ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಭಾರಿ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಕನಸಿರುತ್ತದೆ ಎಂದೇ ಹೇಳಬಹುದು. ಆದರೆ ಆ ಕನಸು ಕೆಲವರಿಗೆ ನನಸಾಗುತ್ತದೆ. ಇನ್ನು ಕೆಲವು ಜನರಿಗೆ ಇದು ಕನಸಾಗಿಯೇ ಉಳಿಯುತ್ತದೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಆದರೆ ಅಮೃತಸರದ ಒಬ್ಬ ವ್ಯಕ್ತಿಯು ಒಂದು ವಿಮಾನದಲ್ಲಿ ಏಕೈಕ ಪ್ರಯಾಣಿಕನಾಗಿ ಮಹಾರಾಜರ ರೀತಿಯಲ್ಲಿ ದುಬೈಗೆ ಹಾರಾಟ ಮಾಡಿರುವುದು ವರದಿಯಾಗಿದೆ. ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಇತ್ತೀಚೆಗೆ ಅಮೃತಸರದಿಂದ ದುಬೈಗೆ ಏರ್ ಇಂಡಿಯಾದ ಏಕೈಕ ಪ್ರಯಾಣಿಕರಾಗಿದ್ದರು. ಹತ್ತು ವರ್ಷಗಳ ಗೋಲ್ಡನ್ ವೀಸಾ ಹೊಂದಿರುವ ಮತ್ತು ದುಬೈನಲ್ಲಿ ವ್ಯವಹಾರ ನಡೆಸುತ್ತಿರುವ ಒಬೆರಾಯ್ ಅವರು ಈ ಏಕೈಕ ಪ್ರಯಾಣಿಕ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಎಎನ್‌ಐ ಜೊತೆ ಮಾತನಾಡಿದ ಅವರು, "ನಾನು ಜೂನ್ 23 ರಂದು ಬೆಳಿಗ್ಗೆ 4 ಗಂಟೆಗೆ ಏರ್‌ ಇಂಡಿಯಾ (ಎಐ -929) ಮೂಲಕ ಅಮೃತಸರದಿಂದ ದುಬೈಗೆ ನನ್ನ ವಿಮಾನವನ್ನು ಹತ್ತಿಕೊಂಡೆ. ಇಡೀ ವಿಮಾನದಲ್ಲಿ ಒಬ್ಬನೇ ಪ್ರಯಾಣಿಕನಾಗಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ನಾನು ಏಕೈಕ ಪ್ರಯಾಣಿಕನಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನಾನು ಮಹಾರಾಜನಂತೆ ಅನುಭವಾಯ್ತು. ನನ್ನನ್ನು ಇಡೀ ಸಿಬ್ಬಂದಿವರ್ಗ ಚೆನ್ನಾಗಿ ನೋಡಿಕೊಂಡರು ಮತ್ತು ಖಾಲಿ ವಿಮಾನದಲ್ಲಿ ಪೋಟೋ ತೆಗೆದರು, ನಾನು ವಿಮಾನದ ಸಿಬ್ಬಂದಿ ಮತ್ತು ಪೈಲಟ್‌ಗಳೊಂದಿಗೆ ಫೋಟೋಗಳನ್ನು ತೆಗೆದುಕೊಂಡೆ ಎಂದು ಹೇಳಿದ್ದಾರೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಒಬೆರಾಯ್ ಅವರು 70 ದಿರ್ಹಾಮ್ ಹಣವನ್ನು ಟೆಕೆಟ್ ಗಾಗಿ ಪಾವತಿಸಿದ್ದಾರೆ, ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.15,000 ಗಳಾಗಿರುತ್ತದೆ. ಇವರು ಪ್ರಯಾಣಿಸಿರುವುದು ಸುಮಾರು 320 ಸೀಟುಗಳನ್ನು ಹೊಂದಿರುವ ಏರ್‌ಬಸ್ ವಿಮಾನವಗಿದೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಕರೋನಾ ಎರಡನೇ ಅಲೆಯ ಕಾರಣದಿಂದ ಏಪ್ರಿಲ್ 24 ರಿಂದ ಭಾರತ ಮತ್ತು ಯುಎಇ ನಡುವೆ ವಿಮಾನ ಕಾರ್ಯಾಚರಣೆಯನ್ನು ಸಾರ್ವಜನಿಕರಿಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ಪ್ರಯಾಣ ನಿಷೇಧದ ಮಧ್ಯೆ ಯುಎಇ ಅಧಿಕಾರಿಗಳು ರಾಜತಾಂತ್ರಿಕರು, ಗೋಲ್ಡನ್ ವೀಸಾ ಹೊಂದಿರುವವರು ಮತ್ತು ಎಮಿರಾಟಿಸ್‌ಗೆ ಭಾರತದಿಂದ ಪ್ರಯಾಣಿಸಲು ಅವಕಾಶ ನೀಡಿದ್ದರು.