ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಕಡು ಬಡತನದಲ್ಲಿಯೇ ಬೆಳೆದು ಮುಂದೆ ಮಹತ್ತರ ಸಾಧನೆಗಳನ್ನು ಮಾಡಿರುವ ಹಲವು ವ್ಯಕ್ತಿಗಳಿದ್ದಾರೆ. ಅದೇ ರೀತಿ ಸೈಕಲ್ ಮೆಕಾನಿಕ್ ಆಗಿದ್ದವರೊಬ್ಬರು ಇಂದು ಜಾಗ್ವಾರ್ ಹಾಗೂ ಬಿಎಂಡಬ್ಲ್ಯುನಂತಹ ಐಷಾರಾಮಿ ಕಾರುಗಳನ್ನು ಖರೀದಿಸುವ ಹಂತಕ್ಕೆ ಬೆಳೆದಿದ್ದಾರೆ.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ರಾಹುಲ್ ತನೇಜಾರವರೇ ಈ ಕಥೆಯ ಹೀರೋ. ತಮ್ಮ ತಂದೆ, ತಾಯಿಯ ಕಿರಿಯ ಪುತ್ರನಾಗಿದ್ದ ಅವರು ಬಾಲ್ಯದಲ್ಲಿ ಮೆಕಾನಿಕ್ ಆಗಿದ್ದ ತಮ್ಮ ತಂದೆಗೆ ನೆರವಾಗುತ್ತಿದ್ದರು. ತಮ್ಮ ತಂದೆಯ ಜೊತೆಗೂಡಿ ಟಯರ್'ಗಳಿಗೆ ಪಂಕ್ಚರ್ ಹಾಕುವ ಕೆಲಸ ಮಾಡುತ್ತಿದ್ದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಆದರೆ ದೊಡ್ಡ ಆಕಾಂಕ್ಷೆಗಳನ್ನು ಹೊಂದಿದ್ದ ಅವರು ಮನೆ ಬಿಟ್ಟು ಸ್ಥಳೀಯ ಧಾಬಾದಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಹಬ್ಬಗಳಿಗೆ ತಕ್ಕಂತೆ, ದೀಪಾವಳಿ ಸಮಯದಲ್ಲಿ ಪಟಾಕಿಗಳನ್ನು, ಹೋಳಿ ಸಮಯದಲ್ಲಿ ಬಣ್ಣಗಳನ್ನು ಹಾಗೂ ಮಕರ ಸಂಕ್ರಾಂತಿ ಸಮಯದಲ್ಲಿ ಗಾಳಿಪಟಗಳನ್ನು ಮಾರಾಟ ಮಾಡುತ್ತಿದ್ದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಆರು ಅಡಿ ಎತ್ತರವಿದ್ದ ರಾಹುಲ್ ತನೇಜಾರವರ ಬಾಡಿ ಅವರನ್ನು ಸಾಕಷ್ಟು ಜನಪ್ರಿಯಗೊಳಿಸಿತು. ಅವರ ವ್ಯಕ್ತಿತ್ವವು ಬಹಳಷ್ಟು ಜನರನ್ನು ಆಕರ್ಷಿಸಿತು. ಮಾಡೆಲಿಂಗ್ ಕೆಲಸ ಶುರು ಮಾಡಿದ ಅವರು ಮಿಸ್ಟರ್ ಜೈಪುರ, ಮಿಸ್ಟರ್ ರಾಜಸ್ಥಾನ ಪ್ರಶಸ್ತಿಗಳನ್ನು ಗೆದ್ದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಆಟೋರಿಕ್ಷಾ ಚಾಲನೆ ಶುರು ಮಾಡಿದ ನಂತರ ಢಾಬಾದಲ್ಲಿನ ಕೆಲಸವನ್ನು ತೊರೆದರು. ಪತ್ರಿಕೆಗಳನ್ನು ವಿತರಿಸುವುದರ ಜೊತೆಗೆ ಮಾಡೆಲಿಂಗ್ ಕಾರ್ಯಗಳನ್ನು ಸಹ ಮಾಡಿದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಈ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ ರಾಹುಲ್ ತಮ್ಮ ಮೊದಲ ಐಷಾರಾಮಿ ಕಾರು ಖರೀದಿಸಲು ಅಗತ್ಯವಿದ್ದ ಹಣವನ್ನು ಸಂಗ್ರಹಿಸಿದರು. ದಿನಕ್ಕೆ ಕೇವಲ ರೂ.150 ಗಳಿಸುತ್ತಿದ್ದ ರಾಹುಲ್ ತನೇಜಾ 2011ರಲ್ಲಿ ಬಿಎಂಡಬ್ಲ್ಯು 5 ಸೀರಿಸ್ ಸೆಡಾನ್ ಕಾರ್ ಅನ್ನು ಖರೀದಿಸಿದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಇಷ್ಟಕ್ಕೆ ತೃಪ್ತರಾಗದ ಅವರು ಹೆಚ್ಚುವರಿ ಹಣ ನೀಡಿ ಆರ್‌ಜೆ 14 ಸಿಪಿ 0001 ಫ್ಯಾನ್ಸಿ ನಂಬರ್ ಪಡೆದುಕೊಂಡರು. ರಾಹುಲ್ ಅಂದಿನಿಂದಲೂ ಈ ಬಿಎಂಡಬ್ಲ್ಯು ಕಾರ್ ಅನ್ನು ಬಳಸುತ್ತಿದ್ದಾರೆ.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಏಳು ವರ್ಷಗಳ ನಂತರ, ಅವರು ತಮ್ಮ ಕನಸಿನ ಜಾಗ್ವಾರ್ ಎಕ್ಸ್‌ಜೆ ಎಲ್ ಕಾರನ್ನು ಖರೀದಿಸಿದರು. ರೂ.1.5 ಕೋಟಿ ನೀಡಿ ಕಪ್ಪು ಬಣ್ಣದ ಜಾಗ್ವಾರ್ ಕಾರು ಖರೀದಿಸಿದ ಅವರು ತಮ್ಮ ನೆಚ್ಚಿನ ಫ್ಯಾನ್ಸಿ ನಂಬರ್ ಪಡೆಯುವವರೆಗೆ ಈ ಕಾರಿನ ವಿತರಣೆಯನ್ನು ಪಡೆದುಕೊಂಡಿರಲಿಲ್ಲ.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಒಂದು ತಿಂಗಳು ಕಾದು 0001 ನೋಂದಣಿ ಸಂಖ್ಯೆ ಪಡೆದ ನಂತರ ಜಾಗ್ವಾರ್ ಎಕ್ಸ್‌ಜೆ ಎಲ್ ಕಾರಿನ ವಿತರಣೆಯನ್ನು ಪಡೆದುಕೊಂಡರು. ಈ ನಂಬರ್ ಪಡೆಯಲು ಅವರು ದೊಡ್ಡ ಮೊತ್ತವನ್ನೂ ಸಹ ಪಾವತಿಸಿದರು.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಅವರ ಬಿಎಂಡಬ್ಲ್ಯು 5 ಸೀರಿಸ್ ಹಾಗೂ ಜಾಗ್ವಾರ್ ಎಕ್ಸ್‌ಜೆ ಎಲ್ ಕಾರುಗಳು 0001 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಜಾಗ್ವಾರ್ ಕಾರಿನ ನೋಂದಣಿ ಸಂಖ್ಯೆ ಪಡೆಯಲು ಬಿಡ್ಡಿಂಗ್ ಮೂಲಕ ರೂ.16 ಲಕ್ಷ ಪಾವತಿಸಿದ್ದಾರೆ. ಇನ್ನು ಬಿಎಂಡಬ್ಲ್ಯು 5 ಸೀರಿಸ್ ಕಾರಿನ ನೋಂದಣಿ ಸಂಖ್ಯೆ ಪಡೆಯಲು ಅವರು ರೂ.10.3 ಲಕ್ಷ ಪಾವತಿಸಿದ್ದಾರೆ.

