ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು 2019ರ ಸಾಲಿನ ರಸ್ತೆ ಅಪಘಾತಗಳ ವರದಿಯನ್ನು ಬಿಡುಗಡೆಗೊಳಿಸಿದೆ. 2019ರಲ್ಲಿ ಭಾರತದಲ್ಲಿ ಸಂಬಂಧಿಸಿದ ರಸ್ತೆ ಅಪಘಾತಗಳು ಹಾಗೂ ರಸ್ತೆ ಅಪಘಾತ ಸಂಬಂಧಿತ ಸಾವುಗಳಿಗೆ ವಾಹನಗಳ ವೇಗವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

2019ರಲ್ಲಿ ಭಾರತದಲ್ಲಿ 4,49,002 ಅಪಘಾತಗಳು ಸಂಭವಿಸಿವೆ. ಈ ಪೈಕಿ 1,51,113 ಮಂದಿ ಸಾವನ್ನಪ್ಪಿದ್ದರೆ, 4,51,361 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಪ್ರತಿದಿನ 1,230 ರಸ್ತೆ ಅಪಘಾತಗಳು ಹಾಗೂ 414 ಸಾವುನೋವುಗಳು ಸಂಭವಿಸಿವೆ. ಪ್ರತಿ ಗಂಟೆಗೆ 51 ರಸ್ತೆ ಅಪಘಾತಗಳು ಹಾಗೂ 17 ಸಾವುನೋವುಗಳು ಸಂಭವಿಸಿವೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

ಕಳೆದ ವರ್ಷ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳು ಹಾಗೂ ಸಾವುಗಳಿಗೆ ವಾಹನಗಳ ಅತಿ ವೇಗವು ಮೊದಲ ಕಾರಣವಾಗಿದೆ. ಅತಿ ವೇಗವಾಗಿ ವಾಹನಗಳು ಚಲಿಸಿ 1,01,699 ಅಪಘಾತಗಳಾಗಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

2019ರಲ್ಲಿ ಸಂಭವಿಸಿದ ಒಟ್ಟು ರಸ್ತೆ ಅಪಘಾತಗಳಲ್ಲಿ 71%ನಷ್ಟು ಅಪಘಾತಗಳು ವಾಹನಗಳ ಅತಿ ವೇಗದ ಕಾರಣಕ್ಕೆ ಸಂಭವಿಸಿವೆ. ಒಟ್ಟು ಗಾಯಗೊಂಡವರಲ್ಲಿ 72.4%ನಷ್ಟು ಜನರು ವೇಗದ ಅಪಘಾತಗಳಿಂದಾಗಿ ಗಾಯಗೊಂಡಿದ್ದಾರೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

ಈ ಅಂಕಿಅಂಶಗಳನ್ನು ಗಮನಿಸಿದ ನಂತರವಾದರೂ, ಜನರು ವೇಗವಾಗಿ ವಾಹನ ಚಾಲನೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಇದೇ ವೇಳೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ ಪಾದಚಾರಿಗಳ ಸಂಖ್ಯೆಯೂ ಹೆಚ್ಚಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 22,656 ಪಾದಚಾರಿಗಳು ಸಾವನ್ನಪ್ಪಿದ್ದರೆ, 2019ರಲ್ಲಿ ಈ ಪ್ರಮಾಣವು 25,858ಕ್ಕೆ ಏರಿದೆ. ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ 2019ರಲ್ಲಿ 14.13%ನಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

ರಸ್ತೆ ಅಪಘಾತಗಳು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. 2019ರಲ್ಲಿ 54%ನಷ್ಟು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಹೆಚ್ಚು ಗಾಯಗೊಂಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

2019ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 1,29,319 ಪುರುಷರು (86%) ಹಾಗೂ 21,794 ಮಹಿಳೆಯರು (14%) ಸಾವನ್ನಪ್ಪಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳ ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ. ಭಾರತದಲ್ಲಿ ರಸ್ತೆ ಸುರಕ್ಷತೆಯು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಈ ಸಂಗತಿಯೇ ಪ್ರಮುಖ ಕಾರಣ

ಇದನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ರಸ್ತೆ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸಾವುನೋವುಗಳನ್ನು ಕಡಿಮೆ ಮಾಡಬಹುದು.

ಗಮನಿಸಿ: ಬಳಸಿದ ಚಿತ್ರಗಳು ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ.

Most Read Articles

Kannada
English summary
Over speeding is the main reason for road accidents in India. Read in Kannada.
Story first published: Saturday, October 24, 2020, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X