Just In
- 21 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಆರ್ಥಿಕ ಬಿಕ್ಕಟ್ಟು: ವಿದೇಶಿ ಕಾರುಗಳ ಆಮದಿನ ಮೇಲೆ ನಿರ್ಬಂಧ ಹೇರಿದ ಪಾಕಿಸ್ತಾನ
ಭಾರತದ ನೆರೆಯ ದೇಶವಾದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈ ದೇಶಗಳಲ್ಲಿ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಎರಡು ದೇಶದ ಸರ್ಕಾರಗಳು ದಿವಾಳಿಯಾದರೆ ಏನು ಮಾಡಬೇಕೆಂಬ ಚಿಂತನೆಯಲ್ಲಿ ತೊಡಗಿವೆ.

ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ಪಾಕಿಸ್ತಾನ ಸರ್ಕಾರವು ವಿದೇಶದಿಂದ ಅನಿವಾರ್ಯವಲ್ಲದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ. ಪಾಕಿಸ್ತಾನದ ಅಧಿಕಾರಿಗಳು ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರತಿನಿಧಿಗಳು ಬುಧವಾರ ದೋಹಾದಲ್ಲಿ ಸ್ಥಗಿತಗೊಂಡಿರುವ 6 ಶತಕೋಟಿ ವಿಸ್ತೃತ ನಿಧಿ ಸೌಲಭ್ಯ (EFF) ಕಾರ್ಯಕ್ರಮದ ಪುನರುಜ್ಜೀವನಕ್ಕಾಗಿ ಅನಿವಾರ್ಯವಲ್ಲದ ಆಮದುಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.

ಆಮದು ಪಾವತಿಗಳು ಮತ್ತು ಸಾಲ ಸೇವೆಯ ನಡುವೆ ಇತ್ತೀಚಿನ ವಾರಗಳಲ್ಲಿ ವಿದೇಶಿ ವಿನಿಮಯ ಮೀಸಲು ಕುಸಿಯುತ್ತಿರುವುದನ್ನು ಕಂಡ ಪಾಕಿಸ್ತಾನ, ನಗದು ಕೊರತೆಯ ಆರ್ಥಿಕತೆಗೆ ಅದರ ಪುನರುಜ್ಜೀವನವು ನಿರ್ಣಾಯಕವಾಗಿದೆ ಎಂದು ಬಿಸಿನೆಸ್ ರೆಕಾರ್ಡರ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಹೊಂದಿರುವ ವಿದೇಶಿ ವಿನಿಮಯ ಮೀಸಲು ಕಳೆದ ವಾರ 190 ಮಿಲಿಯನ್‌ನಿಂದ 10.31 ಶತಕೋಟಿಗೆ ಇಳಿದಿದೆ, ಜೂನ್ 2020 ರಿಂದ ಇದು ಕಡಿಮೆಯಾಗುತ್ತಲೇ ಬಂದಿದೆ. ಇದು 1.5 ತಿಂಗಳ ಆಮದು ಕವರ್‌ಗಿಂತ ಕಡಿಮೆ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ.

ಏರಿಕೆಯಾಗುತ್ತಿರುವ ಡಾಲರ್ ಬೆಲೆಯಿಂದ ದುರ್ಬಲಗೊಳ್ಳುತ್ತಿರುವ ರೂಪಾಯಿಯು ಪಾಕಿಸ್ತಾನಿಗಳಿಗೆ ಎರಡನೇ ಸುತ್ತಿನ ಹಣದುಬ್ಬರದ ಪ್ರಭಾವಕ್ಕೆ ತೆರೆದುಕೊಳ್ಳಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಇದು ಕೆಳ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಹಾನಿಯುಂಟುಮಾಡಹುದು ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಪ್ರಮುಖ ದುಬಾರಿ ಆಹಾರ ಪದಾರ್ಥಗಳು, ಐಷಾರಾಮಿ ವಸ್ತುಗಳು, ಕಾರುಗಳು ಮತ್ತು ಐಷಾರಾಮಿ ಮೊಬೈಲ್ ಫೋನ್‌ಗಳ ಆಮದನ್ನು ಪಾಕಿಸ್ತಾನ ನಿಷೇಧಿಸಿದೆ. ಹಾಗೆ ಮಾಡುವುದರಿಂದ ಪಾಕಿಸ್ತಾನದಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚುತ್ತದೆ. ಈ ಉತ್ಪನ್ನಗಳನ್ನು ಹೆಚ್ಚು ಜನರು ಖರೀದಿಸಿದರೆ, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸರ್ಕಾರ ಭಾವಿಸಿದೆ.

