1000 ಕಿ.ಮೀ ದೂರಕ್ಕೆ ಕೇವಲ 5 ಗಂಟೆಗಳ ಪ್ರಯಾಣ...ಮುಂಬೈ-ಬೆಂಗಳೂರು ಮಾರ್ಗಕ್ಕೆ ವಿಶ್ವದ ಅತಿ ವೇಗದ ಹೆದ್ದಾರಿ....

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಮುಂಬೈ ಮತ್ತು ಬೆಂಗಳೂರು ನಡುವೆ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ಯೋಜಿಸುತ್ತಿದ್ದು, ಇದು ಪ್ರಯಾಣದ ಸಮಯವನ್ನು ಐದು ಗಂಟೆಗಳಿಗೆ ಕಡಿತಗೊಳಿಸುತ್ತದೆ ಎಂದು ಹೇಳಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಅದೇ ರೀತಿ, ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳು ಪುಣೆ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು 3.5 ರಿಂದ 4 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಬೆಂಗಳೂರು ಮತ್ತು ಮುಂಬೈ ನಡುವಿನ ಅಂತರವು 981.4 ಕಿಮೀ ಮತ್ತು ಪ್ರಸ್ತುತ, ರಸ್ತೆ ಪ್ರಯಾಣವು ಸುಮಾರು 16-17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾತನಾಡಿದ ನಿತಿನ್ ಗಡ್ಕರಿ, ನಾವು ಮುಂಬೈ ಮತ್ತು ಬೆಂಗಳೂರು ನಡುವೆ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಯೋಜಿಸುತ್ತಿದ್ದೇವೆ. ಇದು ಮುಂಬೈ-ಬೆಂಗಳೂರು ನಡುವೆ 5 ಗಂಟೆಗಳ ಪ್ರಯಾಣ ಮತ್ತು ಪುಣೆ ಮತ್ತು ಬೆಂಗಳೂರು ನಡುವೆ 3.5 ರಿಂದ 4 ಗಂಟೆಗಳ ಪ್ರಯಾಣವಾಗಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯು ಪುಣೆಯ ರಿಂಗ್ ರೋಡ್ ಬಳಿಯಿಂದ ತಿರುವು ಪಡೆದು ಬೆಂಗಳೂರಿನ ಕಡೆಗೆ ಹೆದ್ದಾರಿಯಾಗಿ ಪ್ರಾರಂಭವಾಗಲಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 26 ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ದೆಹಲಿಯಿಂದ ಡೆಹ್ರಾಡೂನ್, ಹರಿದ್ವಾರ ಅಥವಾ ಜೈಪುರಕ್ಕೆ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಡಿಸೆಂಬರ್ 2022 ರ ಅಂತ್ಯದ ವೇಳೆಗೆ, ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣದ ಸಮಯ ಎರಡೂವರೆ ಗಂಟೆಗಳು, ದೆಹಲಿಯಿಂದ ಅಮೃತಸರಕ್ಕೆ 4 ಗಂಟೆಗಳು, ದೆಹಲಿಯಿಂದ ಕತ್ರಾಗೆ 6 ಗಂಟೆಗಳು, ದೆಹಲಿಯಿಂದ ಶ್ರೀನಗರಕ್ಕೆ 8 ಗಂಟೆಗಳ ಪ್ರಯಾಣ ಸಮಯ ಹಿಡಿಯಲಿದ್ದು, ಈ ಎಲ್ಲಾ ಮಾರ್ಗಗಳು ಹೊಸ ಹೆದ್ದಾರಿಗಳನ್ನು ಒಳಗೊಂಡಿರಲಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಇವಿಷ್ಟೇ ಅಲ್ಲದೇ ದೆಹಲಿಯಿಂದ ಮುಂಬೈಗೆ 12 ಗಂಟೆಗಳು, ದೆಹಲಿಯಿಂದ ಜೈಪುರಕ್ಕೆ ಎರಡು ಗಂಟೆ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಎರಡು ಗಂಟೆ ಪ್ರಯಾಣ ಸಮಯವಾಗಲಿದೆ. ಮೀರತ್‌ನಿಂದ ದೆಹಲಿಗೆ ಪ್ರಯಾಣಿಸಲು ಮೊದಲು 4.5 ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಜನರು 40 ನಿಮಿಷಗಳಲ್ಲಿ ಬರುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