ಫ್ಯಾನ್ಸಿ ನಂಬರ್'ಗಾಗಿಯೇ ಲಕ್ಷಾಂತರ ರೂಪಾಯಿ ನೀಡುವ ಮಟ್ಟಕ್ಕೆ ಬೆಳೆದ ಸೈಕಲ್ ಮೆಕಾನಿಕ್

ಸಂಖ್ಯಾ ಶಾಸ್ತ್ರವನ್ನು ಅಪಾರವಾಗಿ ನಂಬುವ ರಾಹುಲ್ ತನೇಜಾ ಅವರ ಅದೃಷ್ಟದ ಸಂಖ್ಯೆ 1 ಎಂದು ಹೇಳಲಾಗಿದೆ. 1996ರಲ್ಲಿ ಅವರು ಖರೀದಿಸಿದ ಸ್ಕೂಟರ್ 2323 ನೋಂದಣಿ ಸಂಖ್ಯೆಯನ್ನು ಹೊಂದಿದೆ. ಈ ಎಲ್ಲಾ ಸಂಖ್ಯೆಗಳನ್ನು ಕೂಡಿದರೆ 10 ಆಗುತ್ತದೆ.

Most Read Articles

Kannada
English summary
Once a bicycle mechanic now owns Jaguar XJL and BMW 5 Series cars. Read in Kannada.
Story first published: Saturday, June 19, 2021, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X