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಯುನೈಟೆಡ್ ಅರಬ್ ಎಮಿರೇಟ್ಸ್ "ಗೋಲ್ಡನ್" ವೀಸಾ ವ್ಯವಸ್ಥೆಯು ಗಲ್ಫ್ ರಾಜ್ಯದಲ್ಲಿ 10 ವರ್ಷಗಳ ರೆಸಿಡೆನ್ಸಿಯನ್ನು ಕೆಲವು ವೃತ್ತಿಪರರಿಗೆ ಮತ್ತು ಪ್ರಮುಖ ಜಾಗತಿಕ ವ್ಯಕ್ತಿಗಳಿಗೆ ನೀಡುತ್ತದೆ. ಒಬೆರಾಯ್ ಅವರು ಪ್ರಸಿದ್ಧ ಉದ್ಯಮಿಯಾಗಿದ್ದಾರೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಎಎನ್‌ಐ ವರದಿಯ ಪ್ರಕಾರ, ಈ ಮೊದಲು ಒಬೆರಾಯ್ ಅವರಿಗೆ ಅನುಮತಿ ನಿರಾಕರಿಸಲಾಗಿತ್ತು ಆದರೆ ನಂತರ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಹಸ್ತಕ್ಷೇಪದ ನಂತರ ಅನುಮತಿಯನ್ನು ನೀಡಿದರು. ಯುಎಇ ಅನುಮೋದಿಸಿದ ಪೂರ್ಣ ವ್ಯಾಕ್ಸಿನೇಷನ್ ಪ್ರೂಫ್ ಸೇರಿದಂತೆ ಎಲ್ಲಾ ಸಂಬಂಧಿತ ಪ್ರಯಾಣ ದಾಖಲೆಗಳನ್ನು ಅವರು ಹೊಂದಿದ್ದಾರೆ ಎಂದು ಅವರು ಹೇಳಿದರು.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಸ್ಮರಣೀಯ ಪ್ರಯಾಣಕೆಕ್ಕೆ ಅವಕಾಶ ನೀಡಿರುವುದಕ್ಕೆ ಯುಎಇ ಮತ್ತು ಭಾರತೀಯ ಸರ್ಕಾರಗಳಿಗೆ ಒಬೆರಾಯ್ ಅವರು ಧನ್ಯವಾದ ತಿಳಿಸಿದ್ದಾರೆ. ವಿಶೇಷ ಸೇವೆಗಳಿಗಾಗಿ ಏರ್ ಇಂಡಿಯಾಕ್ಕೆ ಧನ್ಯವಾದಗಳು, ನೀವು ನಿಜವಾಗಿಯು ಅದ್ಭುತ ಪ್ರಯಾಣವನ್ನಾಗಿ ಮಾಡಿದ್ದೀರಿ ಎಂದು ಅವರು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ಒಬ್ಬನೇ ಒಬ್ಬ ಪ್ರಯಾಣಿಕನನ್ನು ಹೊತ್ತು ಅಮೃತಸರದಿಂದ ದುಬೈಗೆ ಹಾರಿದ ವಿಮಾನ

ಇನ್ನು ಒಬೆರಾಯ್ ಅವರು ಸರ್ಕಾರದ ಗೋಲ್ಡನ್ ವೀಸಾ ಪಡೆದುಕೊಂಡಿದ್ದ ಕಾರಣ ಏಕೈಕ ಪ್ರಯಾಣಿಕನಿದ್ದರು ಕೂಡ ವಿಮಾನ ಹಾರಾಟ ನಡೆಸಿದೆ. ರಾಜ ತಾಂತ್ರಿಕ ಅಧಿಕಾರಿಗಳು ಮತ್ತು ದುಬೈ ಪ್ರಜೆಗಳು ವಿಮಾನದಲ್ಲಿ ಇಂತಹ ಸಂದರ್ಭದಲ್ಲಿ ಒಬ್ಬರಿದ್ದರೂ ಕೂಡ ವಿಮಾನ ಹಾರಾಟ ಮಾಡಬೇಕಾಗುತ್ತದೆ.

Image Courtesy: Air India

Most Read Articles

Kannada
English summary
Businessman Only Passenger On Flight To Dubai. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X