ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ವಿಶ್ವ ವಾಹನ ಉದ್ಯಮದಲ್ಲಿ ಭಾರತವು ಪ್ರಮುಖ ಮಾರುಕಟ್ಟೆಯಾಗಿ ಗುರ್ತಿಸಿಕೊಂಡಿದೆ. ಇತ್ತೀಚೆಗೆ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಆದರೆ ವಾಹನಗಳ ಮಾರಾಟ ಹೆಚ್ಚಾದಂತೆ ದೇಶದಲ್ಲಿ ಪ್ರತಿ ವರ್ಷ ವಾಹನಗಳ ಕಳವು ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ವಾಹನ ತಯಾರಕರು ಕೈಗೆಟುಕವ ಬೆಲೆಗೆ ವಾಹನಗಳನ್ನು ಪರಿಚಯಿಸುತ್ತಿದ್ದು, ದೇಶದಲ್ಲಿ ಹೆಚ್ಚಿನ ವಾಹನಗಳು ಮಾರಾಟವಾಗುತ್ತಿವೆ. ಅಲ್ಲದೇ ಶ್ರೀಮಂತರು ಕೂಡ ಮನೆಗೆ ಎರಡು-ಮೂರು ಕಾರುಗಳನ್ನು ಖರೀದಿಸುತ್ತಿದ್ದಾರೆ. ಆರ್ಥಿಕತೆ ಸುಧಾರಿಸಿದಂತೆ ಹೆಚ್ಚು ಜನರು ಕಾರುಗಳನ್ನು ಖರೀದಿಸುತ್ತಿರುವುದರ ಜೊತೆಗೆ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಭಾರತದಲ್ಲಿ ಕಾರು ಕಳ್ಳತನವು ದೊಡ್ಡ ಸಮಸ್ಯೆಯಾಗಿದೆ, ದೇಶದಲ್ಲಿ ಒಂದು ವರ್ಷದಲ್ಲಿ ಎಷ್ಟು ಕಾರುಗಳು ಕಳ್ಳತನವಾಗುತ್ತಿವೆ ಗೊತ್ತಾ? ಪ್ರತಿ ವರ್ಷ ಸುಮಾರು 1,00,000 ಕಾರುಗಳು ಕಳ್ಳತನವಾಗುತ್ತಿವೆ ಎಂದು ಅಂದಾಜಿಸಲಾಗಿದೆ. ನೀವು ಕೂಡ ಕಾರನ್ನು ಹೊಂದಿದ್ದರೆ, ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕೆಲವು ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಒಳಿತು.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಅತಿ ದೊಡ್ಡ ಮಾರುಕಟ್ಟೆ ನಮ್ಮದು

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ತಯಾರಾದ ವಾಹನಗಳು ಇತರ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಏಕೆಂದರೆ ಭಾರತದಲ್ಲಿ ತಯಾರಾದ ಕಾರುಗಳು ಇತರ ದೇಶಗಳಲ್ಲಿ ತಯಾರಾಗುವ ಮಾದರಿಗಳಿಗಿಂತ ಅಗ್ಗವಾಗಿರುವುದು ಪ್ರಮುಖ ಕಾರಣ. ಅಲ್ಲದೇ ಭಾರತೀಯ ಕಾರುಗಳು ಹೆಚ್ಚು ವಿಶ್ವಾಸಾರ್ಹವಾಗಿರುವುದು ಕೂಡ ಹೌದು.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ವಿದೇಶಿ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಭಾರತೀಯ ಕಾರು ಕಂಪನಿಗಳು ನೀಡುಗತ್ತಿವೆ. ಹಾಗಾಗಿ ಬೇಡಿಕೆಯ ಬೇಡಿಕೆ ಹೆಚ್ಚಳವಾಗುತ್ತಿರುವ ಪರಿಣಾಮ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಕಾರು ಮಾರುಕಟ್ಟೆಯು ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಭಾರತದಲ್ಲಿ ಕಾರು ಮಾರುಕಟ್ಟೆ ಈಗಾಗಲೇ ವೇಗವಾಗಿ ಬೆಳೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಶೇ.20ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ. ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವುದರಿಂದ ಈ ಬೆಳವಣಿಗೆ ಮುಂದುವರಿಯುವ ನಿರೀಕ್ಷೆಯಿದೆ. 2023ರ ವೇಳೆಗೆ ಭಾರತದಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ರಸ್ತೆಗಿಳಿಯಲಿವೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಇದು ಒಂದೆಡೆ ದೇಶದ ಅಭಿವೃದ್ಧಿಯನ್ನು ಸೂಚಿಸಿದರೆ, ಮತ್ತೊಂದೆಡೆ ಕಳ್ಳತನ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಕಾರು ಕಳ್ಳತನಗಳ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಕಳುವಾದ ವಾಹನಗಳು ಮತ್ತೆ ಪತ್ತೆಯಾಗುವುದೇ ಅಪರೂಪವಾಗಿಬಿಟ್ಟಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಈ ಬ್ರಾಂಡ್‌ಗಳೇ ಕಳ್ಳರಿಗೆ ಟಾರ್ಗೆಟ್