ಪಾಕಿಸ್ತಾನವು ಆಟೋಮೊಬೈಲ್‌ಗಳ ಪ್ರಮುಖ ಉತ್ಪಾದಕ ರಾಷ್ಟ್ರವಲ್ಲ. ಬಹಳ ಕಡಿಮೆ ಮತ್ತು ಸಣ್ಣ ಆಟೋಮೊಬೈಲ್ ಕಂಪನಿಗಳಿವೆ. ಈ ದೇಶದಲ್ಲಿ ಮಾರಾಟವಾಗುವ ಹೆಚ್ಚಿನ ವಾಹನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. BMW, Mercedes Benz, Audi ಮತ್ತು Suzuki ಕಾರುಗಳು ಹೆಚ್ಚು ಬಳಸಲ್ಪಟ್ಟ ಕಾರುಗಳಾಗಿವೆ.

ಸದ್ಯ ಇದಕ್ಕೆಲ್ಲ ಕಡಿವಾಣ ಹಾಕಲು ವಿದೇಶದಿಂದ ಪಾಕಿಸ್ತಾನಕ್ಕೆ ಕಾರು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದ್ದಾರೆ. ಮಾರುತಿ, ಟಾಟಾ ಸೇರಿದಂತೆ ಭಾರತದ ಹಲವು ಕಂಪನಿಗಳಲ್ಲಿ ತಯಾರಾದ ಕಾರುಗಳನ್ನು ಪ್ರಸ್ತುತ ಪಾಕಿಸ್ತಾನಕ್ಕೆ ರಫ್ತು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದು ಅಸಾಧ್ಯವಾಗಲಿದೆ.

ಬಳಸಿದ ವಾಹನ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಭಾರತದಿಂದ ಹೊಸ ವಾಹನಗಳಿಗಿಂತ ಮರುಮಾರಾಟಕ್ಕಾಗಿ ಬಳಸಲಾದ ವಾಹನಗಳನ್ನು ಭಾರತದಿಂದ ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿದೆ. ಈ ವಾಹನಗಳು ಪಾಕಿಸ್ತಾನದ ಜನರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಭಾರತದಲ್ಲಿನ ಡೀಲರ್ ಈ ಕಾರುಗಳನ್ನು ಭಾರತಕ್ಕಿಂತ ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

ಈ ದೇಶದಲ್ಲಿ ಉತ್ಪಾದನೆಯಾಗುವ ಕಾರುಗಳು ಮಾತ್ರ ಮಾರಾಟಕ್ಕಿರಲಿವೆ. ಇದೇ ಪರಿಸ್ಥಿತಿ ಹಲವು ತಿಂಗಳು ಮುಂದುವರಿದರೆ ಪಾಕಿಸ್ತಾನದಲ್ಲಿ ವಾಹನಗಳ ಕೊರತೆ ಹಾಗೂ ಬೆಲೆ ಏರಿಕೆಯಾಗುವ ಅಪಾಯವಿದೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಈಗ ಪರೋಕ್ಷವಾಗಿ ಭಾರತದ ಮೇಲೆ ಪರಿಣಾಮ ಬೀರುತ್ತಿದೆ. ಪಾಕಿಸ್ತಾನದ ರಫ್ತು ದಿಗ್ಬಂಧನದಿಂದ ಉಂಟಾದ ನಷ್ಟವನ್ನು ವಾಹನ ತಯಾರಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.