವರಿಗೆ ಆ ರಾಜ್ಯದ ಸಿಎಂ ಎಂಎಲ್​ ಕಟ್ಟರ್​ ರೂ.6 ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಹರಿಯಾಣದ ಬಳಿಕ ನೆರೆಯ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೀರಾಜ್ ಅವರಿಗೆ ರೂ,2 ಕೋಟಿ ಬಹುಮಾನ ಘೋಷಿಸಿದ್ದಾರೆ. ಇನ್ನು ಮಣಿಪುರ ರಾಜ್ಯ ಸರ್ಕಾರವು ನೀರಜ್ ಚೋಪ್ರಾ ಅವೈರ್ಗೆ ರೂ.1 ಕೋಟಿ ಬಹುಮಾನ ಘೋಷಿಸಿದೆ. ಇನ್ನು ಹಲವು ಸಂಸ್ಥೆಗಳು ಕೂಡ ಬಹುಮಾನ ಘೋಷಿಸಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಬಳಿ ಇರುವ ಬೈಕ್‌ಗಳಿವು

ಇನ್ನು ಮಹೀಂದ್ರಾ ಕಂಪನಿಯು ಬಿಡುಗಡೆಯಾಗಲಿರುವ ಎಕ್ಸ್‌ಯುವಿ700 ಎಸ್‍ಯುವಿಯನ್ನು ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ. ಮಹೀಂದ್ರಾ ಎಕ್ಸ್‌ಯುವಿ700 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
English summary
Olympic gold winner neeraj chopra and his bikes details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X