ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಚಾಲನಾ ಪರವಾನಗಿಗೆ ಸಂಬಂಧಿಸಿದ ಎಲ್ಲಾ ಆನ್‌ಲೈನ್ ಪ್ರಕ್ರಿಯೆಗಳನ್ನು ವೇಗಗೊಳಿಸುತ್ತಿದೆ. ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್ ಅವಧಿಯಲ್ಲಿ ಹಲವು ಸೇವೆಗಳನ್ನು ಆನ್‌ಲೈನ್‌ ಮಾಡಲಾಗಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈಗ ಕೆಲವು ರಾಜ್ಯಗಳು ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲು ಮುಂದಾಗಿವೆ. ಈ ಕ್ರಮವು ಚಾಲನಾಪರವಾನಗಿಗಳಿಗಾಗಿ ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸುವುದನ್ನು ತಡೆಯಲಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಉತ್ತರ ಪ್ರದೇಶದ ಹೆಚ್ಚುವರಿ ಸಾರಿಗೆ ಆಯುಕ್ತರಾದ (ಐಟಿ) ದೇವೇಂದ್ರ ಕುಮಾರ್'ರವರು ಎಲ್ಲಾ ಸಹಾಯಕ ವಿಭಾಗೀಯ ಸಾರಿಗೆ ಅಧಿಕಾರಿಗಳಿಗೆ (ಆಡಳಿತ) / ಪರವಾನಗಿ ಪ್ರಾಧಿಕಾರಗಳಿಗೆ ಪತ್ರ ಬರೆದು ವೈದ್ಯಕೀಯ ಅಧಿಕಾರಿಗಳ ಲಾಗಿನ್ ಐಡಿಗಳನ್ನು ಸಾರಥಿ ಪೋರ್ಟಲ್‌ನಲ್ಲಿ ನೀಡಬೇಕೆಂದು ತಿಳಿಸಿದ್ದಾರೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಮೂಲಕ ಅಧಿಕೃತ ವೈದ್ಯರು ಆನ್‌ಲೈನ್‌ನಲ್ಲಿ ನೀಡುವ ವೈದ್ಯಕೀಯ ಪ್ರಮಾಣಪತ್ರಗಳ ಆಧಾರದ ಮೇಲೆ ಮಾತ್ರ ಚಾಲನಾ ಪರವಾನಗಿ ನೀಡುವಂತೆ ತಿಳಿಸಲಾಗಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 1989ಕ್ಕೆ ಜಿಎಸ್ಆರ್ 240 ಇ ನಂತೆ ತಿದ್ದುಪಡಿ ಮಾಡಲಾಗಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ತಿದ್ದುಪಡಿಯನ್ವಯ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಫಾರಂ 1 ಎ ಮೂಲಕ ಸಾರಥಿ ಪೋರ್ಟಲ್‌ನಲ್ಲಿಯೇ ಆನ್‌ಲೈನ್‌ ಮೂಲಕ ನೀಡಲು ಅವಕಾಶ ಕಲ್ಪಿಸಲಾಗಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಚಾಲನಾ ಪರವಾನಗಿ ಪಡೆಯಲು ಬಯಸುವ ಅರ್ಜಿದಾರರು ವೈದ್ಯಕೀಯ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣಪತ್ರ ನೀಡಲು ಪ್ರತಿ ವೈದ್ಯಕೀಯ ಅಧಿಕಾರಿ ಹತ್ತು ರೂಪಾಯಿ ಶುಲ್ಕ ವಿಧಿಸುತ್ತಾರೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ದೇಶದ ಪ್ರತಿ ಆರ್‌ಟಿಒಗಳ ಕಾರ್ಯವನ್ನು ಈಗ ಆನ್‌ಲೈನ್‌ ಮಾಡಲಾಗಿದೆ. ಪರವಾನಗಿ ನವೀಕರಣ, ಡೂಪ್ಲಿಕೇಟ್ ಪರವಾನಗಿ, ವಿಳಾಸ ಬದಲಾವಣೆ ಹಾಗೂ ಆರ್‌ಸಿ ಪಡೆಯಲು ಜನರು ಆರ್‌ಟಿ‌ಒ ಕಚೇರಿಗಳಿಗೆ ಬರುವುದನ್ನು ತಡೆಯಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಜನರು ಮನೆಯಲ್ಲಿ ಕುಳಿತೇ ಈ ದಾಖಲೆಗಳನ್ನು ಪಡೆಯುವಂತಹ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆರ್‌ಟಿ‌ಒ ಸೇವೆಗಳನ್ನು ಆನ್‌ಲೈನ್ ಮಾಡಿದ ನಂತರ ಜನರು ಡ್ರೈವಿಂಗ್ ಟೆಸ್ಟ್ ಹಾಗೂ ವಾಹನಗಳ ಫಿಟ್‌ನೆಸ್‌ಗಾಗಿ ಮಾತ್ರ ಆರ್‌ಟಿಒಗೆ ಬರಬೇಕಾಗುತ್ತದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಜುಲೈ 1 ರಿಂದ ದೇಶಾದ್ಯಂತ ಲರ್ನರ್ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಆನ್‌ಲೈನ್‌ ಮಾಡಲಾಗಿದೆ. ಆರ್‌ಟಿ‌ಒ ಯಾವುದೇ ಪ್ರಮಾಣೀಕೃತ ಚಾಲನಾ ಶಾಲೆಯಿಂದ ವಾಹನ ಚಲಾಯಿಸಲು ತರಬೇತಿ ಪಡೆದ ನಂತರ ಚಾಲನಾ ಪರವಾನಗಿಯನ್ನು ನೀಡಲಿದೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಛತ್ತೀಸ್‌ಗಢದ ನಂತರ ಈಗ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ಬಿಹಾರ, ರಾಜಸ್ಥಾನ ಹಾಗೂ ದೆಹಲಿಯಂತಹ ರಾಜ್ಯಗಳು ಸಹ ಚಾಲನಾ ಪರವಾನಗಿ ಪಡೆಯಲು ವೈದ್ಯರು ನೀಡುವ ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಗಣಿಸಲು ಚಿಂತಿನೆ ನಡೆಸುತ್ತಿವೆ.

ಡಿ‌ಎಲ್ ಪಡೆಯಲು ಆನ್‌ಲೈನ್ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಇದರ ಜೊತೆಗೆ ಲರ್ನರ್ ಲೈಸೆನ್ಸ್ ಹಾಗೂ ವಾಹನಗಳ ನೋಂದಣಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೆಲವು ರಾಜ್ಯಗಳಲ್ಲಿ ಈಗ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಹಂತ ಹಂತವಾಗಿ ಈ ಸಂಪೂರ್ಣ ಪ್ರಕ್ರಿಯೆಯನ್ನು ಎಲ್ಲಾ ರಾಜ್ಯಗಳಲ್ಲಿ ಆನ್‌ಲೈನ್‌ ಮಾಡಲಾಗುವುದು.

Most Read Articles

Kannada
English summary
Online medical certificate needed for driving license. Read in Kannada.
Story first published: Tuesday, July 27, 2021, 13:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X