ಭಾರತದಲ್ಲಿ ಜನಪ್ರಿಯ ಬ್ರಾಂಡ್‌ಗಳ ಕಾರುಗಳು ಹೆಚ್ಚು ಕಳ್ಳತನವಾಗುತ್ತವೆ. ಏಕೆಂದರೆ ಕಳ್ಳರು ಕಳ್ಳತನ ಮಾಡಿದ ನಂತರ ಅವುಗಳನ್ನು ಸುಲಭವಾಗಿ ಮಾರಾಟ ಮಾಡುತ್ತಾರೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹುಂಡೈ ಐ20 ನಂತಹ ಕಡಿಮೆ ಬೆಲೆಯ ಕಾರುಗಳು ಸಹ ಹೆಚ್ಚು ಕದ್ದ ಕಾರುಗಳಾಗಿವೆ. ಈ ಮಾದರಿಗಳು ಕಳ್ಳರಲ್ಲಿ ಜನಪ್ರಿಯವಾಗಿದ್ದು, ಇವುಗಳನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರುವುದು ಸುಲಭ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಅತಿ ಹೆಚ್ಚು ಕಾರು ಕಳ್ಳತನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಮಹಾರಾಷ್ಟ್ರವು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ಮಹಾರಾಷ್ಟ್ರದ ಮುಂಬೈ ನಗರವು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಇದರಿಂದ ಕಳ್ಳರು ಕಾರನ್ನು ಕದಿಯಲು ಮತ್ತು ತಪ್ಪಿಸಿಕೊಳ್ಳಲು ಸುಲಭವಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಹಳೆಯ ಕಾರುಗಳ ಮೇಲೂ ಕಳ್ಳರ ಕಣ್ಣು

ಭಾರತದಲ್ಲಿ ಸುಮಾರು 12 ವರ್ಷದ ಹಳೆಯ ಕಾರುಗಳು ಹೊಸ ಕಾರುಗಳಿಗಿತ ಹೆಚ್ಚಾಗಿವೆ. ಏಕೆಂದರೆ ಹೆಚ್ಚಿನ ಜನರು ಹೊಸ ಕಾರು ಖರೀದಿಸಲು ಸಾಧ್ಯವಾಗದ ಕಾರಣ ಹಲವು ವರ್ಷಗಳ ಕಾಲ ಹಳೆಯ ಕಾರನ್ನೇ ಓಡಿಸುತ್ತಿದ್ದಾರೆ. ಇಂತಹ ಕಾರುಗಳನ್ನು ಕಳ್ಳರು ಅತಿ ಸುಲಭವಾಗಿ ಕದಿಯುತ್ತಿದ್ದಾರೆ. ಹಳೆಯ ಕಾರುಗಳು ತಂತ್ರಜ್ಞಾನದಲ್ಲಿ ಹಿಂದುಳಿದ ಕಾರಣ ಭದ್ರತಾ ವೈಶಿಷ್ಟ್ಯಗಳು ಇರುವುದುಲ್ಲ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಹಾಗಾಗಿ ಕಳ್ಳರು ಹಳೆಯ ಕಾರಿನ ಲಾಕ್ ಅನ್ನು ಮುರಿದು ಕದಿಯುವುದು ಸುಲಭವಾಗಿದೆ. ಭಾರತದಲ್ಲಿ ಒಂದು ಕಾರು ವರ್ಷದಲ್ಲಿ ಸರಾಸರಿ 14,000 ಕಿ.ಮೀ. ಓಡಬಹುದು. ಇದು ಯುನೈಟೆಡ್ ಸ್ಟೇಟ್ಸ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸರಾಸರಿಗಿಂತ ಕಡಿಮೆಯಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಭಾರತದಲ್ಲಿ ಪ್ರತಿ ವರ್ಷ ಸುಮಾರು 40 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿದೆ. 2020-2021ರಲ್ಲಿ ಮಾರಾಟದ ಸಂಖ್ಯೆ ಸುಮಾರು 3 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಕಾರು ಉದ್ಯಮದಿಂದ ಒಟ್ಟು ಆದಾಯವು 2026ರ ವೇಳೆಗೆ $6 ಟ್ರಿಲಿಯನ್‌ಗೆ ಏರುವ ನಿರೀಕ್ಷೆಯಿದೆ. ಇದು ದೇಶದ ಅಭಿವೃದ್ಧಿಗೂ ಕಾರಣವಾಗಲಿದೆ.

ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಕಾರುಗಳ ಕಳ್ಳತನ: ಖದೀಮರಿಗೆ ಈ ಬ್ರ್ಯಾಂಡ್‌ಗಳೇ ಟಾರ್ಗೆಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಆಟೋ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಸೆಮಿಕಂಡಕ್ಟರ್ ಕೊರತೆಯನ್ನು ತೀವ್ರವಾಗಿ ಎದುರಿಸಿತ್ತು. ಇದರಿಂದ ವಾಹನಗಳ ಉತ್ಪಾದನೆಯು ಕಡಿಮೆಯಾಗಿ ನಷ್ಟ ಅನುಭವಿಸಬೇಕಾಯಿತು. ಇದೀಗ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಲಿದೆ. ಆದರೆ ವಾಹನ ಬಳೆಕದಾರರು ತಮ್ಮ ವಾಹನಗಳ ಭದ್ರತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಾಹನ ಮಾರಾಟದಷ್ಟೆ ಕಳ್ಳತನ ಪ್ರಕರಣಗಳನ್ನು ಕಾಣಬೇಕಾಗುತ್ತದೆ.

Most Read Articles

Kannada
English summary
Over Lakh Car Stolen Every Year in India These Brands Are the Target for thieves
Story first published: Thursday, June 30, 2022, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X