ತನ್ನಷ್ಟಕ್ಕೆ ತಾನೇ ಚಲಿಸಿ ನೆಲಕ್ಕುರುಳಿದ ಬೈಕ್, ನೋಡುಗರಲ್ಲಿ ಅಚ್ಚರಿಯುಂಟು ಮಾಡಿದ ವೀಡಿಯೊ
ಸುಸಜ್ಜಿತವಾದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಒಂದು ಇದ್ದಕ್ಕಿದ್ದಂತೆ ಸ್ವಲ್ಪ ದೂರ ಚಲಿಸಿ ಕೆಳಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೊವನ್ನು ಅಂಬರ್ ಜೇಟ್ಲಿ ಎಂಬ ಟ್ವಿಟರ್ ಪೇಜ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಘಟನೆ ಗುಜರಾತ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಅಂಬರ್ ಜೇಟ್ಲಿರವರ ಮೂಲಕವೇ ಈ ವೀಡಿಯೊ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ಇದುವರೆಗೂ 13,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ವೀಡಿಯೊವನ್ನು ನೋಡಿದವರಿಗೆ ಅಚ್ಚರಿಯಾಗದೇ ಇರಲಾರದು. ನಿಂತಿರುವ ಬೈಕ್ ಇದ್ದಕ್ಕಿದ್ದಂತೆ ಚಲಿಸಿ ಕೆಳಕ್ಕೆ ಬೀಳುತ್ತದೆ. ಈ ವೀಡಿಯೊ ದೆವ್ವ ಭೂತಗಳನ್ನು ನಂಬದವರೂ ಸಹ ನಂಬುವಂತೆ ಮಾಡುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಾಮಾನ್ಯವಾಗಿ ಇಳಿಜಾರು ಪ್ರದೇಶದಲ್ಲಿ ನಿಂತಿರುವ ದ್ವಿಚಕ್ರ ವಾಹನಗಳು ಈ ರೀತಿ ಜಾರಿ ಬೀಳುತ್ತವೆ. ಆದರೆ ಈ ಬೈಕ್ ನಿಲುಗಡೆಯಾಗಿದ್ದ ಸ್ಥಳವು ಸಮತಟ್ಟಿನಿಂದ ಕೂಡಿದೆ. ಅಂತಹ ಪ್ರದೇಶದಲ್ಲಿ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಲಾಗಿದ್ದ ಬೈಕ್ ನಿಧಾನವಾಗಿ ಚಲಿಸಿ ಕೆಳಕ್ಕೆ ಬಿದ್ದಿದೆ.

ಈ ಘಟನೆ ನಡೆದಾಗ ಆ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂಬುದು ಗಮನಾರ್ಹ. ಈ ಘಟನೆ ಮುಂಜಾನೆ 4 ಗಂಟೆಗೆ ನಡೆದಿದೆ ಎಂದು ಹೇಳಲಾಗಿದೆ. ಈ ವೀಡಿಯೊದಲ್ಲಿಯೂ ಅದೇ ಸಮಯವನ್ನು ಕಾಣಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೈಕಿಗೆ ಸೈಡ್ ಸ್ಟ್ಯಾಂಡ್ ಹಾಕಿದ್ದರಿಂದ ಬೈಕ್ ನೇರವಾಗಿ ಚಲಿಸುತ್ತಿಲ್ಲ. ಬದಲಿಗೆ ವಕ್ರವಾಗಿ ಚಲಿಸಿ, ನೆಲಕ್ಕೆ ಉರುಳಿದೆ. ಈ ಬೈಕ್ ಸ್ವಲ್ಪ ವೇಗವಾಗಿ ಚಲಿಸುವುದನ್ನು ಸಹ ನಾವು ವೀಡಿಯೊದಲ್ಲಿ ಕಾಣಬಹುದು.

ಇಡೀ ದೃಶ್ಯಗಳು ಆ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗದೇ ಹೋಗಿದ್ದರೆ ಯಾರೂ ಈ ಘಟನೆಯನ್ನು ನಂಬುತ್ತಿರಲಿಲ್ಲವೆಂದು ವೀಡಿಯೊವನ್ನು ಪೋಸ್ಟ್ ಮಾಡಿರುವ ಅಂಬರ್ ಜೇಟ್ಲಿ ಹೇಳಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಘಟನೆ ಸುತ್ತ ಮುತ್ತಲ ಪ್ರದೇಶದ ಜನರಲ್ಲಿ ಭಯ ಹುಟ್ಟಿಸಿದೆ. ಇದು ಅತೀಂದ್ರಿಯ ಶಕ್ತಿಗಳ ಕೆಲಸ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಪುರಾಣಗಳನ್ನು ಬಿಚ್ಚಿಡುತ್ತಿದ್ದಾರೆ.
ಆದರೆ ಬೈಕ್ ಯಾವ ಕಾರಣಕ್ಕೆ ಈ ರೀತಿ ಚಲಿಸಿತು ಎಂಬುದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಇಷ್ಟೆಲ್ಲಾ ಊಹಾಪೋಹಗಳಿಗೆ ಕಾರಣವಾಗಿರುವ ಈ ವೀಡಿಯೊ ಅವಧಿ ಇರುವುದು ಕೇವಲ 30 ಸೆಕೆಂಡುಗಳು ಮಾತ್ರ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ವೀಡಿಯೊ ನೋಡುಗರಲ್ಲಿ ಒಂದು ರೀತಿಯ ಭಯವನ್ನು ಸೃಷ್ಟಿಸಿರುವುದು ನಿಜ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ವೀಡಿಯೊ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.


Click it and Unblock the Notifications