2024 ಕ್ಕೂ ಮೊದಲೇ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತದ ರಸ್ತೆ ಮೂಲಸೌಕರ್ಯವು ಅಮೇರಿಕಾದಲ್ಲಿರುವಂತೆಯೇ ಇರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿದರು. ಕೇಂದ್ರ ಸರ್ಕಾರವು ದೇಶದ ಸಂಪೂರ್ಣ ಮೂಲಸೌಕರ್ಯವನ್ನು ಬದಲಾಯಿಸಲಿದೆ ಎಂದು ಹೇಳಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಹಸಿರು ಹೆದ್ದಾರಿಯು ರಸ್ತೆಮಾರ್ಗ ವಿನ್ಯಾಸಕ್ಕಾಗಿ ತುಲನಾತ್ಮಕವಾಗಿ ಹೊಸ ಪರಿಕಲ್ಪನೆಯ ಪ್ರಕಾರ ನಿರ್ಮಿಸಲಾದ ರಸ್ತೆಮಾರ್ಗವಾಗಿದ್ದು ಅದು ಸಾರಿಗೆ ಕಾರ್ಯವನ್ನು ಮತ್ತು ಪರಿಸರ ಸಮರ್ಥನೀಯತೆಯನ್ನು ಸಂಯೋಜಿಸುತ್ತದೆ. ಯೋಜನೆ, ವಿನ್ಯಾಸ ಮತ್ತು ನಿರ್ಮಾಣದ ಉದ್ದಕ್ಕೂ ಪರಿಸರ ವಿಧಾನವನ್ನು ಬಳಸಲಾಗುತ್ತದೆ. ಫಲಿತಾಂಶವು ಸಾರಿಗೆ, ಪರಿಸರ ವ್ಯವಸ್ಥೆ, ನಗರ ಬೆಳವಣಿಗೆ, ಸಾರ್ವಜನಿಕ ಆರೋಗ್ಯ ಮತ್ತು ಸುತ್ತಮುತ್ತಲಿನ ಸಮುದಾಯಗಳಿಗೆ ಪ್ರಯೋಜನಕಾರಿಯಾದ ಹೆದ್ದಾರಿಯಾಗಿದೆ.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಐದು ವರ್ಷಗಳ ನಂತರ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ದೇಶದಲ್ಲಿ ಪರ್ಯಾಯ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ನಲ್ಲಿ ಎಥೆನಾಲ್ ಘಟಕವನ್ನು ಉದ್ಘಾಟಿಸಿದ್ದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಹಾಗೆಯೇ ಗ್ರೀನ್ ಹೈಡ್ರೋಜನ್ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಕೆಲ ನೀತಿಗಳನ್ನು ಪ್ರಕಟಿಸಿದೆ, ಇದರ ಅಡಿಯಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಪೆಟ್ರೋಲ್ ಆಮದನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವತ್ತ ಗಮನ ಹರಿಸಲಾಗಿದೆ ಎಂದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಗ್ರೀನ್ ಹೈಡ್ರೋಜನ್ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿ ಹಸಿರು ಹೈಡ್ರೋಜನ್ ಅನ್ನು ಪ್ರತಿ ಕೆ.ಜಿಗೆ $1 (ರೂ. 79) ರಷ್ಟು ಕಡಿಮೆ ದರದಲ್ಲಿ ಒದಗಿಸುವುದು ನನ್ನ ಕನಸಾಗಿದೆ ಎಂದ ಅವರು, ಪೆಟ್ರೋಲಿಯಂ, ಬಯೋಮಾಸ್, ಸಾವಯವ ತ್ಯಾಜ್ಯ ಮತ್ತು ಒಳಚರಂಡಿ ನೀರಿನಿಂದ ಹೈಡ್ರೋಜನ್ ಅನ್ನು ಉತ್ಪಾದಿಸಬಹುದು ಎಂದು ತಿಳಿಸಿದರು.

ಬೆಂಗಳೂರು-ಮುಂಬೈ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ...ಕೇವಲ 5 ಗಂಟೆಗಳ ಪ್ರಯಾಣ: ಸಚಿವ ನಿತಿನ್ ಗಡ್ಕರಿ

ಇನ್ನು ಎಥೆನಾಲ್ ಬೆಲೆ ಲೀಟರ್‌ಗೆ 62 ರೂಪಾಯಿ ಇದ್ದು, ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯವು ಪೆಟ್ರೋಲ್‌ಗಿಂತ ಕಡಿಮೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ರಷ್ಯಾದ ವಿಜ್ಞಾನಿಗಳ ಸಹಯೋಗದೊಂದಿಗೆ ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪೆಟ್ರೋಲಿಯಂ ಸಚಿವಾಲಯವು ಈಗ ಆ ಹೊಸ ತಂತ್ರಜ್ಞಾನವನ್ನು ಪ್ರಮಾಣೀಕರಿಸಿದೆ ಎಂದು ಗಡ್ಕರಿ ಹೇಳಿದರು.

Most Read Articles

Kannada
English summary
Only 5 hours journey from Bengaluru to Mumbai Minister Nitin Gadkari promised the people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X